ಕನ್ನಡಪ್ರಭ ವಾರ್ತೆ ಸಿಂದಗಿ ಪ್ರಸ್ತುತ ದಿನಗಳಲ್ಲಿ ವಿದ್ಯೆಗಿಂತ ಸಂಸ್ಕಾರ ಮುಖ್ಯವಾಗಿದೆ. ಶಿಸ್ತು ಜೀವನದ ಅಡಿಗಲ್ಲು. ಹಾಗಾಗಿ ವಿದ್ಯಾರ್ಥಿಗಳಿಗೆ ಶಿಸ್ತು, ಸಹನೆ ತುಂಬ ಮುಖ್ಯ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಪ್ರಸ್ತುತ ದಿನಗಳಲ್ಲಿ ವಿದ್ಯೆಗಿಂತ ಸಂಸ್ಕಾರ ಮುಖ್ಯವಾಗಿದೆ. ಶಿಸ್ತು ಜೀವನದ ಅಡಿಗಲ್ಲು. ಹಾಗಾಗಿ ವಿದ್ಯಾರ್ಥಿಗಳಿಗೆ ಶಿಸ್ತು, ಸಹನೆ ತುಂಬ ಮುಖ್ಯ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಆ ಗುರಿ ಇಡೇರಿಸುವ ದಿಸೆಯಲ್ಲಿ ಪರಿಶ್ರಮ ವಹಿಸಬೇಕು. ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಹುದ್ದೆಯಾಗಿದೆ. ಮಕ್ಕಳು ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಹೆಣ್ಣು ಮಕ್ಕಳು ಎಲ್ಲರೂ ಅಧ್ಯಯನದೆಡೆಗೆ ಗಮನ ಹರಿಸಬೇಕು. ಮಕ್ಕಳು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ.ಪೂಜಾರಿ ವಹಿಸಿಕೊಂಡಿದ್ದರು. ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ, ನಿವೃತ್ತ ದೈಹಿಕ ಉಪನ್ಯಾಸಕ, ಎಂಜೆಎಫ್ ಲೈಯನ್ ಕೆ.ಹೆಚ್.ಸೋಮಾಪೂರ, ವಿದ್ಯಾರ್ಥಿ ಒಕ್ಕೂಟ ಕಾರ್ಯಾಧ್ಯಕ್ಷೆ ಜಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಗಮ್ಮ ಪೂಜಾರಿ ಇದ್ದರು.ಕೆ.ಹೆಚ್.ಸೋಮಾಪುರ ರಚಿಸಿದ 100 ಕೃತಿಗಳನ್ನು ಉಚಿತ ವಿತರಣೆ ಮಾಡಿದರು. ಉಪನ್ಯಾಸಕ ಜಿ.ಎ.ನಂದಿಮಠ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಜಿ.ವಿ.ಪಾಟೀಲ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗಮ ಪೂಜಾರಿ ವಂದಿಸಿದರು.ಈ ವೇಳೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಹೈಯಾಳಕರ, ಪ್ರಾಚಾರ್ಯ ವಿ.ಡಿ.ಪಾಟೀಲ, ಭೀಮನಗೌಡ ಸಿಂಗನಳ್ಳಿ, ಡಾ.ರವಿ ಗೋಲಾ, ವಿಶ್ವನಾಥ ನಂದಿಕೋಲ, ಸಿಬ್ಬಂದಿಗಳಾದ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಅನಿಲಕುಮಾರ ರಜಪೂತ, ಗಿರೀಶ ಕುಲಕರ್ಣಿ, ಮುರ್ತುಬಿ ಬೇಗಂ ಬಿರಾದಾರ, ಹೇಮಾ ಹಿರೇಮಠ, ನಿಲಮ್ಮ ಬಿರಾದಾರ, ಭಾಗ್ಯಶ್ರೀ ನಂದಿಮಠ, ಭಾಗ್ಯ ಬಬಲೇಶ್ವರ, ಸರೋಜಿನಿ ಹಿರೇಮಠ, ಎಸ್.ಎಸ್.ಕಲಶೆಟ್ಟಿ, ಎಸ್.ಸಿ.ದುದ್ದಗಿ, ಮಂಗಳಾ ಈಳಗೇರ, ಡಿ.ಎಂ.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ ಬಸು, ವಿಜಯಲಕ್ಷ್ಮೀ ಭಜಂತ್ರಿ, ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.