ನರೇಗಾ ಕೂಲಿ ಹಣ 370ಕ್ಕೆ ಹೆಚ್ಚಳ: ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್

KannadaprabhaNewsNetwork |  
Published : Apr 01, 2025, 12:47 AM IST
ಫೋಟೊ ಶೀರ್ಷಿಕೆ: 29ಹೆಚ್‌ವಿಆರ್6 ರುಚಿ ಬಿಂದಲ್  | Kannada Prabha

ಸಾರಾಂಶ

ಜಿಲ್ಲೆಯ ಪ್ರತಿ ಅರ್ಹ ಕುಟುಂಬಕ್ಕೂ 100 ದಿನಗಳ ಅಕುಶಲ ಕೂಲಿ ಕೆಲಸ ಒದಗಿಸುವುದರೊಂದಿಗೆ ಕೂಲಿ ಹಣ ₹370 ನೀಡಲಾಗುವುದು. ಬರುವ ಏ. 1ರಿಂದ ಕೂಲಿ ಕೆಲಸ ಒದಗಿಸಲು ಎನ್‌ಎಂಆರ್‌ಗಳನ್ನು ಸಹ ಹಂಚಿಕೆ ಮಾಡಲಾಗುವುದು.

ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ಕೂಲಿ ಹಣ ₹349 ಇದ್ದು, 2025- 26ನೇ ಸಾಲಿಗೆ ಏ. 1ರಿಂದ ₹370ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025- 26ನೇ ಸಾಲಿಗೆ ಕೂಲಿ ಹಣ ₹370ಗಳಿಗೆ ಹೆಚ್ಚಿಸುವ ಮೂಲಕ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಅಧಿಸೂಚನೆ ಹೊರಡಿಸಿದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಸಿಗಲಿದೆ. ಕೂಲಿ ಹಣ ಹೆಚ್ಚಳದಿಂದ ಕೂಲಿ ಕಾರ್ಮಿಕರಿಗೆ ಇನ್ನು ಹೆಚ್ಚಿನ ಬಲ ಬಂದಂತಾಗಿದೆ.

100 ದಿನ ಕೂಲಿ:ಜಿಲ್ಲೆಯ ಪ್ರತಿ ಅರ್ಹ ಕುಟುಂಬಕ್ಕೂ 100 ದಿನಗಳ ಅಕುಶಲ ಕೂಲಿ ಕೆಲಸ ಒದಗಿಸುವುದರೊಂದಿಗೆ ಕೂಲಿ ಹಣ ₹370 ನೀಡಲಾಗುವುದು. ಬರುವ ಏ. 1ರಿಂದ ಕೂಲಿ ಕೆಲಸ ಒದಗಿಸಲು ಎನ್‌ಎಂಆರ್‌ಗಳನ್ನು ಸಹ ಹಂಚಿಕೆ ಮಾಡಲಾಗುವುದು. ಜಿಲ್ಲೆಯಿಂದ ಕೆಲಸಕ್ಕಾಗಿ ಯಾರೂ ವಲಸೆ ಹೋಗದಂತೆ ಅವರ ಕುಟುಂಬಕ್ಕೆ ಕೆಲಸ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಕಾರ್ಮಿಕರ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸಲು ಮಹಿಳಾಸ್ನೇಹಿ ಕೆಲಸವನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಮಹಿಳೆಯರು ಶೇ. 60ರಷ್ಟು ಭಾಗವಹಿಸುವಂತೆ ಈಗಾಗಲೇ ಸ್ತ್ರೀ- ಚೇತನ ಅಭಿಯಾನದ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 100 ಜನ ಸ್ತ್ರೀಯರಿಗೆ ಕೆಲಸ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ನೋಂದಾಯಿತ ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.ಎಸ್ಪಿ ಸೇರಿ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿ ಪದಕ

ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗುತ್ತದೆ.ಶನಿವಾರ 2024ನೇ ಸಾಲಿನ ಸಿಎಂ ಪದಕ ವಿಜೇತರ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.ಜತೆಗೆ ಶಿಗ್ಗಾಂವಿ ಪೊಲೀಸ್ ಠಾಣೆಯ ಎಚ್. ತಿಪ್ಪೆಸ್ವಾಮಿ ಹಾಗೂ ಸವಣೂರು ಪೊಲೀಸ್ ಠಾಣೆಯ ಬಸವರಾಜ ಡಿ. ಮಲ್ಲೂರ್‌ ಅವರಿಗೂ ಸಿಎಂ ಮೆಡಲ್ ಲಭಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಸೇರಿ ಜಿಲ್ಲೆಯ ಮೂವರಿಗೆ ಸಿಎಂ ಮೆಡಲ್ ಲಭಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು