ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೋವಿಡ್‌ಗೆ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದವರು ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್, ಫ್ರಿಡ್ಜ್ ವಾಟರ್ ಕುಡಿಯಬೇಡಿ ಎಂದು ಇಲ್ಲಿಯ ಕಾಲೇಜೊಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾನೂನು ಕಾಲೇಜು ಕಟ್ಟಪ್ಪಣೆ ಹೊರಡಿಸಿದ ಸೂಚನಾ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಲೇಜಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ.ನಗರದ ವಾರ್ಡ್ ನಂ ಒಂದರ ವಾಪಸಂದ್ರ ಬಡವಾವಣೆಯಲ್ಲಿರುವ ಶ್ರೀ ಜಚನಿ ನಿಡುಮಾಮಿಡಿ ಶಾಖಾ ಮಠದ ಉಸ್ತುವಾರಿಯ ಶ್ರೀ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ ಇಂತಹದೊಂದು ಎಡವಟ್ಟು ಮಾಡಿದೆ.ಮೇ 2 ರಂದು ಸಂಸ್ಥೆಯ ಆಡಳಿತಾಧಿಕಾರಿ ಶಿವಜ್ಯೋತಿ ನಿರ್ದೇಶನದ ಮೇರೆಗೆ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾರ ಉದಯ್ ಶಂಕರ್ ಈ ಸೂಚನಾ ಪತ್ರ ಹೊರಡಿಸಿದ್ದು ಇದು ರಾಜ್ಯಾದ್ಯಾಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸೂಚನಾ ಪತ್ರದಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ತಿಳಿವಳಿಕೆ ಪ್ರಕಾರ, ಕೋವಿಡ್ ಸಮಯದಲ್ಲಿ ಪಡೆದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್ ನೀರು, ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಕೂಲ್ ಡ್ರಿಂಕ್ಸ್, ಐಸ್ ಕ್ರೀಂ ಫ್ರಿಡ್ಜ್ ವಾಟರ್ ಕುಡಿಯದಂತೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.
ವೈರಲ್ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಗಮನಕ್ಕೂ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೋಟಿಸ್ ನೀಡಿದ್ದಾರೆ.ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಆಡಳಿತಾಧಿಕಾರಿ ಶಿವಜ್ಯೋತಿ ಮತ್ತೆ ಅದೇ ಆದೇಶದ ಆರಂಭದಲ್ಲಿ ಆರೋಗ್ಯ ಇಲಾಖೆ ಎಂಬುದುನ್ನು ತೆಗೆದು ಹಾಕಿ ಟಿವಿ ಮಾಧ್ಯಮ ಹಾಗೂ ಜಾಹೀರಾತು ಮಾಹಿತಿ ಪ್ರಕಾರ ಎಂದು ಬರೆದು ಅದನ್ನೇ ಮರು ಆದೇಶ ಹೊರಡಿಸಿದ್ದಾರೆ.