ನರೇಗಾ ಕೂಲಿಯಲ್ಲಿ ಮೋಸ: ತಾಪಂ ಕಚೇರಿಗೆ ದೂರು

KannadaprabhaNewsNetwork |  
Published : Jun 12, 2025, 01:07 AM IST
ಫೋಟೋ 11ಪಿವಿಡಿ4ಪಾವಗಡ,ನರೇಗಾ ಯೋಜನೆಯ ಕೂಲಿ ಹಣ ನೀಡುವಲ್ಲಿ ಪಿಡಿಒನ ತಾರತಮ್ಯ ದೋರಣೆ ವಿರೋಧಿಸಿ ತಾ.ಬೂದಿಬೆಟ್ಟ ಗ್ರಾಪಂನ ಅನೇಕ ಮಂದಿ ಕೂಲಿಕಾರರು ತಾಪಂಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.ಫೋಟೋ 11ಪಿವಿಡಿ5ಬೂದಿಬೆಟ್ಟ ಗ್ರಾಪಂನಲ್ಲಿ ನರೇಗಾ ಯೋಜನೆಯ ಕೂಲಿ ಹಣದ ಅವ್ಯವಹಾರ ಕುರಿತು ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿ,ತಾಪಂ ನರೇಗಾ ಯೋಜನೆಯ ಸಹಾಯಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ನರೇಗಾ ಯೋಜನೆಯಲ್ಲಿ ಗ್ರಾಪಂನಿಂದ ಅನುಮೋದನೆಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿ ಕೆಲಸದಲ್ಲಿ ಕೂಲಿಕಾರರಿಗೆ ನಿಗದಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೂಲಿಕಾರರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಪಾವಗಡ

ನರೇಗಾ ಯೋಜನೆಯಲ್ಲಿ ಗ್ರಾಪಂನಿಂದ ಅನುಮೋದನೆಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿ ಕೆಲಸದಲ್ಲಿ ಕೂಲಿಕಾರರಿಗೆ ನಿಗದಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೂಲಿಕಾರರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬುಧವಾರ ಏಕಾಏಕಿ ಕಚೇರಿಗೆ ಬಂದ ಕೂಲಿಕಾರರು, ಪ್ರಸಕ್ತ ಸಾಲಿಗೆ ನರೇಗಾ ಯೋಜನೆ ಅಡಿ ಬೂದಿಬೆಟ್ಟ ಗ್ರಾಪಂ ವ್ಯಾಪ್ತಿಯ ಯರಮ್ಮನಹಳ್ಳಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. 20ಕ್ಕೂ ಹೆಚ್ಚು ಮಂದಿ ಕೂಲಿ ಕೆಲಸದಲ್ಲಿ ನಿರತರಾಗಿದ್ದು, 20ಮಂದಿಗೆ 7ದಿನದ ಕಾಮಗಾರಿಯ ಕೂಲಿಹಣ ಬಿಡುಗಡೆಯಾಗಬೇಕಿದೆ. ಪ್ರತಿದಿನ ತಲಾ 370ರುಗಳ ಕೂಲಿ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ ಇಲ್ಲಿನ ಪಿಡಿಒ ಹಾಗೂ ನರೇಗಾ ಎಂಜಿನಿಯರ್‌ ಸೇರಿ ಪ್ರತಿದಿನ ಒಬ್ಬ ಕೂಲಿಕಾರ್ಮಿಕನಿಗೆ ತಲಾ 190ರು ಕೂಲಿ ಹಣ ನಿಗದಿಪಡಿಸಿದ್ದಾರೆ. ಇದು ಕಾರ್ಮಿಕರಿಗೆ ಮಾಡುವ ಮೋಸವಾಗಿದೆ. ನ್ಯಾಯಯುತವಾಗಿ ಪ್ರತಿದಿನದ ಕೂಲಿ 370ರುಗಳಂತೆ ಲೆಕ್ಕಹಾಕಿ 20ಮಂದಿಗೆ 7ದಿನದ ಕೂಲಿ ಹಣ ನೀಡುವಂತೆ ತಾಪಂ ಇಒಗೆ ಆಗ್ರಹಿಸಿದರು.

ಈ ವೇಳೆ ತಮಟೆ ಸಂಸ್ಥೆಯ ಶ್ರೀನಿವಾಸ್‌, ಬಳಸಮುದ್ರ ವೆಂಕಟೇಶ್‌,ರಾಮಕೃಷ್ಣ ಹಾಗೂ ಕೂಲಿಕಾರರಾದ ಅಲುವೇಲಮ್ಮ, ಸುಶೀಲಮ್ಮ ಶಮಾ, ಮಮತಾ ಲಕ್ಷ್ಮೀದೇವಮ್ಮ, ಸಾಕಮ್ಮ, ಸಿದ್ದೇಶಪ್ಪ, ಮಂಜುಳಮ್ಮ, ರಾಧಮ್ಮ, ನಾಗರಾಜು, ಯಲ್ಲಮ್ಮ, ನರಸಮ್ಮ,ಮುತ್ಯಾಲಮ್ಮ, ಕಾಮಣ್ಣ, ನಾಗಮ್ಮ ಅಕ್ಕಲಪ್ಪ, ಲಲಿತಮ್ಮ ಇತರೆ ಅನೇಕ ಮಂದಿ ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ