ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಪತ್ರಕರ್ತ ಹಿತೈಷಿಗಳಿಂದ ಆಯೋಜಿಸಿದ್ದ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪಕ್ಷಕ್ಕಾಗಿ ಬದ್ಧತೆಯಿಂದ ದುಡಿದರೆ ಅಧಿಕಾರಗಳು ದೊರಕುತ್ತವೆ ಎನ್ನುವುದಕ್ಕೆ ಪ್ರಕಾಶ್ ಸಾಕ್ಷಿ. ಸಣ್ಣ ಸಮುದಾಯಗಳಿಗೂ ಅಧಿಕಾರ ದೊರಕಿಸಿದ ಕೀರ್ತಿ ಕಾಂಗ್ರೆಸ್‌ಗೆ ಲಭಿಸುತ್ತದೆ ಎಂದರು.
ಯಾರನ್ನೇ ಆಗಲಿ ದ್ವೇಷ ಮಾಡುವುದರಿಂದ ಬೆಳವಣಿಗೆ ಸಾಧಿಸಲಾಗುವುದಿಲ್ಲ. ಸೋತು ನಡೆಯುವುದರಲ್ಲಿ ಬೆಳವಣಿಗೆ ಇರುತ್ತದೆ ಎಂಬುದನ್ನು ಅರಿಯಬೇಕು. ಪತ್ರಕರ್ತರಾದವರು ಎಲ್ಲಾ ಪಕ್ಷದ ರಾಜಕಾರಣಿಗಳೊಂದಿಗೆ ವಿಶ್ವಾಸದಿಂದ ಇರಬೇಕು. ಸಂಬಂಧ ಬೆಳೆಸಿದರೆ ಪತ್ರಕರ್ತರಾಗಿ ಉಳಿಯಲಾಗುವುದಿಲ್ಲ. ರಾಜಕಾರಣ ಸೇರುವ ಬಯಕೆ ಇದ್ದರೆ ಪರಿಪೂರ್ಣವಾಗಿ ಪ್ರವೇಶ ಮಾಡಿ ಅಧಿಕಾರವನ್ನು ಪಡೆದುಕೊಳ್ಳಿ. ಎಲ್ಲಾ ಪಕ್ಷದವರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡು ಇನ್ನೂ ಉನ್ನತ ಸ್ಥಾನಕ್ಕೇರುವಂತೆ ಸಲಹೆ ನೀಡಿದರು.ನಾನೂ ಪತ್ರಕರ್ತನಾಗಿದ್ದವನು. ಆನಂತರದಲ್ಲಿ ಕೇಬಲ್ ವ್ಯವಹಾರಕ್ಕಿಳಿದು ಆರ್ಥಿಕವಾಗಿ ಹಣ ಸಂಪಾದಿಸಿಕೊಂಡೆ. ಆನಂತರ ರಾಜಕೀಯ ಪ್ರವೇಶ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಹೀಗೆ ಎಲ್ಲರೊಂದಿಗೆ ವಿಶ್ವಾಸ, ಉತ್ತಮ ಸಂಬಂಧದಲ್ಲಿದ್ದೇನೆ. ಯಾರೊಂದಿಗೂ ವಿಶ್ವಾಸ ಕೆಡಿಸಿಕೊಂಡಿಲ್ಲ. ಒಬ್ಬ ನಾಯಕರೊಂದಿಗೆ ಆಡಿದ ಮಾತನ್ನು ಇನ್ನೊಬ್ಬರೊಂದಿಗೆ ಮಾತನಾಡುವುದಿಲ್ಲ. ಅದು ನನ್ನ ಬದ್ಧತೆ. ಅದೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಹಿರಿಯ ಪತ್ರಕರ್ತರ ಪಿ.ಜೆ.ಚೈತನ್ಯಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ, ಕೃಷ್ಣ ಸ್ವರ್ಣಸಂದ್ರ, ಸೋಮಶೇಖರ್, ಉಪಾಧ್ಯಕ್ಷ ಚಿನಕುರಳಿ ಲೋಕೇಶ್, ಮುಡಾ ಮಾಜಿ ಸದಸ್ಯ ಮರ್ದಿನಿ ಕೃಷ್ಣ, ಪತ್ರಕರ್ತರಾದ ಕೆ.ಶಂಭು, ಶಿವರಾಜ್, ಮೋಹನ್‌ರಾಜ್ ಇತರರಿದ್ದರು.