ಕನ್ನಡಪ್ರಭ ವಾರ್ತೆ ಶಿರಸಿ
ಮರೆತುಹೋದ ಖಾದ್ಯ, ಸಿರಿಧಾನ್ಯ ಖಾರ ಹಾಗೂ ಸಿರಿಧಾನ್ಯ ಸಿಹಿ ಈ 3 ವಿಭಾಗಗಳಲ್ಲಿ ಯಾವುದಾದರೊಂದು ತಿಂಡಿ ಮಾಡಬೇಕಿತ್ತು. ಮಹಿಳೆಯರು ತಾವು ತಯಾರಿಸಿದ ಬಗೆಬಗೆಯ ಪಾಕರುಚಿ ತೋರ್ಪಡಿಸಿದರು. ವೈವಿಧ್ಯ ಖಾದ್ಯಗಳ ಮೂಲಕ ಸ್ಪರ್ಧೆಯಲ್ಲಿ ಪೈಪೋಟಿ ತೋರಿದರು.
ನವಣೆ ಲಾಡು, ರಾಗಿ ಲಾಡು, ಸಿರಿಧಾನ್ಯ ಪ್ಲಮ್ ಕೇಕ್, ರಾಗಿ ಬಿಸ್ಕೇಟ್, ನೂಡಲ್ಸ್, ಸಾಮೆ ಲಾಡು, ಸಾಮೆ ಕಡಬು, ರಾಗಿಸುಳಿ ಕಡಬು, ಸಜ್ಜೆ ಉಂಡೆ, ಸಿರಿಧಾನ್ಯ ತೊಡೆದೇವು, ಸಿರಿಧಾನ್ಯ ಉಂಡೆ, ಸಾಮೆ ಅಕ್ಕಿ ಸಿಹಿ ಪೊಂಗಲ್, ನವಣೆ ಮದ್ದೂರು ವಡೆ, ಸಿರಿಧಾನ್ಯ ಕಿಚಡಿ, ಚಕ್ಕುಲಿ, ಸಿಹಿ ಮಡ್ಡಿ, ಮಸಾಲೆ ನವಣೆ ಕಡಬು, ಜೋಳದ ಹಿಟ್ಟಿನ ಬೆಣ್ಣೆ ಮುರುಕು, ಬಟ್ಲ ಬೆಲ್ಲ, ಬಾಳೆಹಣ್ಣಿನ ಶಾವಿಗೆ, ಪಪ್ಪಾಳೆಕಾಯಿ ತಾಳಿ, ಸೂಳಿ ತೆಳ್ಳವು, ಸುಕುಲುಂಡೆ, ಹಾಲು ಮಣ್ಣಿ, ಎರಿಯಪ್ಪೆ, ಅಡಕೆ ಸಿಂಗಾರದ ಪಲ್ಯ, ಲಿಂಬೆಕಾಯಿ, ನೆಲ್ಲಿಕಾಯಿ ಹಲ್ವಾ ತಂಬಿಟ್ಟಿನ ಉಂಡೆ, ಗೋದಿ ಹುಗ್ಗಿ ಹೀಗೆ ವೈವಿಧ್ಯತೆಯನ್ನು ಪಾಕ ಸ್ಪರ್ಧೆ ಒಳಗೊಂಡಿತ್ತು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ್, ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಮಾತನಾದರು.ವಿಜೇತರು
ಮರೆತು ಹೋದ ಖಾದ್ಯ ತಯಾರಿಕೆಯಲ್ಲಿ ಶುಭಾ ಪ್ರಕಾಶ ಹೆಗಡೆ ಚಾರೆಕೋಣೆ (ಪ್ರಥಮ), ವಿನೋದಾ ಹೆಗಡೆ ಕಣಗಲಕೋಣೆ(ದ್ವಿತೀಯ), ವನಿತಾ ಭಟ್ಟ ನೀರಗಾನ ತೃತೀಯ, ಸಿರಿಧಾನ್ಯ ಖಾರ ತಯಾರಿಕೆಯಲ್ಲಿ ಕುಸುಮಾ ಹೆಗಡೆ ಅಶೀಸರ (ಪ್ರಥಮ), ಅರುಣಾ ಹೆಗಡೆ ಅಶೀಸರ ದ್ವಿತೀಯ, ಜಯಲಕ್ಷ್ಮೀ ಹೆಗಡೆ (ತೃತೀಯ), ಸಿರಿಧಾನ್ಯ ಸಿಹಿ ತಯಾರಿಕೆಯಲ್ಲಿ ಸುಮಾ ಹೆಗಡೆ ತಟ್ಟಿಕೈ (ಪ್ರಥಮ), ಪದ್ಮಾ ನಾಯ್ಕ ಮಾವಳ್ಳಿ (ದ್ವಿತೀಯ) ಹಾಗೂ ಅನಸೂಯಾ ಹೆಗಡೆ ಕೋಡ್ಸರ (ತೃತೀಯ) ಸ್ಥಾನ ಪಡೆದರು.