ಸರ್ಕಾರಿ ಜಾಗ ಒತ್ತುವರಿ ತೆರವು ಶೀಘ್ರ

KannadaprabhaNewsNetwork |  
Published : Sep 07, 2024, 01:32 AM IST
56 | Kannada Prabha

ಸಾರಾಂಶ

ನಗರಸಭೆಯಲ್ಲಿ ಖಾತೆ ಬದಲಾವಣೆ ಹಾಗೂ ಇನ್ನಿತರ ಸೇವೆ ನೀಡುವಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ,

----ಕನ್ನಡಪ್ರಭ ವಾರ್ತೆ ನಂಜನಗೂಡು ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಕಂದಾಯ ಇಲಾಖೆ ಸಚಿವರ ಆದೇಶದಂತೆ ಶೀಘ್ರದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಿ ತೆರವುಗೊಳಿಸುವಂತೆ ತಹಸೀಲ್ದಾರ್ಅವರಿಗೆ ಸೂಚಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ನಗರಸಭೆ ಕಚೇರಿಯಲ್ಲಿ ಶುಕ್ರವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನಗರಸಭೆಯಲ್ಲಿ ಖಾತೆ ಬದಲಾವಣೆ ಹಾಗೂ ಇನ್ನಿತರ ಸೇವೆ ನೀಡುವಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ, ಈ ವಿಚಾರವಾಗಿ ಅಧಿಕಾರಿಗಳಿಗೆ ಜನಸ್ನೇಹಿಯಾಗಿ,ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ಲಂಚಕ್ಕೆ ಎಡೆಕೊಡದಂತೆ ನಡೆದುಕೊಳ್ಳುವಂತೆ, ಸಾಧ್ಯವಾಗದಿದ್ದರೆ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ, ನೂತನ ಅಧ್ಯಕ್ಷ ಶ್ರೀಕಂಠಸ್ವಾಮಿ ಕಟ್ಟುನಿಟ್ಟಿನ ಕ್ರಮವಹಿಸುತ್ತಾರೆ ಎಂಬ ಭರವಸೆಯಿದೆ, ಇನ್ನು ಮುಂದೆ ಸಾರ್ವಜನಿಕ ಸೇವೆಗಳು ದೂರುಗಳಿಲ್ಲದಂತೆ ನಡೆಯುತ್ತವೆ ಎಂದು ಹೇಳಿದರು.ಪಟ್ಟಣದ ಒಳಚರಂಡಿ ಯೋಜನೆಗೆ ಮತ್ತೆ 21 ಕೋಟಿ ಅನುದಾನ ನೀಡಲಾಗಿದ್ದು, ಈ ವರ್ಷದ ಕೊನೆ ವೇಳೆಗೆ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ, ಒಳಚರಂಡಿಯ ಕೊಳಚೆ ನೀರನ್ನು ಅರಸನಕೆರೆಗೆ ಬಿಡುವಂತೆ ಯೋಜನೆ ಸಿದ್ದಪಡಿಸಲಾಗಿತ್ತು, ಆದರೆ ಕೊಳಚೆ ನೀರನ್ನು ಆಧುನಿಕ ತಂತ್ರಜ್ಞಾನದಿಂದ ಶುದ್ದೀಕರಸಲಾಗುತ್ತಿರುವುದರಿಂದ ಆ ನೀರು ಕೃಷಿಗೆ ಯೋಗ್ಯವಾಗಿದೆ ಎಂಬ ವರದಿ ಬಂದಿದೆ, ಹೀಗಾಗಿ ಆ ಭಾಗದಲ್ಲಿ 15 ಎಕರೆ ಖಾಸಗಿ ಜಮೀನು ಖರೀದಿಸಿ, ನೀರನ್ನು ಸಂಗ್ರಹಿಸಿ ಕೃಷಿ ಜಮೀನುಗಳಿಗೆ ನೀರನ್ನು ಕೊಡುವ ಬಗ್ಗೆ ಯೋಜಿಸಲಾಗುತ್ತಿದೆ, ನೀರು ಪೋಲಾಗದೆ ಕೃಷಿಗೆ ಬಳಕೆಯಾಗಲಿದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರೆಹೇನ ಬಾನು, ಸದಸ್ಯರಾದ ಪ್ರದೀಪ್ ಕುಮಾರ್‌, ಗಾಯಿತ್ರಿ, ಮಹೇಶ್‌, ಗಂಗಾಧರ್‌, ಸಿದ್ದಿಕ್ ಅಹಮ್ಮದ್‌, ಯೋಗೇಶ್‌, ಮುಖಂಡರಾದ ಕಳಲೆ ಕೇಶವಮೂರ್ತಿ, ನಗರ ಕಾಂಗ್ರೆಸ್ಅಧ್ಯಕ್ಷ ಸಿ.ಎಂ. ಶಂಕರ್‌, ದೇಬೂರು ಅಶೋಕ್ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ