ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಮಲೇಬೆನ್ನೂರು ಮುಖ್ಯ ರಸ್ತೆಯಲ್ಲಿ ರೋಡ್‌ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾರವರ ಪರ ಮತಯಾಚನೆ ಮಾಡಿ ಮಾತನಾಡಿ, ಇಂದಿನ ಸಂಸದರಿಗೆ ಕೊಂಡಜ್ಜಿ ಕೆರೆಗೆ ನೀರು ಎಲ್ಲಿಂದ ಬರುತ್ತೆ ಎಂಬುದೇ ತಿಳಿದಿಲ್ಲ, ಗುಟ್ಕಾ, ಕ್ಯಾನ್ಸರ್ ನೀಡಿ ಯುವಕರ ಆರೋಗ್ಯದ ಜತೆ ಆಟವಾಡುತ್ತಾರೆ. ಪತ್ನಿ ಪ್ರಭಾ, ಅಂಥಹ ಯುವಜನರಿಗೆ ಚಿಕಿತ್ಸೆ ನೀಡಲು ಶಿಬಿರ ಆಯೋಜನೆ ಮಾಡಲಿದ್ದಾರೆ. ಎಂಪಿಯವರು ದೆಹಲಿಯಲ್ಲಿ ಬಂಗಲೆ ಮಾಡಿಕೊಂಡಿದ್ದಾರೆ. ಗುಡ್ಡ ಬಗೆದಿದ್ದಾರೆ, ಆದ್ದರಿಂದ ವರಮಾನ ಹೆಚ್ಚಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಐದು ಗ್ಯಾರಂಟಿ ಯೋಜನೆ ಜತೆ ಮತ್ತೆ ೨೫ ಯೋಜನೆ ಪಕ್ಷ ನೀಡಿದೆ. ಜನರಿಗೆ ಮುಖ್ಯವಾಗಿ ವಸತಿ, ಬಟ್ಟೆ, ನೀರು ಮತ್ತು ಆಹಾರ ನೀಡಲು ಆದ್ಯತೆ ನೀಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ನಿಮ್ಮ ಜತೆ ಇರುತ್ತೇನೆ ಎಂದರು.ಮುಖಂಡ ಶ್ರೀನಿವಾಸ್ ಮಾತನಾಡಿ, ಹರಿಹರಕ್ಕೆ ಮೆಡಿಕಲ್ ಕಾಲೇಜು ಮಂಜೂರು ವಿಷಯ ಮುಗಿದ ಅಧ್ಯಾಯವಾಗಿದ್ದು ಮಂಜೂರು ಮಾಡುವ ಅಧಿಕಾರ ಕೇಂದ್ರಕ್ಕಿದೆ. ಮತ್ತೆ ಮಾಜಿ ಶಾಸಕ ಶಿವಶಂಕರ್ ಮೆಡಿಕಲ್ ಕಾಲೇಜು ವಿಷಯ ಪ್ರಸ್ತಾಪ ಮಾಡುತ್ತಿರುವುದು ಒಣ ಟೀಕೆಯಾಗಿದೆ. ಆ ಕಾಲೇಜು ಬದಲಿಗೆ ಜಯದೇವ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ಮಂಜೂರು ವಿಷಯವು ಜಿಲ್ಲಾಧಿಕಾರಿ ತಂಡ ಭೇಟಿಯಾದಾಗ ಚರ್ಚೆಯಾಗಿದೆ ಎಂದರು.