ನೋಡಲ್‌ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಕಲಬುರಗಿಯಲ್ಲಿ ನಡೆದ ಲೋಕಸಭಾ ಚುನಾವಣೆ ಕುರಿತು ಒಂದು ದಿನದ ತರಬೇತಿಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಬರುವ ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ, ಚುನಾವಣೆ ಕುರಿತು ಎಲ್ಲಾ ನೋಡಲ್ ಅಧಿಕಾರಿಗಳು ತಮಗೆ ನಿರ್ವಹಿಸಿದ್ದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾದ ಬಿ. ಫೌಜಿಯಾ ತರನ್ನುಮ್ ಒಂದು ದಿನದ ತರಬೇತಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳಿಗೆ ಒಂದು ದಿನ ತರಬೇತಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದಂತಹ ಎಲ್ಲಾ ಅಧಿಕಾರಿಗಳು ತಮಗೆ ವಹಿಸಿದ್ದ ಕರ್ತವ್ಯಗಳನ್ನು ಚಾಚುತಪ್ಪದೆ ಪಾಲಿಸಬೇಕು. ತಮಗೆ ಯಾವುದೇ ಸಮಸ್ಯೆಗಳು ಇದ್ದರು ಮೇಲ್ಲಾಧಿಕಾರಿಗೆ ಕೇಳಿ ತಿಳಿದುಕೊಳ್ಳಬೇಕೆಂದು ಅವರು ಹೇಳಿದರು.

ನೋಡಲ್ ಅಧಿಕಾರಿಗಳು ಕರ್ತವ್ಯದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಸಮಸ್ಯೆಗಳು ಇದ್ದರೆ ಪರಿಹರಿಸಲಾಗುವುದು ಎಂದರು.

ಭಾರತ ಚುನಾವಣೆ ಆಯೋಗ ರಾಷ್ಟ್ರೀಯ ತರಬೇತಿದಾರ ಡಾ. ಶಶಿಶೇಖರ ರೆಡ್ಡಿ ಚುನಾವಣೆಗೆ ಸಂಬಂಧಿಸಿದಂತಹ ಪ್ರಾತ್ಯಕ್ಷಿಕೆ ಮೂಲಕ (ಪಿಪಿಟಿ) ಮಾಹಿತಿಗಳ ಬಗ್ಗೆ ವಿವರಿಸಿದರು. ಭಾರತ ಸೆಕ್ಟರ್ ಅಧಿಕಾರಿಗಳು ಸಾಮಾನ್ಯ ಕರ್ತವ್ಯ ಮತ್ತು ಜವಾಬ್ದಾರಿಗಳು, ನೇಮಕವಾದ ಕೂಡಲೆ ನಿಮ್ಮ ಸೆಕ್ಟರ್‌ನ ಮಾರ್ಗಗಳು ಮತ್ತು ಸ್ಥಳಾಕೃತಿಗಳನ್ನು ತಿಳಿದುಕೊಳ್ಳಿ. ಸೆಕ್ಟರ್‌ನ ಕಡೆ ನಕಾಶೆ ಸಿದ್ಧಪಡಿಸಿ ಮತ್ತು ಯಾವಾಗಲೂ ಜೊತೆಗಿರಿಸಿಕೊಳ್ಳಿ. ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರ ಸೂಚನೆಗಳನ್ನು ಪಾಲಿಸಿ ಎಂದು ಮಾಹಿತಿ ನೀಡಿದರು.

ಚುನಾವಣೆ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣೆ ಕಾರ್ಯಗಳ ಸುಗಮ ನಿರ್ವಹಣೆ ಇವಿಎಂಗಳ ಕಾರ್ಯನಿರ್ವಹಣೆ, ಎಲ್ಲಾ ಅಧಿಕಾರಿಗಳ ಸಮನ್ವಯತೆ ಸಾಧಿಸುವುದು. ವ್ಯವಸಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಚುನಾವಣೆ ಫೋಷಣೆಯಾಗುವ ಮೊದಲಿನಿಂದ ಪ್ರಾರಂಭವಾಗಿ ಫಲಿತಾಂಶ ಫೋಷಣೆಯಾಗುವವರೆಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಇದರ ಮಾಹಿತಿಯನ್ನು ತಿಳಿಸಿದರು.

ಹೊಸ ಮತಗಟ್ಟೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು. ಮತಗಟ್ಟೆಗಳ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಪಕ್ಷಗಳ ಕಚೇರಿಗಳಿಲ್ಲದಿರುವುದು ಅಥವಾ ಇದ್ದರೆ, ಕಾನೂನುಬಾಹಿರ ಕೃತ್ಯಗಳನ್ನು ತಡೆಗಟ್ಟಿ, ಮತಗಟ್ಟೆ ಅಧಿಕಾರಿಗಳು ನಮೂನೆ 12 ಅನ್ನು ವಿತರಿಸುವುದನ್ನು ಖಾತ್ರಿ ಮಾಡಿಕೊಳ್ಳುಬೇಕೆಂದರು.

ಮತಗಟ್ಟೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವರದಿ ಸಲ್ಲಿಸುವುದು, ವಿದ್ಯುತ್ ಸಂಪರ್ಕ, ಬದಲಿ ವಿದ್ಯುತ್ ವ್ಯವಸ್ಥೆ, ದೂರವಾಣಿ ಸೌಲಭ್ಯ, ಮೊಬೈಲ್ ನೆಟ್‍ವರ್ಕ್ ಇತ್ಯಾದಿಗಳಿಗೆ ಸಂಬಂಧಿಸಿದ ಹಾಗೂ ಚುನಾವಣೆಗೆ ಸಂಬಂಧಿಸಿ ಎಲ್ಲಾ ಮಾಹಿತಿಯನ್ನು ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಅಡ್ಡೂರು ಶ್ರೀನಿವಾಸಲು, ಸಿಇಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಸಹಾಯಕ ಆಯುಕ್ತ ಮಮತಾಕುಮಾರಿ, ಸೇಡಂ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this article