ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ: ಕೆ.ಬಿ.ನಾರಾಯಣ

KannadaprabhaNewsNetwork |  
Published : Apr 11, 2025, 12:38 AM IST
10ಕೆಎಂಎನ್ ಡಿ14 | Kannada Prabha

ಸಾರಾಂಶ

ಜ್ಞಾನದ ವಿಸ್ತಾರ ಅಪಾರವಾದದ್ದು. ಒಬ್ಬ ಸಾಹಿತ್ಯ ವಿದ್ಯಾರ್ಥಿಗಳ ಕಣಜ, ಕನ್ನಡ ಸಿರಿ, ಕನ್ನಡ ಸಾಹಿತ್ಯ ಪರಿಷತ್ ನಿಘಂಟು, ಬ್ಲಾಗ್, ಮೊದಲಾದ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ. ಐಚ್ಛಿಕ ಕನ್ನಡ ಪದವಿ ಪಡೆದರೆ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಇತ್ತೀಚಿನ ದಿನಗಳಲ್ಲಿ ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮದ್ದೂರಿನ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಕೆ.ಬಿ.ನಾರಾಯಣ ಬೇಸರ ವ್ಯಕ್ತಪಡಿಸಿದರು.

ಭಾರತೀ ಕಾಲೇಜು ಕನ್ನಡ ವಿಭಾಗ, ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಮತ್ತು ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ, ಅಂತಿಮ ಬಿ.ಎ.ಐಚ್ಛಿಕ ಕನ್ನಡ 6ನೇ ಚತುರ್ಮಾಸದ ಪಠ್ಯ ಪರಾಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಚ್ಛಿಕ ಕನ್ನಡ ಪದವಿ ಪಡೆದರೆ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ. ಅಲ್ಲದೇ, ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಲಭವಾಗಿ ಐಚ್ಚಿಕ ಕನ್ನಡ ವಿದ್ಯಾರ್ಥಿಗಳೇ ಉತ್ತೀರ್ಣರಾಗುತ್ತಿದ್ದಾರೆ. ಕನ್ನಡದ ಬಗ್ಗೆ ವ್ಯಾಮೋಹ ಬೆಳಸಿಕೊಳ್ಳಿ ಎಂದರು.

ಜ್ಞಾನದ ವಿಸ್ತಾರ ಅಪಾರವಾದದ್ದು. ಒಬ್ಬ ಸಾಹಿತ್ಯ ವಿದ್ಯಾರ್ಥಿಗಳ ಕಣಜ, ಕನ್ನಡ ಸಿರಿ, ಕನ್ನಡ ಸಾಹಿತ್ಯ ಪರಿಷತ್ ನಿಘಂಟು, ಬ್ಲಾಗ್, ಮೊದಲಾದ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದರು.

ಭಾರತೀ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಕಡೆಗೆ ಹೆಚ್ಚು ಗಮನ ನೀಡಿದರೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಒಲವು ಹೊಂದಿರಬೇಕು. ಜೊತೆಗೆ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ಮಾತನಾಡಿ, ಯಾವುದೇ ವಿದ್ಯಾರ್ಥಿ ಯಾವ ಕೋರ್ಸು ಓದಿದರು ಸಾಹಿತ್ಯ ಬೇಕು. ಸಾಹಿತ್ಯ ಬದುಕನ್ನು ಹೇಗೆ ನಡೆಸಬೇಕೆಂದು ತಿಳಿಸುತ್ತದೆ. ಉದ್ಯೋಗದಲ್ಲಿ ಕಾರ್ಯನಿರತರಾದಾಗ ನೆಮ್ಮದಿ ಜೀವನಕ್ಕಾಗಿ ಸಾಹಿತ್ಯ ಅಧ್ಯಯನ ಮಾಡಬೇಕು ಎಂದರು.

ನಂತರ ನಡೆದ ಉಪನ್ಯಾಸದಲ್ಲಿ ಸಂಪನ್ಮೂಲ ವಿದ್ವಾಂಸರಾಗಿ ಆಗಮಿಸಿದ ಮಣಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬರಗೂರಪ್ಪ ಅವರು ಮಧ್ಯಕಾಲಿನ ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ನೆಲೆಗಳು, ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಡಿ.ಸುಂದರಿ ಅವರು, ಶಬ್ದಮಣಿ ದರ್ಪಣಂ:ಆಧುನಿಕ ಚಿಂತನೆಗಳುಸ ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎಚ್.ಶ್ರೀಮೂರ್ತಿ ಅವರು ಶರೀಫರ ತತ್ವ ಪದಗಳು ಮತ್ತು ವಸಾಹತು ಪ್ರಜ್ಞೆ ಎಂಬ ವಿಷಯವನ್ನು ಮಂಡಿಸಿದರು.

ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕ ಡಾ.ಎಚ್.ಎಂ.ನಾಗೇಶ್ ಮಾತನಾಡಿದರು. ವಿವಿಧ ಅಂತಿಮ ಬಿಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಮಾಡಲಾಯಿತು. ಈ ವೇಳೆ ಪ್ರಧಾನ ಸಂಚಾಲಕ ಡಾ.ಎಚ್.ಎಂ.ನಾಗೇಶ್, ಡಾ.ಸಿ.ಮರಯ್ಯ, ಐಕ್ಯೂಎಸಿ ಸಂಯೋಜಕ ಡಾ.ಎಂ.ಪಿ.ತೇಜೇಶ್ ಕುಮಾರ್, ಡಾ.ಪಿ.ಪುನೀತ್, ಸಂಚಾಲಕರಾದ ಮಮತನಾಗ್, ಡಾ.ಜಿ.ಎಂ.ಲಕ್ಷ್ಮಿ, ಡಿ.ಎಲ್.ಸರಿತ ಬಿ.ಡಿ.ಮಹೇಶ್, ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗರಾಜು, ಮಂಡ್ಯ ವಿವಿ ಸಹಾಯಕ ಪ್ರಾಧ್ಯಾಪಕ ಉಮೇಶ್, ಮಣಿಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶಾರದಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?