ಅಮರನಾಥ ಪಾಟೀಲ್ ಪರ ಮತಯಾಚನೆ

KannadaprabhaNewsNetwork |  
Published : May 29, 2024, 12:59 AM IST
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಪ್ರಚಾರ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಸಾಯಬಣ್ಣ ತಳವಾರ ಮಾತನಾಡಿದರು.  | Kannada Prabha

ಸಾರಾಂಶ

ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರಕ್ಕಾಗಿ ನಿಯೊಜನೆಗೊಂಡ ಪ್ರಮುಖರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರಕ್ಕಾಗಿ ನಿಯೊಜನೆಗೊಂಡ ಪ್ರಮುಖರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ನಿರುದ್ಯೊಗಿ ವಿದ್ಯಾವಂತ ಯುವಕರಿಗೆ ಉದ್ಯೊಗ ಸ್ವಯಂ ಉದ್ಯೊಗಕ್ಕಾಗಿ ಕೌಶಲ್ಯ ತರಬೇತಿಗಾಗಿ ಪ್ರೋತ್ಸಾಹ ಹಾಗೂ ಈ ಭಾಗದ ಶಿಕ್ಷಕರ ಮತ್ತು ಪದವಿಧರರ ಕಲ್ಯಾಣಕ್ಕಾಗಿ ಹಾಗೂ ಇಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವಿವಿಧ ಸ್ತರಗಳ ಹುದ್ದೇಗಳನ್ನು ನಿಭಾಯಿಸುವ ಮೂಲಕ ಅಮರನಾಥ ಪಾಟೀಲ್ ಅವರು ಶ್ರಮಿಸಿದ್ದಾರೆ. ನಮ್ಮ ಭಾಗದ ಎಲ್ಲರ ಧ್ವನಿಯಾಗಿ ಕೆಲಸ ಮಾಡುವ ಮನಸ್ಸನ್ನು ಹೊಂದಿರುವಂತಹ ನಾಯಕರು ಆಯ್ಕೆಯಾದರೆ ಮಾತ್ರ ನಮ್ಮ ಮಕ್ಕಳು ಬಿಸಿ ಊಟಕ್ಕಾಗಿ ಎರಡೆರಡು ಕಿಲೊಮೀಟರ್ ನಡೆಯುವಂತ ಪರಿಸ್ಥಿತಿ ಮುಂದೆ ಬರುವುದಿಲ್ಲಾ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಅಭ್ಯರ್ಥಿ ಮಾಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ತಾಪುರ ಉಸ್ತುವಾರಿ ಶರಣಪ್ಪ ತಳವಾರ, ಮುಖಂಡರಾದ ವಿಠಲ ನಾಯಕ, ಬಸವರಾಜ ಬೆಣ್ಣೂರಕರ್, ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ರವಿ ನಾಯಕ, ಶರಣಗೌಡ ಚಾಮನೂರ, ಪರುತಪ್ಪ ಕರದಳ್ಳಿ, ಭೀಮರಾಯ ದೊರೆ, ಕಾಂತುಗೌಡ ಬೊಮ್ಮನಳ್ಳಿ, ಶಿವಶಂಕರ ಕಾಶೆಟ್ಟಿ, ಅಶೋಕ ಹರವಾಳ, ಈರಣ್ಣ ಮಲ್ಕಂಡಿ, ಮೇಘನಾಥ ಚವ್ವಾಣ, ರವಿ ಪಡ್ಲಾ, ಬಸವರಾಜ ಹಾದಿಮನಿ ಭಿಮರಾಯ ನೀಳದ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು