ಅಲೆಮಾರಿ ಸಮುದಾಯದಿಂದ ಧರಣಿ

KannadaprabhaNewsNetwork |  
Published : Oct 09, 2025, 02:01 AM IST
ಪೋಟೊ8.14: ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಅಲೆಮಾರಿ ಸಮುದಾಯದ ಅಭಿವೃದ್ದಿಗಾಗಿ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಸಂಘರ್ಷ ಸಮಿತಿ ಹಾಗೂ ಅಲೆಮಾರಿ ಅಭಿವೃದ್ದಿ ಸಂಘದ ವತಿಯಿಂದ ಧರಣಿ ನಡೆಸಲಾಯಿತು. | Kannada Prabha

ಸಾರಾಂಶ

ಅಧಿಕಾರದ ಲಾಲಸೆಯಿಂದ ಮೀಸಲಾತಿ ರಾಜಕೀಯ ದಾಳವಾಗಿಸಿಕೊಂಡಿದೆ

ಕೊಪ್ಪಳ: ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಸಂಘರ್ಷ ಸಮಿತಿ ಹಾಗೂ ಅಲೆಮಾರಿ ಅಭಿವೃದ್ಧಿ ಸಂಘದಿಂದ ಧರಣಿ ನಡೆಸಲಾಯಿತು.

ಅಲೆಮಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸಂಜಯ ದಾಸ್‌ ಮಾತನಾಡಿ, 59 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಯವರು ನೆಲೆ ಇಲ್ಲದೆ, ಕಾಡಿನಲ್ಲಿ, ರಸ್ತೆಬದಿಗಳಲ್ಲಿ ವಾಸಿಸಲು ಸೂರಿಲ್ಲದೆ, ಪ್ಲಾಸ್ಟಿಕ್ ಶೆಡ್ಡು, ಜೋಪಡಿ, ಗುಡಿಸಲುಗಳಲ್ಲಿ ಚಿಂದಿ ಬಟ್ಟೆಯಲ್ಲಿ ಹಗಲು ವೇಷ ಧರಿಸಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದು ಇವರನ್ನು ನೋಡಿಯು ಸರ್ಕಾರ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ, ಅಧಿಕಾರದ ಲಾಲಸೆಯಿಂದ ಮೀಸಲಾತಿ ರಾಜಕೀಯ ದಾಳವಾಗಿಸಿಕೊಂಡಿದೆ ಎಂದರು.

ಪರಿಶಿಷ್ಟ ಎಕೆಎಡಿ.. ಮತ್ತು ಎಎ ಮೂಲ ಜಾತಿಗಳನ್ನು ಸಹ ಗುರುತಿಸಿ ದಾಖಲಿಸದೆ ಬೇಕಾಬಿಟ್ಟಿ ಮೀಸಲಾತಿ ವರ್ಗೀಕರಿಸಿ ಕೈ ತೊಳೆದುಕೊಂಡಿದೆ ಎಂದ ಅವರು, 59 ಅಲೆಮಾರಿ ಜಾತಿಗಳಿಗೆ ಕೂಡಲೇ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳ ಮೂಲ ಜಾತಿ ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು, ಪಜಾ,ಪಪಂ ವರ್ಗದ ಮೀಸಲಾತಿ ಶೇ.30 ಕ್ಕೆ ಹೆಚ್ಚಿಸಬೇಕು.ಪಜಾ,ಪಪಂ ವರ್ಗಗಳ ಮೀಸಲಾತಿ ಪಟ್ಟಿಗೆ ಮತ್ತಷ್ಟು ಜಾತಿ ಸೇರಿಸುವ ರಾಜಕೀಯ ಹುನ್ನಾರ ಕೈಬೀಡಬೇಕು. ಪಜಾಪಪಂ ವರ್ಗ ಮೀಸಲಾತಿ ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರಿಸಿ ಮೀಸಲಾತಿ ರಕ್ಷಿಬೇಕು.ಖಾಸಗಿ ಔದ್ಯೋಗಿಕ ವಲಯದಲ್ಲಿ ಮೀಸಲಾತಿ ಜಾರಿಯಾಗಲಿ.ಅಭಿವೃದ್ಧಿಗೆ ಮೀಸಲಿಟ್ಟ SCSP/TSP ಹಣ ರಾಜ್ಯ ಸರ್ಕಾರ 5 ಗ್ಯಾರಂಟಿ, ರಸ್ತೆ, ಮೇಲುಸೇತುವೆಗೆ ಬಳಸಿ ದುರುಪಯೋಗಪಡಿಸಿಕೊಂಡ ಹಣ ಹಿಂದುರುಗಿಸಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಬಳಸಬೇಕು, ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ಮಾಡಿ ದಲಿತರಿಗೆ ಮಂಜೂರಾಗಿ ಪರಭಾರೆಯಾಗಿರುವ ಜಮೀನು ಹಿಂತಿರುಗಿಸುವಂತಾಗಲಿ ರಿಯಲ್ ಎಸ್ಟೇಟ್ ದಂಧೆಯಾಗಿರುವ ಸಿ.ಆರ್.ಇ ಸೆಲ್‌ನ್ನು ಪರಿಷ್ಕರಿಸಿ ದಲಿತರ ಮೇಲಿನ ದೌರ್ಜನ್ಯ ನಿಗ್ರಹಿಸಲಿ. ಕಂದಾಯ ಇಲಾಖೆಯಲ್ಲಿ 10 ವರ್ಷಗಳಿಂದ ಕರ್ತವ್ಯ ನನಿರ್ವಹಿಸುತ್ತಿರುವ 12 ಸಾವಿರ ಗ್ರಾಮ ಸಹಾಯಕರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದಪ್ಪ ಕಲಲಾಬಂಡಿ, ಯಮನೂರ ಮಗಳದಾಳ, ಶಿವಪುತ್ರಪ್ಪ ಹಂಚಿನಾಳ, ಸಂಜಯ ದಾಸ, ಮರಿಸ್ವಾಮಿ ಕನಕಗಿರಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು