ಕನ್ನಡ ಪ್ರಭ ವಾರ್ತೆ ಶಿರಾ
ನಗರದ ಬೆಸ್ಕಾಂ ಕಚೇರಿ ಬಳಿ ನೂತನ ಹೇಮಾವತಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಅಂತರ್ಜಲ ರಕ್ಷಣೆಗೆ ಸುಮಾರು ೧೨೦ಕ್ಕೂ ಹೆಚ್ಚು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದ್ದರ ಫಲವಾಗಿ ಅಂತರ್ಜಲ ಹೆಚ್ಚಳವಾಗಿತ್ತು. ಆದರೆ ಕಳೆದ ವರ್ಷ ಮಳೆ ಬಾರದೆ ಇದ್ದ ಕಾರಣ ಕೊಳವೆ ಬಾವಿಗಳನ್ನು ರೈತರು ಹೆಚ್ಚು ಕೊರೆಸಿದ್ದರಿಂದ ತಾಲೂಕಿನಲ್ಲಿ ಅಂತರ್ಜಲ ಕಡಿಮೆಯಾಗಿದೆ. ಇದು ರೈತರಿಗೆ ಎಚ್ಚರಿಕೆ ಗಂಟೆಯಾಗಿದ್ದು, ಅಂರ್ತಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅಂತರ್ಜಲ ಹೆಚ್ಚಳಕ್ಕೆ ಭದ್ರ ಮೇಲ್ದಂಡೆ ಯೋಜನೆಯಡಿ ಸುಮಾರು ೬೦ ಕೋಟಿ ವೆಚ್ಚದಲ್ಲಿ ೬೨ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡುತ್ತಿದ್ದೇನೆ. ಬ್ಯಾರೇಜ್‌ಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮೂದ್, ಡಿವೈಎಸ್‌ಪಿ ಬಿ.ಕೆ.ಶೇಖರ್, ಪೌರಾಯುಕ್ತ ರುದ್ರೇಶ್, ನರೇಶ್ ಗೌಡ, ಗುಳಿಗೇನಹಳ್ಳಿ ನಾಗರಾಜು, ದಿಲೀಪ್ ಕುಮಾರ್, ಹೇಮಂತ್ ಗೌಡ, ಅಂಜನ್ ಕುಮಾರ್, ರಾಧಾಕೃಷ್ಣ, ನೂರುದ್ದೀನ್, ಬಾಂಬೆ ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು.