ಕುರುಗೋಡು: ಮಹಾತ್ಮಗಾಂಧಿ ಹೆಸರಿನಲ್ಲಿದ್ದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ರಾಮನ ಹೆಸರಿನಿಂದ ಮರುನಾಮಕರಣ ಮಾಡಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಂಸದ ಈ.ತುಕಾರಾಂ ಬೇಸರ ವ್ಯಕ್ತಪಡಿಸಿದರು.ಸಮೀಪದ ಕುಡುತಿನಿಯಲ್ಲಿ ಮಂಗಳವಾರ ಎಂಟರ್ ಪ್ರೈಜಸ್ ಅನುದಾನ ಹಾಗೂ ನಗರೋತ್ಥಾನ ನಾಲ್ಕನೇ ಹಂತದ ನಿರ್ಮಾಣವಾಗಿರುವ ಸಂತೆ ಮಾರುಕಟ್ಟೆಯನ್ನು ಮತ್ತು ನೂತನ ಅಂಗವಿಕಲ ಭವನವನ್ನು ಉದ್ಘಾಟಿಸಿ ಸಂಸದ ಈ.ತುಕಾರಾಂ ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸೂರ್ಯ, ಚಂದ್ರ ಇರುವವರೆಗೆ ನಮ್ಮ ಸಂವಿಧಾನ ಅಸ್ಥಿತ್ವದಲ್ಲಿರುತ್ತದೆ. ಇದನ್ನು ಯಾರಿಂದಲೂ ತೆಗೆದುಹಾಕಲು ಸಾಧಗ್ಯವಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಸಂಧರ್ಭದಲ್ಲಿ ರೈತಪರ ಆಡಳಿತ ನಡೆಸಿತ್ತು. ರೈತರ ಸಾಲಮನ್ನಾ ಮಾಡಿತ್ತು. ಕಬ್ಬು, ತೊಗರಿ, ಮೆಕ್ಕೆಜೋಳ ಖರೀದಿ ಬಗ್ಗೆ ಕೇಂದ್ರದ ಕೃಷಿ ಮಂತ್ರಿ ಬಳಿ ಮಾತನಾಡಿರುವೆ. ಅನುಮೋದನೆ ದೊರೆಯಲಿದೆ ಎಂದರು.ಕರಿಗನೂರು, ಬಳ್ಳಾರಿ, ಕುಡತಿನಿ ಫ್ಲೈ ಓವರ್, ಹೊಸಪೇಟೆ- ಚಿತ್ರದುರ್ಗ ಮಾರ್ಗದ ಕ್ಯಾಸನಕೇರೆ ಬಳಿ ಸೇವಾ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಅತಿಶೀಘ್ರದಲ್ಲಿ ಪೂರ್ಣಗೊಳ್ಳಲಿವೆ. ಮುಂದಿನ ಯುಗಾದಿಗೆ ಕುಡತಿನಿ- ಸಿದ್ದಮ್ಮನಹಳ್ಳಿ ಸೇತುವೆ ಉದ್ಘಾಟನೆ ಮಾಡುವೆ ಎಂದು ಭರವಸೆ ನೀಡಿದರು.
ಮಾಜಿ ಎಂಎಲ್‌ಸಿ ಕೆಎಲ್‌ಸಿ ಸ್ವಾಮಿ, ಬ್ಲಾಕ್ ಅಧ್ಯಕ್ಷ ಏಕಾಂಬ್ರಪ್ಪ, ಲಕ್ಷಣ, ಪಲ್ಲೇದ ಪ್ರಭುಲಿಂಗನಗೌಡ, ವಿ.ರಾಜಶೇಖರ, ಸತ್ಯಪ್ಪ, ಕನ್ನಿಕೇರಿ ಪಂಪಾಪತಿ, ವೆಂಕಟರಮಣ ಬಾಬು, ಜಟ್ಟಿ ಬೀಸಣ್ಣ, ವಿಸಿಕೆ ಚಂದ್ರಪ್ಪ, ಚಂದ್ರಾಯಿ ದೊಡ್ಡಬಸಪ್ಪ, ಸೊಸೈಟಿ ಎರ್ರಿಸ್ವಾಮಿ, ದೊಡ್ಡಪ್ಪ, ರಾಮಲಿಂಗಪ್ಪ, ಕಾಮೇಶ, ಬಸವರಾಜ, ರಾಮಾಂಜಿನಿ, ಗಂಗಾಧರ, ಗುತ್ತಿಗೆದಾರ ಈಸಣ್ಣ, ಗುರು, ಕುಡುತಿನಿ ಪಪಂ ಮುಖ್ಯಾಧಿಕಾರಿ ಮಂಜುನಾಥ ಇದ್ದರು.ಕುರುಗೋಡು ಸಮೀಪದ ಕುಡುತಿನಿಯಲ್ಲಿ ಸಂತೆ ಮಾರುಕಟ್ಟೆಯನ್ನು ಮತ್ತು ನೂತನ ಅಂಗವಿಕಲ ಭವನವನ್ನು ಉದ್ಘಾಟಿಸಿ ಸಂಸದ ಈ.ತುಕಾರಾಂ ಮಾತನಾಡಿದರು.