ಕೃಷಿ ಸಹಕಾರ ಸಂಘಕ್ಕೆ ನಡೆದ ಚುನಾವಣೆ
ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಾರಾಯಣಗಟ್ಟಳಿಯ ಎನ್ ಟಿ ವಸಂತ್ ಕುಮಾರ್ ಬಹುಮತದಿಂದ ಆಯ್ಕೆಯಾದರು.
ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿಕಟ ಪೂರ್ವ ಅಧ್ಯಕ್ಷ ಯಳವಾರೆ ಕೇಶವಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚುನಾವಣಾ ಕಣದಲ್ಲಿ ನಾರಾಯಣಗಟ್ಟಳ್ಳಿಯ ಎನ್ ಟಿ ವಸಂತ್ ಕುಮಾರ್ ಹಾಗೂ ಕಬ್ಬುರಳ್ಳಿ ರಾಜಣ್ಣ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದರು. 12 ಜನ ನಿರ್ದೇಶಕರು ಹಾಗೂ ಒಂದು ಮತ ತಾಲೂಕು ವ್ಯವಸ್ಥಾಪಕರಿಂದ ಒಟ್ಟು 13 ಮತಗಳು ಚಲಾಯಿಸಲ್ಪಟ್ಟು ಇದರಲ್ಲಿ ವಸಂತ್ ಕುಮಾರ್ ಎಂಟು ಮತಗಳು, ಇವರ ಪ್ರತಿಸ್ಪರ್ಧಿ ಕಬ್ಬೂರು ರಾಜಣ್ಣ ಐದು ಮತ ಪಡೆದು ಮೂರು ಮತಗಳ ಅಂತರದಿಂದ ವಸಂತ್ ಕುಮಾರ್ ಆಯ್ಕೆಯಾದರು, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ಟಿ ವಸಂತ್ ಕುಮಾರ್ ಅವರನ್ನ ಸಂಘದ ಉಪಾಧ್ಯಕ್ಷ ಜಯರಾಮಣ್ಣ ಹಾಗೂ ನಿರ್ದೇಶಕರಾದ ತಿರುಪತಿಹಳ್ಳಿ ಧರ್ಮಣ್ಣ, ನಂಜುಂಡಣ್ಣ, ದಾಸ ನಾಯಕ್, ಶ್ರೀಮತಿ ಪ್ರಮೀಳಮ್ಮ, ನವೀನ್ ಕುಮಾರ್, ಗಿಜಿ ಹಳ್ಳಿ ಲೋಕೇಶ್, ಶ್ರೀಮತಿ ನೀಲಮ್ಮ, ಮತ್ತು ಸಿದ್ದಯ್ಯನವರು ಅಧ್ಯಕ್ಷರನ್ನು ಅಭಿನಂದಿಸಿದರು.