ಸೈಂಟ್ ಅಲೋಶಿಯಸ್‌ನಲ್ಲಿ ‘ನೋವೇಶನ್- 2025’ ಅಂತಾರಾಷ್ಟ್ರೀಯ ಸಮ್ಮೇಳನ

KannadaprabhaNewsNetwork |  
Published : May 05, 2025, 12:45 AM IST
ಸೈಂಟ್ ಅಲೋಶಿಯಸ್‌ ಕಾಲೇಜಿನಲ್ಲಿ ‘ನೋವೇಶನ್- 2025’ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. | Kannada Prabha

ಸಾರಾಂಶ

ಸೈಂಟ್ ಅಲೋಶಿಯಸ್ (ಸ್ವಾಯತ್ತ ವಿಶ್ವವಿದ್ಯಾಲಯ), ಏಮಿಟ್ (ಎಐಎಂಐಟಿ) ಬೀರಿ ಕ್ಯಾಂಪಸಿನ ಎಂಬಿಎ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ನಡೆಸಿದ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ‘ನೋವೇಶನ್ 2025: ಇಂಡಸ್ಟ್ರಿ 5.0, 6.0 ಮತ್ತು ಅದರ ಮುಂಬರುವ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು- ಭವಿಷ್ಯದ ವ್ಯವಸ್ಥಾ ಮಾದರಿಗಳ ಅಭಿವೃದ್ಧಿ’ ಎಂಬ ವಿಷಯದ ಮೇಲೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೈಂಟ್ ಅಲೋಶಿಯಸ್ (ಸ್ವಾಯತ್ತ ವಿಶ್ವವಿದ್ಯಾಲಯ), ಏಮಿಟ್ (ಎಐಎಂಐಟಿ) ಬೀರಿ ಕ್ಯಾಂಪಸಿನ ಎಂಬಿಎ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ನಡೆಸಿದ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ‘ನೋವೇಶನ್ 2025: ಇಂಡಸ್ಟ್ರಿ 5.0, 6.0 ಮತ್ತು ಅದರ ಮುಂಬರುವ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು- ಭವಿಷ್ಯದ ವ್ಯವಸ್ಥಾ ಮಾದರಿಗಳ ಅಭಿವೃದ್ಧಿ’ ಎಂಬ ವಿಷಯದ ಮೇಲೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಂಆರ್‌ಪಿಎಲ್ ಮುಖ್ಯ ಜನರಲ್ ಮ್ಯಾನೇಜರ್ (ಎಚ್.ಆರ್) ಸಂದೇಶ್ ಜೆ. ಕುಟಿನ್ಹೋ ಪ್ರಭು, ಮುಂದಿನ ದಶಕದಲ್ಲಿ (5.0) ಮತ್ತು ಅದರ ನಂತರದ ದಶಕದಲ್ಲಿ (6.0) ಸಂಭವಿಸಬಹುದಾದ ಬದಲಾವಣೆಗಳು ಮತ್ತು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನವ ಶಕ್ತಿಯನ್ನು ಸಜ್ಜುಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ನ್ಯೂಯಾರ್ಕ್‌ನ ಸ್ಟೇಟ್ ಯೂನಿವರ್ಸಿಟಿ ಆಫ್ ಆಲ್ಬನಿಯ ಪ್ರೊಫೆಸರ್ ಡೇವಿಡ್ ಎಂ. ಸ್ಮಿತ್, ಮಾರಿಷಸ್ ಸರ್ಕಾರದ ಹಣಕಾಸು ಸಚಿವಾಲಯದ ಡಾ. ಯತಿನ್ ಮತ್ತು ಲೊಯೊಲಾ ಕಾಲೇಜ್ ಆಫ್ ಸೋಷಿಯಲ್ ಸೈನ್ಸಸ್ (ಸ್ವಾಯತ್ತ), ತಿರುವನಂತಪುರಂನ ಪ್ರಾಧ್ಯಾಪಕ ಡಾ.ಫಾ. ರಂಜಿತ್ ಜಾರ್ಜ್ ಎಸ್.ಜೆ. ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು.

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರೋನಾಲ್ಡ್ ನಜರೆತ್ ಅಧ್ಯಕ್ಷತೆ ವಹಿಸಿದ್ದರು. ಏಮಿಟ್ ನಿರ್ದೇಶಕ ಡಾ.ಫಾ. ಕಿರಣ್ ಕೋತ್ ಎಸ್.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್‌ಮೆಂಟ್‌ ಡೀನ್ ಡಾ. ರಜನಿ ಸುರೇಶ್ ಸ್ವಾಗತಿಸಿದರು.

60ಕ್ಕೂ ಹೆಚ್ಚು ಸಂಶೋಧನಾ ಪತ್ರಗಳನ್ನು ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಸ್ತುತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!