ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ-ನುಡಿ ಶುದ್ಧವಾಗಿರಬೇಕು
ಯಲಬುರ್ಗಾ: ಶರಣರು ತೋರಿದ ನಡೆ,ನುಡಿ ಜೀವನ ದರ್ಶನ ಅಪೂರ್ವವಾದುದು. ದರ್ಶನವೆಂದರೆ ಹೊರಗೆ ತೋರುವ ಜ್ಞಾನವಲ್ಲ. ಅದು ಅಂತರಂಗದ ದಿವ್ಯರೂಪ ಎಂದು ಬೇಲೂರು-ಬಾದಾಮಿಯ ಗುರುಬಸವೇಶ್ವರ ಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದ ಶಿವೈಕ್ಯ ಶಿವಯ್ಯ ಸ್ವಾಮೀಜಿಗಳ 11ನೇ ಪುಣ್ಯ ಸ್ಮರಣೋತ್ಸವ ಹಾಗೂ 136ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ 7ನೇ ವರ್ಷದ ಬಸವಕೇಂದ್ರದ ವಾರ್ಷಿಕೋತ್ಸವ ನಿಮಿತ್ತ ಏಳು ದಿನಗಳ ಕಾಲ ಶರಣ ದರ್ಶನ ಪ್ರವಚನ ಉದ್ದೇಶಿಸಿ ಮಾತನಾಡಿದರು.ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ-ನುಡಿ ಶುದ್ಧವಾಗಿರಬೇಕು. ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನ ಅಂತರಂಗದಲ್ಲಿ ಅಳವಡಿಸಿಕೊಂಡರು. ತಮ್ಮ ನಡೆಯಲ್ಲಿ ಅನುಷ್ಠಾನಗೊಳಿಸಿದರು. ಸಮಾಜದಲ್ಲಿ ಸಮಾನತೆ ತರುವ ಮೂಲಕ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸಿದರು. ಶರಣರ ಸಮಾಜಮುಖಿ ದರ್ಶನ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ಪಿಎಸ್ಐ ಬಸನಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹನುಮವ್ವ ದೊಡ್ಡಬಸಪ್ಪ ಮುಸಲಾಪುರ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಸ್ವಾಮೀಜಿಗಳ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಲಾಯಿತು.ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ, ಗ್ರಾಪಂ ಸದಸ್ಯರಾದ ಯಮನವ್ವ ನಿರುಪಾದೆಪ್ಪ ಹುಣಸಿಹಾಳ, ರಮೇಶ ಕುಂಟೋಜಿ, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಂ.ಬಿ.ಅಳವಂಡಿ, ತಾಪಂ ಮಾಜಿ ಸದಸ್ಯ ರುದ್ರಪ್ಪ ಮರಕಟ್, ಹನುಮಂತಪ್ಪ ಹುಣಸಿಹಾಳ, ಪಂಪಣ್ಣ ಯರದೊಡ್ಡಿ, ಕುಂಟೆಪ್ಪ ಹರಿಜನ, ಹನುಮಂತಪ್ಪ ಮೇಟಿ, ರೇಣುಕಪ್ಪ ಮಂತ್ರಿ, ಶ್ರೀಕಾಂತಗೌಡ ಮಾಲಿಪಾಟೀಲ್, ಮುದಿಯಪ್ಪ ಮೇಟಿ ಸೇರಿದಂತೆ ಮತ್ತಿತರರು ಇದ್ದರು.