ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಸಾರಥಿ ಗ್ರಾಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಹರಿಹರದ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜು ಜಂಟಿಯಾಗಿ ಆಯೋಜಿಸಿರುವ 2025–26ನೇ ಸಾಲಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಗಳ ಬೆಳವಣಿಗೆಯೇ ದೇಶದ ಉನ್ನತಿ. ಇಂತಹ ಶಿಬಿರಗಳು ಯುವಜನತೆಗೆ ಸಹಬಾಳ್ವೆ, ಸೌಹಾರ್ದತೆ ಮತ್ತು ಸೇವಾಭಾವ ಬೆಳೆಸಲು ವೇದಿಕೆಯಾಗುತ್ತವೆ ಎಂದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ ಮಾತನಾಡಿ, ಸಮಾಜದಲ್ಲಿ ಕೃಷಿಕ, ಸೈನಿಕ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಬಿರಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಾಯಕತ್ವ ಮತ್ತು ಸೇವಾ ಮನೋಭಾವ ಬೆಳೆಸಬಹುದು ಎಂದರು.ಎನ್‌ಎಸ್‌ಎಸ್ ಸಂಯೋಜಕ ಡಾ.ಅಶೋಕ್ ಕುಮಾರ್ ಪಾಳೇದ ಮಾತನಾಡಿ, ಎನ್‌ಎಸ್‌ಎಸ್ ಯುವಜನತೆಗೆ ಶಿಸ್ತು, ತಾಳ್ಮೆ ಮತ್ತು ಜೀವನ ಮೌಲ್ಯ ಕಲಿಸುವ ಜೀವಂತ ವೇದಿಕೆ ಎಂದು ಹೇಳಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಬದುಕನ್ನು ಅರ್ಥಮಾಡಿಕೊಳ್ಳುವುದು ಮನುಷ್ಯತ್ವವನ್ನು ಗಾಢಗೊಳಿಸುತ್ತದೆ ಎಂದರು.ಪ್ರಾಚಾರ್ಯ ಡಾ. ಶ್ರೀನಿವಾಸ ಅಜೂರ್ ಅಧ್ಯಕ್ಷತೆ ವಹಿಸಿದ್ದರು. ಯುಗರಾಜ ಪಟೇಲ್, ಪಿ.ಶಿವಮೂರ್ತಿ, ಮಂಜಮ್ಮ, ಹನುಮಂತಪ್ಪ, ಡಾ.ಪವಿತ್ರ ಎಸ್.ಟಿ., ಪೂಜಾ, ರಕ್ಷಿತಾ, ಎಚ್.ಎಂ.ವೀಣಾ ಇತರರು ಇದ್ದರು.