ಚಟುವಟಿಕೆ ನಡೆಸದ ಎಂಡಿಎ ಸಿ.ಎ.ನಿವೇಶನ ರದ್ದು: ಕೆ.ಮರೀಗೌಡ

KannadaprabhaNewsNetwork |  
Published : Jun 20, 2024, 01:03 AM IST
39 | Kannada Prabha

ಸಾರಾಂಶ

ಕೋಟ್ಯಂತರ ರು. ಬೆಲೆ ಬಾಳುವ ಪ್ರಾಧಿಕಾರದ ನಿವೇಶನವನ್ನು ಗೋಕುಲಂನಲ್ಲಿ ಟ್ರಸ್ಟ್‌ ಒಂದು (10 ಎಕರೆ 26 ಗುಂಟೆ) ಗುತ್ತಿಗೆ ಪಡೆದು ಹಲವು ವರ್ಷಗಳಾದರೂ ಆ ಜಾಗದಲ್ಲಿ ಏನು ಮಾಡಿಲ್ಲ. ಸಿದ್ಧಾರ್ಥ ಬಡಾವಣೆಯಲ್ಲಿ ವಿದ್ಯಾಶಂಕರ ಟ್ರಸ್ಟ್ ಸಹ ಗುತ್ತಿಗೆ ಪಡೆದ ಜಾಗ ಹಾಗೆಯೇ ಇದೆ. ಇಂತಹ ನಿವೇಶನಗಳನ್ನು ಸರ್ಕಾರದ ಗಮನಕ್ಕೆ ತಂದು ಯಾವುದೇ ಒತ್ತಡಕ್ಕೆ ಮಣಿಯದೇ ರದ್ದು ಮಾಡಿ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ.ನಿವೇಶನಗಳನ್ನು ರಿಯಾಯಿತಿ ದರದಲ್ಲಿ 30 ವರ್ಷ, 90 ವರ್ಷಗಳಿಗೆ ಗುತ್ತಿಗೆ ಪಡೆದು ಆ ಜಾಗದಲ್ಲಿ ಯಾವುದೇ ಚಟುವಟಿಕೆ ನಡೆಸದ ಸಂಘ, ಸಂಸ್ಥೆ, ಟ್ರಸ್ಟ್‌ಗಳ ನಿವೇಶನಗಳನ್ನು ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಎಂಡಿಎ ಅಧ್ಯಕ್ಷ ಕೆ.ಮರೀಗೌಡ ಎಚ್ಚರಿಸಿದರು.

ಎಂಡಿಎ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸಿದ್ಧಾರ್ಥನಗರದಲ್ಲಿರುವ ಸಿ.ಐ.ಟಿ.ಬಿ. ಛತ್ರ, ಭರತ್ ನಗರ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಬನ್ನಿಮಂಟಪ, ಬೆಲವತ್ತ, ಶ್ಯಾದನಹಳ್ಳಿಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.

ಕೋಟ್ಯಂತರ ರು. ಬೆಲೆ ಬಾಳುವ ಪ್ರಾಧಿಕಾರದ ನಿವೇಶನವನ್ನು ಗೋಕುಲಂನಲ್ಲಿ ಟ್ರಸ್ಟ್‌ ಒಂದು (10 ಎಕರೆ 26 ಗುಂಟೆ) ಗುತ್ತಿಗೆ ಪಡೆದು ಹಲವು ವರ್ಷಗಳಾದರೂ ಆ ಜಾಗದಲ್ಲಿ ಏನು ಮಾಡಿಲ್ಲ. ಸಿದ್ಧಾರ್ಥ ಬಡಾವಣೆಯಲ್ಲಿ ವಿದ್ಯಾಶಂಕರ ಟ್ರಸ್ಟ್ ಸಹ ಗುತ್ತಿಗೆ ಪಡೆದ ಜಾಗ ಹಾಗೆಯೇ ಇದೆ. ಇಂತಹ ನಿವೇಶನಗಳನ್ನು ಸರ್ಕಾರದ ಗಮನಕ್ಕೆ ತಂದು ಯಾವುದೇ ಒತ್ತಡಕ್ಕೆ ಮಣಿಯದೇ ರದ್ದು ಮಾಡಿ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದ ಅವರು, ಭರತನಗರದಲ್ಲಿ ಒಳಚರಂಡಿ ಸಮಸ್ಯೆ ಇದೆ. ಪಪಂ ಹಾಗೂ ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಿದ್ಧಾರ್ಥನಗರದಲ್ಲಿರುವ ಸಿ.ಐ.ಟಿ.ಬಿ. ಛತ್ರದ ಜಾಗ 1 ಎಕರೆ 17 ಗುಂಟೆ ಇದ್ದು, ಈಗಿರುವ ಹಳೆ ಛತ್ರವನ್ನು ಒಡೆದು ಹಾಕಿ 5 ಕೋಟಿ ರು. ವೆಚ್ಚದಲ್ಲಿ ಅದೇ ಜಾಗದಲ್ಲಿ ಸುಸಜ್ಜಿತ ಛತ್ರ ನಿರ್ಮಿಸಲಾಗುವುದು. ಛತ್ರದ ಸುತ್ತ ಮಳಿಗೆಗಳನ್ನು ನಿರ್ಮಿಸಿ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ರಮ್ಮನಹಳ್ಳಿಯಲ್ಲಿ ಒಳಚರಂಡಿ ಇದ್ದರೂ ಸಹ ಸೇಫ್ಟಿ ಟ್ಯಾಂಕ್ ಇಲ್ಲದೆ ತೊಂದರೆಯಾಗಿದೆ. 1.70 ಕೋಟಿ ರು. ವೆಚ್ಚದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುವುದು. ವಾಲ್ಮೀಕಿ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು. ಕಾಳಿಸಿದ್ದನಹುಂಡಿ ಕೆರೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಎಂಡಿಎ ಎಸ್ಇ ಧರಣೇಂದ್ರ, ಕಾರ್ಯದರ್ಶಿ ಶೇಖರ್, ಇಇ ನಾಗೇಶ್, ತಹಸೀಲ್ದಾರ್ ಮೋಹನಕುಮಾರಿ, ಟಿಪಿಎಂ ಶಿವರಾಂ, ಎಇಇ ಶಿವಣ್ಣ, ರೂಪಶ್ರೀ, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್, ಗಂಗಾಧರ್, ಮುಖಂಡರಾದ ಬಿ. ರವಿ, ಪ್ರಕಾಶ್, ಪೈ. ಶಿವಣ್ಣ, ಪೈ. ಚಿಕ್ಕೀರಿ, ನಾಗರಾಜ, ಜೈಸ್ವಾಮಿ, ಚಿಕ್ಕಮಹಾದೇವ, ಮಹಾದೇವ, ಕೃಷ್ಣಪ್ಪ, ಶಿವಣ್ಣ, ಕೃಷ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!