ಹಗರಿಬೊಮ್ಮನಹಳ್ಳಿ: ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ನೂತನ ಜಿರಾಮ್‌ಜೀ ಮಸೂದೆಯಲ್ಲಿನ ದೋಷಗಳನ್ನು ವಿರೋಧಿಸಿ, ಮನರೇಗಾ ಕಾನೂನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಮರಬ್ಬಿಹಾಳು ಗ್ರಾ.ಪಂ.ಪಿಡಿಒ ಮೂಲಕ ದೇಶದ ಪ್ರಧಾನಿಗೆ ಮನವಿ ಸಲ್ಲಿಸಿದರು. ಈ ಕುರಿತು ಗ್ರಾಕೂಸ್ ಸಂಚಾಲಕಿ ಸಿ.ನಿಂಗಮ್ಮ ಮಾತನಾಡಿ, ಸತತ ೨೦ವರ್ಷಗಳಿಂದ ಗ್ರಾಮೀಣ ಕೂಲಿಕಾರ್ಮಿಕರಿಗೆ ಮನರೇಗಾದಡಿ ನಿರಂತರವಾಗಿ ಕೂಲಿ ಕೆಲಸವನ್ನು ನೀಡಿ ಆರ್ಥಿಕ ಭದ್ರೆತೆಯನ್ನು ಒದಗಿಸಲಾಗಿತ್ತು. ಈಗ ಜಿರಾಮ್‌ಜೀ ಎಂದು ಯೋಜನೆಯನ್ನು ಬದಲಿಸಿ ವಿವಿಧ ಕಾನೂನುಗಳನ್ನು ತಿದ್ದುಪಡಿ ಮಾಡಿರುವುದು ದೋಷದಿಂದ ಕೂಡಿದೆ. ಕೂಡಲೇ ಪುನ: ಇದನ್ನು ಮನರೇಗಾ ಎಂದು ಘೋಷಿಸಿ ಮೊದಲಿನಂತೆ ಕೂಲಿಕಾರ್ಮಿಕರಿಗೆ ಕೆಲಸವನ್ನು ನೀಡಬೇಕು. ರಾಜ್ಯದ ಎಲ್ಲಾ ಗ್ರಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ಮನರೇಗಾ ಮುಂದುವರೆಸುವAತೆ ಪ್ರಧಾನಿಯವರಿಗೆ ಪತ್ರ ಬರೆಯಬೇಕು. ಜಿರಾಮ್‌ಜೀ ಯೋಜನೆ ವಿರೋಧಿಸಿ ಗ್ರಾಕೂಸ್ ಸಂಘಟನೆಯಿAದ ತಾಲೂಕಿನ ಎಲ್ಲಾ ಗ್ರಾ.ಪಂ.ಕಚೇರಿಗಳ ಮುಂಭಾಗ ಪ್ರತಿಭಟನೆ ಮಾಡಲಾಗುವುದು. ಕೂಲಿಕಾರ್ಮಿಕರು ಆನ್‌ಲೈನ್ ಅರ್ಜಿ ಸಲ್ಲಿಸಿ ಕೆಲಸಕ್ಕೆ ಹೋಗುವುದು ಕಷ್ಟಕರವಾಗುತ್ತದೆ. ಜಿರಾಮ್‌ಜೀ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಮನರೇಗಾ ಯೋಜನೆಯನ್ನು ತೆಗೆಯುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಗ್ರಾಕೂಸ್ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿದರು.ಈ ಸಂಧರ್ಭದಲ್ಲಿ ಗ್ರಾಕೂಸ್‌ನ ಎ.ರತ್ನಮ್ಮ, ಸುಧಾ, ರೇಖಾ, ಶರಣಪ್ಪ, ಸುಮಿತ್ರಮ್ಮ, ಶಾಂತಮ್ಮ, ಮಲ್ಲಮ್ಮ, ಯಮನೂರಪ್ಪ, ಲಕ್ಷ್ಮಮ್ಮ, ಶಾಂತಮ್ಮ, ಬಾಗ್ಯಲಕ್ಷಿ, ಕೆಂಚಮ್ಮ, ದುರುಗೇಶ್, ನಾಗಮ್ಮ, ಮಂಜುನಾಥ ಇತರರಿದ್ದರು.