ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನೊಣವಿನಕೆರೆ ಮಹಿಳೆಯರ ಒತ್ತಾಯ

KannadaprabhaNewsNetwork | Published : Apr 29, 2024 1:38 AM

ಸಾರಾಂಶ

ತಾಲೂಕಿನ ನೊಣವಿನಕೆರೆಯ ವಿನಾಯಕ ಮಂದಿರದ ನಿವಾಸಿಗಳು ನಮಗೆ ಕಳೆದ ಹಲವಾರು ತಿಂಗಳಿನಿಂದಲೂ ಕುಡಿಯಲು ನೀರಿಲ್ಲದ ಪರಿತಪಿಸುವಂತಾಗಿದ್ದು ನಮಗೆ ಕೂಡಲೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪಿಡಿಒ ಉಮೇಶಗೆ ಮನವಿ ಪತ್ರ ಸಲ್ಲಿಸಿದರು

ತಿಪಟೂರು: ತಾಲೂಕಿನ ನೊಣವಿನಕೆರೆಯ ವಿನಾಯಕ ಮಂದಿರದ ನಿವಾಸಿಗಳು ನಮಗೆ ಕಳೆದ ಹಲವಾರು ತಿಂಗಳಿನಿಂದಲೂ ಕುಡಿಯಲು ನೀರಿಲ್ಲದ ಪರಿತಪಿಸುವಂತಾಗಿದ್ದು ನಮಗೆ ಕೂಡಲೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪಿಡಿಒ ಉಮೇಶಗೆ ಮನವಿ ಪತ್ರ ಸಲ್ಲಿಸಿದರು. ನಮ್ಮ ವಿನಾಯಕ ಮಂದಿರದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮನೆಗಳಿದ್ದು ಕಳೆದ ಆರು ತಿಂಗಳಿನಿಂದಲೂ ನೀರಿಗಾಗಿ ತತ್ವಾರ ಉಂಟಾಗಿದೆ. ನೀರಿನ ಪೈಪ್‌ಗಳಿಗೆ ಕಂಟ್ರೋಲರ್ ಅಳವಡಿಸಿದರೂ ನಮ್ಮ ಬಡಾವಣೆಯ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಕೆಲವರು ಕಾನೂನು ಬಾಹಿರವಾಗಿ ನೀರಿನ ಸಂಪುಗಳಿಗೆ ಕದ್ದು ನೇರ ನಲ್ಲಿ ಸಂಪರ್ಕ ಕಲ್ಪಿಸಿಕೊಂಡಿರುವುದರಿಂದ ಇನ್ನುಳಿದವರಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ನೀರಿಗಾಗಿ ಮಕ್ಕಳು, ಮಹಿಳೆಯರು ಬೀದಿ ಬೀದಿ ಅಲೆಯುವಂತಾಗಿದೆ. ನಾಲ್ಕು ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಓವರ್ ಹೆಡ್ ಟ್ಯಾಂಕ್ ಇದ್ದರೂ ನಮ್ಮ ಬಡಾವಣೆಗೆ ನೀರು ಬರುತ್ತಿಲ್ಲ. ಪ್ರತಿ ವರ್ಷವೂ ನೀರಿಗಾಗಿ ಅಲೆಯುವಂತಾಗಿದೆ. ಈ ಬಗ್ಗೆ ಗ್ರಾ.ಪಂ ಅಧ್ಯಕ್ಷರಿಗೆ ಪ್ರತಿವರ್ಷ ಮನವಿ ಪತ್ರ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ನಮಗೆ ಶಾಶ್ವತವಾಗಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬಂದು ಅಕ್ರಮವಾಗಿ ನಲ್ಲಿಗಳ ಸಂಕರ್ಪವಿಟ್ಟುಕೊಂಡಿರುವರ ಬಗ್ಗೆ ಪರಿಶೀಲನೆ ನಡೆಸಬೇಕು. ಹಣ ಕೊಟ್ಟವರಿಗೆ ನೀರು ಬಿಟ್ಟು ನಂತರ ಉಳಿದವರಿಗೆ ನೀರು ಸರಬರಾಜು ಮಾಡುತ್ತಿರುವ ಕಾರಣ ಪ್ರತಿನಿತ್ಯ ನೀರಿಗಾಗಿ ಜಗಳವಾಡುವ ಸನ್ನಿವೇಶ ಉಂಟಾಗಿದ್ದು ಇದಕ್ಕೆ ಗ್ರಾ.ಪಂ ಅಧಿಕಾರಿಗಳೇ ಕಾರಣರಾಗಿದ್ದಾರೆ. ಬೇಸಿಗೆ ತೀವ್ರತೆ ಹೆಚ್ಚಾಗಿರುವ ಕಾರಣ ನೀರಿನ ಅವಶ್ಯಕತೆ ಇದೆ. ದಯವಿಟ್ಟು ನಮಗೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ನಿವಾಸಿಗಳ ಪರವಾಗಿ ರಾಧಾ, ಸ್ವರ್ಣ, ಮಂಜುಳಾ, ವಸಂತಕುಮಾರಿ ಮತ್ತಿತರ ಮಹಿಳೆಯರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.ಫೋಟೋ ೨೮-ಟಿಪಿಟಿ೪ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :

ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಮಹಿಳೆಯರು.

Share this article