ಗದಗ: ಖಾದಿ ನಗರಕ್ಕೆ ಸಿಹಿ ನೀರಿನ ವ್ಯವಸ್ಥೆ ಕಲ್ಪಿಸುವುದು, ಸಿಸಿ ರಸ್ತೆ ಕಾಮಗಾರಿ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಶಾಸಕ ಸಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ನರಸಾಪುರ ಗ್ರಾಮದ ಖಾದಿ ನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನಕ್ಕೆ ಶಾಸಕ ಸಿ.ಸಿ. ಪಾಟೀಲ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ಖಾದಿ ನಗರದ ಅಂಗನವಾಡಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಚಿಕ್ಕಮಕ್ಕಳು, ವೃದ್ಧರು ಸಂಚರಿಸಲು ದುಸ್ತರವಾಗಿದೆ. ಅಲ್ಲದೇ, ಖಾದಿ ನಗರದ ಒಳಬಡಾವಣೆಯಲ್ಲೂ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಿರ್ಮಾಣವಾಗಿರುವ ಸಿಸಿ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣವಾಗಬೇಕಿದೆ. ಜತೆಗೆ ಖಾದಿ ನಗರದ ಸಮೀಪದಲ್ಲಿನ ಬುದ್ಧಿಮಾಂದ್ಯ ಶಾಲೆಯ ಎದುರಿನ ಬಡಾವಣೆಯಲ್ಲಿ ಸಮರ್ಪಕ ರಸ್ತೆ, ಒಳಚರಂಡಿ ವ್ಯವಸ್ಥಿತವಾಗಿಲ್ಲ. ಬೀದಿದೀಪಗಳು ವ್ಯವಸ್ಥೆ ಸಮರ್ಪಕವಾಗಿಲ್ಲ. ಆದ್ದರಿಂದ ಮೂಲ ಸೌಲಭ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ ಅವರು, ಖಾದಿ ನಗರಕ್ಕೆ ಸಿಹಿ ನೀರಿನ ವ್ಯವಸ್ಥೆ ಕಲ್ಪಿಸುವುದು, ಸಿಸಿ ರಸ್ತೆ ಕಾಮಗಾರಿ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಉಮೇಶಗೌಡ ಪಾಟೀಲ, ವಸಂತ ಮೇಟಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಲ್ಲಯ್ಯ ಹಿರೇಮಠ, ಮುಖಂಡರಾದ ಪ್ರಕಾಶ ಕೆರಕನವರ, ಬಸವರಾಜ ಕಿತ್ತೂರ, ರಾಜು ಮಲಗಾವಿ, ರಾಜು ವಿಭೂತಿಮಠ, ಮಲ್ಲಿಕಾರ್ಜುನ ದೊಡ್ಡಮನಿ, ಹನುಮಂತ ಭಾವಿಕಟ್ಟಿ, ವೀರಬಸಯ್ಯ ವಿರಕ್ತಮಠ, ಪಿಡಿಒ ಸುರೇಶ ಲಮಾಣಿ ಸೇರಿ ಹಲವರು ಇದ್ದರು.8ರಂದು ನೇರ ಸಂದರ್ಶನ


ಗದಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನೇರ ಸಂದರ್ಶನವನ್ನು ಆ. 8ರಂದು ಬೆಳಗ್ಗೆ 10ಕ್ಕೆ ನಗರದ ಟಾಟಾ ಕ್ಯಾಪಿಟಲ್, ಯಮಹಾ ಶೋರೂಂ ಎದುರುಗಡೆ ಹೊಸ ಬಸ್ ನಿಲ್ದಾಣ ರೋಡ್ ಹತ್ತಿರ ಹಮ್ಮಿಕೊಳ್ಳಲಾಗಿದೆ.ನೇರ ಸಂದರ್ಶನದಲ್ಲಿ ಟಾಟಾ ಕ್ಯಾಪಿಟಲ್ ಗದಗ ಕಂಪನಿ ಭಾಗವಹಿಸಲಿದೆ. ವಿದ್ಯಾರ್ಹತೆ ಪಿಯುಸಿ ಹಾಗೂ ಯಾವುದೇ ಪದವಿ. ಹುದ್ದೆ ಲೋನ್ ಆಫೀಸರ್. ವಯಸ್ಸು 18ರಿಂದ 28. ಕೆಲಸದ ಸ್ಥಳ ಗದಗ. ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮ್‌ ಪ್ರತಿಗಳು ಮತ್ತು ಆಧಾರ ಕಾರ್ಡ್ ಝೆರಾಕ್ಸ್‌ನೊಂದಿಗೆ ಭಾಗವಹಿಸಬಹುದು.ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯ. ಯುವನಿಧಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 6363330688, 9019436490, 6364931181 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.