ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿಕನ್ನಡಪ್ರಭ ವಾರ್ತೆ ಮುಂಡಗೋಡ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕ-೧ ಮತ್ತು ಘಟಕ-೨ ಸಂಯುಕ್ತ ಆಶ್ರಯದಲ್ಲಿ ಇಂದೂರನಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಸ್ವರ್ಗದ ದಾರಿ ಮೊದಲಿಗೆ ನರಕದ ಅನುಭವ ನೀಡುತ್ತದೆ. ನರಕದ ದಾರಿ ಮೊದಲಿಗೆ ಸ್ವರ್ಗದ ಅನುಭವ ನೀಡಿದರೂ ಕೊನೆಯಲ್ಲಿ ನರಕದತ್ತ ಕರೆದೊಯ್ಯುತ್ತದೆ. ಕಾಯಕವೇ ಕೈಲಾಸ ಎಂದು ತತ್ತ್ವಜ್ಞಾನದ ನುಡಿಗಳನ್ನು ಹಂಚಿಕೊಂಡರು. ಜೊತೆಗೆ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನಪಥವನ್ನು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಪರಿಚಯಿಸಿ, ಶ್ರಮ ಹಾಗೂ ಸಂಯಮದ ಮಹತ್ವವನ್ನು ಒತ್ತಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ಎಸ್ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಮಾಜ ಸೇವಾ ಮನೋಭಾವ, ದೇಶಭಕ್ತಿ ಮತ್ತು ವ್ಯಕ್ತಿತ್ವಾಭಿವೃದ್ಧಿ ಬೆಳೆಸುವ ಅಮೂಲ್ಯ ವೇದಿಕೆಯಾಗಿದೆ. ಕಾಲೇಜು ಶಿಕ್ಷಣ ಎಂದರೆ ಕೇವಲ ಅಂಕಪಟ್ಟಿ ಮಾತ್ರವಲ್ಲ ಅದು ಜೀವನ ರೂಪಿಸುವ ಶಿಕ್ಷಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಎನ್ಎಸ್ಎಸ್ ಘಟಕ-೨ರ ಕಾರ್ಯಕ್ರಮಾಧಿಕಾರಿ ಮತ್ತು ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕನ್ನವಳ್ಳಿ ಪ್ರಸ್ತಾವಿಕ ನುಡಿ ಆಡಿದರು.
ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಫಕೀರಪ್ಪ ನಿಂಗಪ್ಪ ತಾವರಕೇರಿ, ಘಟಕ–೧ರ ಕಾರ್ಯಕ್ರಮಾಧಿಕಾರಿ ರಮೇಶ್, ಸಹಾಯಕ ಪ್ರಾಧ್ಯಾಪಕರಾದ ಬಲರಾಮ ಪಿ.ಜಿ., ಅತಿಥಿ ಉಪನ್ಯಾಸಕ ಶ್ರೀಧರ್, ಕಲಾವತಿ ಮತ್ತು ಪಾರ್ವತಿ ಹಿರೇಮಠ್ ಮುಂತಾದವರಿದ್ದರು.