ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಪಂಚಾಯತ್ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ ಇಲಾಖೆಯಿಂದ 1633 ಹೆಕ್ಟರ್ ಪ್ರದೇಶ, ರೇಷ್ಮೆ ಇಲಾಖೆಯಿಂದ 203 ಹೆಕ್ಟರ್, ಕೃಷಿ ಇಲಾಖೆಯಿಂದ 131 ಹೆಕ್ಟರ್ ಪ್ರದೇಶವನ್ನು ವಿಸ್ತರಣೆ ಮಾಡಲಾಗಿದೆ. ಅನುಷ್ಠಾನ ಇಲಾಖೆಗಳಿಂದ ಇಲ್ಲಿಯವರೆವಿಗೂ ಒಟ್ಟು 8.66 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಿಳಿಸಿದರು. ಮುಂದುವರೆದು 2025-26 ನೇ ಸಾಲಿಗೆ ಸರ್ಕಾರದಿಂದ 28 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಕಳೆದ ಜುಲೈ ಅಂತ್ಯದ ವೇಳೆಗೆ 10.83 ಲಕ್ಷ ಮಾನವ ದಿನಗಳ ಸೃಜಸಿ ವಾರ್ಷಿಕ ಗುರಿಗೆ ಅನುಗುಣವಾಗಿ ಈಗಾಗಲೇ ಶೇ 38.67 ರಷ್ಟು ಪ್ರಗತಿ ಸಾಧಿಸಲಾಗಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯು ಜುಲೈ ಮಾಹೆಯ ಅಂತ್ಯದ ಮಾನವ ದಿನಗಳ ಸೃಜನೆಯ ಪ್ರಗತಿಯಲ್ಲಿ ರಾಜ್ಯದಲ್ಲಿ 03 ನೇ ಸ್ಥಾನದಲ್ಲಿತ್ತು ಎಂದು ತಿಳಿಸಿದರು. ನಿಯಮ ಉಲ್ಲಂಘಿಸಿದರೆ ದೂರು
ಮಹಾತ್ಮ ಗಾಂಧಿ ರಾಷ್ಠ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹಾಗೂ ಇತರೆ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ಯಾವುದಾದರೂ ಪ್ರಕರಣಗಳಿದ್ದಲ್ಲಿ, ಜಿಲ್ಲಾ ಮಟ್ಟದಲ್ಲಿರುವ ಒಂಬುಡ್ಸ್‌ಮನ್ ಕಚೇರಿಗೆ ದೂರನ್ನು ಸಲ್ಲಿಸಬಹುದಾಗಿದೆ. 2024-25 ನೇ ಸಾಲಿನಲ್ಲಿ ಸ್ವೀಕೃತವಾದ ದೂರುಗಳ ಪೈಕಿ ರೂ.1,03,461 ಗಳನ್ನು ವಸೂಲಾತಿ ಮಾಡಿ ಮಹಾತ್ಮ ಗಾಂಧಿ ರಾಷ್ಠ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆ.ಎಸ್.ಇ.ಜಿ.ಎಫ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು. ಸಿಕೆಬಿ-4 ಡಾ.ವೈ.ನವೀನ್ ಭಟ್.