ಕುಖ್ಯಾತ ಕಳ್ಳರ ಕಾಲಿಗೆ ಗುಂಡಿನೇಟು

KannadaprabhaNewsNetwork |  
Published : Jul 25, 2025, 12:31 AM IST
24ಡಿಡಬ್ಲೂಡಿ3,4 | Kannada Prabha

ಸಾರಾಂಶ

ಕಳ್ಳತನದಲ್ಲಿ ತೊಡಗಿ ಪರಾರಿಯಾಗುತ್ತಿದ್ದ ದರೋಡೆಕೋರರ ಮೇಲೆ ಬೆಳಗಿನ ಜಾವ ಫೈರಿಂಗ್ ಮಾಡಲಾಗಿದೆ. ರಾಜೀವಗಾಂಧಿ ನಗರದ ನಿವಾಸಿಗಳಾದ ಮುಜಮ್ಮಿಲ್ ಸೌದಾಗರ ಮತ್ತು ವಿಜಯ ಅಣ್ಣಿಗೇರಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುವಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ಧಾರವಾಡ: ಕಳೆದ ವಾರವಷ್ಟೇ ಯುವಕನಿಗೆ ಚಾಕು ಚುಚ್ಚಿ ಪರಾರಿಯಾಗಿದ್ದ ಆರೋಪಿ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಗುರುವಾರ ನಸುಕಿನಲ್ಲಿ ಧಾರವಾಡದಲ್ಲಿ ಮತ್ತೊಂದು ಗುಂಡಿನ ಸದ್ದು ಮೊಳಗಿದೆ.

ಕಳ್ಳತನದಲ್ಲಿ ತೊಡಗಿ ಪರಾರಿಯಾಗುತ್ತಿದ್ದ ದರೋಡೆಕೋರರ ಮೇಲೆ ಬೆಳಗಿನ ಜಾವ ಫೈರಿಂಗ್ ಮಾಡಲಾಗಿದೆ. ರಾಜೀವಗಾಂಧಿ ನಗರದ ನಿವಾಸಿಗಳಾದ ಮುಜಮ್ಮಿಲ್ ಸೌದಾಗರ ಮತ್ತು ವಿಜಯ ಅಣ್ಣಿಗೇರಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುವಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ಘಟನೆ ಕುರಿತು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ, ಕಲಘಟಗಿ ರಸ್ತೆಯ ಪೊಲೀಸ್‌ ಟ್ರೇನಿಂಗ್‌ ಶಾಲೆಯ ಬಳಿ ಮೂವರು ಆರೋಪಿಗಳು ಓರ್ವನ ಮೇಲೆ ದಾಳಿ ಮಾಡಿ ಬೈಕ್‌ ಕಸಿದೊಳ್ಳಲು ವಿಫಲ ಯತ್ನ ಮಾಡಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸರಿಗೆ ದೂರು ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೂವರಲ್ಲಿ ಹುಸೇನಸಾಬ್‌ ಎಂಬಾತನನ್ನು ಬಂಧಿಸಿದ್ದಾರೆ. ಈತ 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಕಳ್ಳತನ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಇನ್ನಿಬ್ಬರು ಆರೋಪಿಗಳು ಇರುವ ಮಾಹಿತಿ ಅರಿತ ಪೊಲೀಸರು, ಆತ ಕರೆದೊಯ್ದ ಜಾಗಕ್ಕೆ ವಿದ್ಯಾಗಿರಿ ಪಿಎಸ್‌ಐ ಮಲ್ಲಿಕಾರ್ಜುನ ಹೂಸೂರ ಹಾಗೂ ಪೊಲೀಸ್ ಪೇದೆ ಮೊಹಮ್ಮದ ಇಸಾಕ್ ಹೋಗಿದ್ದಾರೆ.

ಅವರಿಬ್ಬರನ್ನು ಹಿಡಿಯಲು ಹೋದಾಗ ಹುಸೇನಸಾಬ್‌ ಪೊಲೀಸರನ್ನು ದಬ್ಬಿ ಓಡಿ ಹೋಗಿದ್ದಾನೆ. ಇನ್ನಿಬ್ಬರಾದ ವಿಜಯ ಅಣ್ಣಿಗೇರಿ ಹಾಗೂ ಸೌದಾಗರ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಅವರಿಬ್ಬರ ಕಾಲಿಗೆ ಗುಂಡು ಹೊಡೆಯಲಾಗಿದೆ. ಮೂವರು ಆರೋಪಿಗಳು ರಾಜಿವಾಗಾಂಧಿ ನಗರ ನಿವಾಸಿಗಳಾಗಿದ್ದು, ಮೊಬೈಲ್‌ ಕರೆ ಮಾಡಿ ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಇವರು ಇನಸ್ಟಾಗ್ರಾಂ ಚಾಟಿಂಗ್‌ ಮೂಲಕ ಸಂವಹನ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಮಾಹಿತಿ ದೊರೆತಿದೆ. ಸದ್ಯ ಹುಸೇನಸಾಬಗೆ ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದರು.

ಆರೋಪಿಗಳಿಬ್ಬರು ಸೇರಿದಂತೆ ಘಟನೆಯಲ್ಲಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಸಹ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಕುರಿತು ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ