ಜೀವದಾರ ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಸ್.ಇ. ಗಿರೀಶ್ ಅವರು, ಸುರಕ್ಷಿತ ರಕ್ತದಾನ ಮತ್ತು ತಪಾಸಣೆ ವಿಧಾನಗಳ ಬಗ್ಗೆ ವಿವರಿಸಿ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕವು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಮತ್ತು ಐಸಿಟಿಸಿ ವಿಭಾಗ, ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ ಸಹಯೋಗದೊಂದಿಗೆ ಎಚ್‌ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.ಈ ವೇಳೆ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ. ಪ್ರಶಾಂತ್ ಮಾತನಾಡಿ, ಎಚ್‌ಐವಿ ಹರಡುವುದನ್ನು ತಡೆಗಟ್ಟುವಲ್ಲಿ ಸರಿಯಾದ ಜ್ಞಾನ, ಸುರಕ್ಷಿತ ಅಭ್ಯಾಸಗಳು, ನಿಯಮಿತ ಪರೀಕ್ಷೆ ಮತ್ತು ಜವಾಬ್ದಾರಿಯುತ ನಡವಳಿಕೆಯ ಮಹತ್ವ ಅಗತ್ಯ. ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳು ಆರೋಗ್ಯಕರ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಚಿಕಿತ್ಸೆಯಲ್ಲಿನ ಪ್ರಗತಿಯನ್ನು ತಿಳಿಸಿದರು.ಜೀವದಾರ ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಸ್.ಇ. ಗಿರೀಶ್ ಅವರು, ಸುರಕ್ಷಿತ ರಕ್ತದಾನ ಮತ್ತು ತಪಾಸಣೆ ವಿಧಾನಗಳ ಬಗ್ಗೆ ವಿವರಿಸಿದರು.ಪಿಕೆಟಿಬಿ ಆಸ್ಪತ್ರೆಯ ಕೌನ್ಸೆಲರ್ ಟಿ.ಬಿ. ನಾಗೇಂದ್ರಪ್ರಸಾದ್, ಕಾಲೇಜಿನ ಆಡಳಿತಾಧಿಕಾರಿ ಫಾ. ಜ್ಞಾನಪ್ರಗಾಸಂ, ಉಪ ಪ್ರಾಂಶುಪಾಲ ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಎನ್ಎಸ್ಎಸ್ ಸಂಯೋಜಕ ಎಲ್. ಜಾನ್ಸನ್ ಅರುಲ್ ರಾಜ್, ಜೆ. ರೂಪಾ ಸೆಲ್ವೇರಿಯಾ, ಎನ್ಎಸ್ಎಸ್ ಸದಸ್ಯರಾದ ಎಂ. ಜೆನಿಫರ್ ಪ್ರಿಯಾ, ಎಚ್.ಆರ್. ಪೂಜಾ, ಜಿ. ವಿದ್ಯಾ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.