ಮೆಣಸೆ ಸರ್ಕಾರಿ ಕಾಲೇಜಿನಲ್ಲಿ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಶೃಂಗೇರಿವಿದ್ಯಾರ್ಥಿಗಳಲ್ಲಿ ಸಮಾಜಮಖಿ ಚಟುವಟಿಕೆ, ಚಿಂತನೆಗಳು, ವ್ಯಕ್ತಿತ್ವ ವಿಕಸನ ರೂಪಿಸುವ ಎನ್ಎಸ್ಎಸ್ ಉತ್ತಮ ಸಂಘಟನೆ. ಮಾನವೀಯ ಮೌಲ್ಯಗಳ ವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಮಹತ್ತರ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್.ವೆಂಕಪ್ಪ ಹೇಳಿದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ 56 ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಾನವೀಯ ಮೌಲ್ಯಗಳ ವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಹಾಗೂ ಎನ್ಎಸ್ಎಸ್ ಸ್ವಯಂಸೇವಕರ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ,ಉತ್ತಮ ಸಂಸ್ಕಾರ ಬೆಳೆಸುತ್ತದೆ. ಐಕ್ಯತೆ ಮೂಡಿಸುತ್ತದೆ. ಒಗ್ಗಟ್ಟು ಉಂಟು ಮಾಡುತ್ತದೆ. ಇದು ಜಾತ್ಯತೀತ, ವರ್ಗಾತೀತ ಸಂಘಟನೆ. ಸೇವೆ ಸಂಘಟನೆಯ ಮುಖ್ಯ ಗುರಿ. ಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ಮಾನವೀಯ, ನೈತಿಕ ಮೌಲ್ಯ ಬೆಳೆಸುವ ಜೊತೆಗೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಗಳನ್ನು ಪ್ರೋತ್ಸಾಹಿಸುತ್ತದೆ.ಶ್ರಮದಾನದಂತಹ ಕಾರ್ಯಕ್ರಮದ ಮೂಲಕ ಸಮಾಜಮುಖಿ ಕಾರ್ಯಗಳ ಬಗ್ಗೆ ಆಸಲಕ್ತಿ ಮೂಡಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಮೂಡಿಸುವ ಜೊತೆಗೆ ಮಾನವೀಯ, ನೈತಿಕ ಮೌಲ್ಯ ಬೆಳೆಸಬೇಕು ಎಂದರು.ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಎನ್ಎಸ್ಎಸ್ ಸಂಘಟನೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಸೇರಬೇಕು.ಎನ್ಎಸ್ಎಸ್ ನಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಜೊತೆಗೆ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು. ಕಾಲೇಜು ದಿನಗಳಲ್ಲಿ ಎನ್ಎಸ್ಎಸ್ ಸೇರುವ ಮೂಲಕ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ಎನ್ಎಸ್ಎಸ್ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಜನೆ ಸಂಯೋಜಕ ಮಂಜುನಾಥ್, ಎನ್ಎಸ್ಎಸ್ ಘಟಕ 2 ರ ಯೋಜನಾಧಿಕಾರಿ ರಾಘವೇಂದ್ರ ರೆಡ್ಡಿ, ಐಕ್ಯೂಎಸಿ ಸಂಚಾಲಕ ಡಾ.ಆಶಾ ಬಿ.ಜಿ., ಸಂಜನಾ ಎಸ್ ,ಅಭಿಷೇಕ್, ವಿಕಾಸ್,ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.4 ಶ್ರೀ ಚಿತ್ರ 1-
ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ 56 ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.