- ದುಗ್ಗಮ್ಮ ಗುಡಿಯಲ್ಲಿ ಆಭರಣ ಕಳವು । ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ದಾಖಲು - - -
ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಐದಾರು ಐಟಂ ಕಾಣೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ, ಉತ್ತರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಆರೋಪ ಮಾಡಿರುವ ಯಶವಂತ ರಾವ್‌ಗೆ ಬೇರೆ ಕೆಲಸ ಇಲ್ಲವಾ? ಜನರು ನೋಡುವಷ್ಟು ನೋಡುತ್ತಾರೆ. ಎಲ್ಲದಕ್ಕೂ ನೀತಿ, ಧರ್ಮ ಇರುತ್ತದೆ. ಅದನ್ನು ಬಿಟ್ಟು ಹೋಗಬಾರದು ಎಂದರು.ದೇವಸ್ಥಾನದಲ್ಲಿ ಚಿನ್ನಾಭರಣಗಳನ್ನು ಪೂಜಾರಿ ಕಳ್ಳತನ ಮಾಡಿದ್ದಾನೆಂಬ ಸುದ್ದಿ ಬಂದಿತು. ಹಾಗಾಗಿ, ಟ್ರಸ್ಟ್ ನವರೆಲ್ಲರೂ ಸೇರಿ ಸಭೆ ಮಾಡಿದ್ದೆವು. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಬಳಿಕ ಗೊತ್ತಾಗುತ್ತದೆ. ಇದರಲ್ಲಿ ರಾಜಕೀಯ ತರುವುದು ಏನಿದೆ ಎಂದು ಯಶವಂತ ರಾವ್ ವಿರುದ್ಧ ಕಿಡಿಕಾರಿದರು.
ದೇವಸ್ಥಾನದಲ್ಲಿ ಒಡವೆ ಕಳ್ಳತನ ಮಾಡಿದ್ದ ಪೂಜಾರಿಯನ್ನು ಕರೆಸಿ, ಕೇಳಿದ್ದೇವೆ. ಮುಂಚೆಯಿಂದಲೂ ಭಕ್ತರು ಕೊಟ್ಟ ಚಿನ್ನಾಭರಣವನ್ನು ಕರಗಿಸಿ, ಗಟ್ಟಿ ಮಾಡಿಟ್ಟಿದ್ದಾರೆ. ಪೂಜಾರಿಗಳು ಕೆಲವು ತಿಂಗಳ ಬಳಿಕ ಬದಲಾವಣೆ ಆಗುತ್ತಿರುತ್ತಾರೆ. ಪೂಜಾರಿಗಳು ಪೂಜಾರಿಕೆಯನ್ನು ಹಸ್ತಾಂತರ ಮಾಡುವಾಗ 6 ಐಟಂಗಳು ಸಿಕ್ಕಿಲ್ಲ ಅನ್ನುತ್ತಿದ್ದಾರೆ. ಹಾಗಾಗಿ, ಅವು ಯಾವುದು ಅಂತಾ ತೆಗೆದುಕೊಂಡು ಬರುವಂತೆ ಹೇಳಿದ್ದೇವೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
(ಬಾಕ್ಸ್)
- ಮಂತ್ರಿ ಸ್ಥಾನ ಆಕಾಂಕ್ಷಿ ಅಂತಲ್ಲ, ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ ದಾವಣಗೆರೆ: ರಾಜ್ಯ ಸಚಿವ ವಿಸ್ತರಣೆ ಬಗ್ಗೆ ಜು.28ರಂದು ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತಾರಂತೆ. ಸಭೆಗೆ ನಮಗೇನೂ ಕರೆದಿಲ್ಲಪ್ಪಾ ಎಂದು ದಾವಣಗೆರೆ ಉತ್ತರ ಕ್ಷೇತ್ರ ಶಾಸಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ಹೈಕಮಾಂಡ್‌ನಿಂದ ಯಾರಿಗೆ ದೂರವಾಣಿ ಕರೆ ಮಾಡಿದ್ದಾರೋ ನನಗಂತೂ ಗೊತ್ತಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಪ್ರಶ್ನೆ ಇಲ್ಲ. ನಮಗೇನೂ ಆಗಲೇಬೇಕೆಂದೇನೂ ಇಲ್ಲ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ನಾನು. ಪಕ್ಷದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
- - -