ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಯುವರಾಜ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಜ್ಞಾನವಾಹಿನಿ ಸಾಂಸ್ಕೃತಿ, ಕ್ರೀಡೆ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದುಡಿಯಲು ಯಾರು ಸಿದ್ಧರಿಲ್ಲ. ಕೌಶಲ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಟ್ಟು ಕೆಲಸ ಕೊಟ್ಟರೂ ಯುವ ಸಮೂಹ ಮಾಡುತ್ತಿಲ್ಲ. ಪೀಣ್ಯದ 10 ಸಾವಿರ ಕೈಗಾರಿಕೆಗಳಲ್ಲಿ 7 ಸಾವಿರ ಕೈಗಾರಿಕೆಗಳು ಕೆಲಸ ಕಲಿತು ಸ್ವಂತಕ್ಕೆ ತೆರೆದಿರುವ ಕೈಗಾರಿಕೆಗಳಾಗಿವೆ. ಅಲ್ಲಿ 10 ರಿಂದ 12 ಲಕ್ಷ ಉದ್ಯೋಗ ಖಾಲಿ ಇದೆ. ಆದರೆ ಅರ್ಜಿ ಹಾಕಲು ನಮ್ಮ ಯುವಜನ ತಯಾರಿಲ್ಲ ಎಂದರು.ಇತ್ತೀಚಿನ ಯುವ ಸಮೂಹದಲ್ಲಿ ಸೋಮಾರಿತನ, ಆಲಸ್ಯವಿದೆ. ಸ್ಪಷ್ಟವಾದ ಗುರಿ ಹಾಗೂ ಕೌಶಲ್ಯ ಕಾಣುತ್ತಿಲ್ಲ. ಇದು ದೇಶದ ಪ್ರಗತಿಗೆ ಮಾರಕ. ಕೌಶಲ್ಯ ತಬೇತಿ ಕೇಂದ್ರದಿಂದ ಸ್ಟೇಫಂಡ್ ಕೊಟ್ಟು ಕೆಲಸ ಕೊಡುತ್ತೇವೆ ಎಂದು ಕರೆದಾಗ ರಾಜ್ಯಾದ್ಯಂತ ಕೇವಲ 1,450 ಮಂದಿ ಮಾತ್ರ ಅರ್ಜಿ ಹಾಕಿದರು. ಆದರೆ, ಅದರಲ್ಲಿ 412 ಮಂದಿ ಮಾತ್ರ ಬಂದರು. ಆದರೆ, ಸರ್ಕಾರ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ಕೊಡುತ್ತೇವೆ ಎಂದಾಗ ಅದಕ್ಕೆ ಅರ್ಜಿ ಹಾಕಿದ್ದು 2 ಲಕ್ಷಕ್ಕೂ ಅಧಿಕ ಮಂದಿ ಎಂದು ಬೇಸರಿಸಿದರು.
ವಿಕೇಂಡ್ ಕಲ್ಚರ್ ನಮ್ಮಲ್ಲಿ ಈಗ ಶುರುವಾಗಿದೆ. ಆದರೆ, ಅಮೆರಿಕಾದಲ್ಲಿ ಬಹಳ ಹಿಂದಿನ ಕಾಲದಿಂದಲೇ ಶುರುವಾಗಿದೆ. ಸಮುದ್ರದ ತೀರಗಳಲ್ಲಿ ಕುಳಿತುಕೊಂಡು ಕುಡಿಯುವುದು, ಡ್ರಗ್ಸ್ ತೆಗೆದುಕೊಳ್ಳುವುದು ಸೇರಿದಂತೆ ಅನೇಕ ಅಕ್ರಮ ಕೆಲಸಗಳಲ್ಲಿ ತೊಡಗಿದ್ದಾರೆ ಎಂದರು.
ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹಾದೇವಮೂರ್ತಿ, ಆಡಳಿತಾಧಿಕಾರಿ ಪ್ರೊ. ಎಚ್.ಎಸ್. ಜಯಂತ್, ಪ್ರೊ. ರೂಬಿ ಸ್ಟೆಲೆಸಿನ, ಪ್ರೊ.ಸಿ.ಡಿ. ಪರಶುರಾಮ್ ಇದ್ದರು.