ಮಂಡ್ಯ ಜಿಲ್ಲೆಯ ಮತದಾರರು ೧೫.೪೧ ಲಕ್ಷದಿಂದ ೧೪.೨೭ ಲಕ್ಷಕ್ಕೆ ಇಳಿಕೆ

KannadaprabhaNewsNetwork |  
Published : Oct 29, 2026, 01:30 AM IST
ಮತದಾರರು ಮತಪಟ್ಟಿ | Kannada Prabha

ಸಾರಾಂಶ

ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಮಂಡ್ಯ ಜಿಲ್ಲೆಯಲ್ಲಿದ್ದ ೧೫,೪೧,೮೫೬ ಮತದಾರರ ಸಂಖ್ಯೆ ೧೪,೨೭,೪೬೨ಕ್ಕೆ ಇಳಿಮುಖವಾಗಿದೆ. ಒಟ್ಟು ೧,೧೪,೩೯೪ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.

- ೧,೧೪,೩೯೪ ಮತದಾರರು ಮತಪಟ್ಟಿಯಿಂದ ಡಿಲೀಟ್- ಪುರುಷ ಮತದಾರರ ಸಂಖ್ಯೆ ೯.೨೭ ಲಕ್ಷದಿಂದ ೬.೯೯ ಲಕ್ಷಕ್ಕೆ ಕುಸಿತ- ಮಹಿಳಾ ಮತದಾರರು ೯.೩೪ ಲಕ್ಷದಿಂದ ೭.೨೭ ಲಕ್ಷಕ್ಕೆ ಇಳಿಮುಖಕನ್ನಡಪ್ರಭ ವಾರ್ತೆ, ಮಂಡ್ಯವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿದ್ದ ೧೫,೪೧,೮೫೬ ಮತದಾರರ ಸಂಖ್ಯೆ ೧೪,೨೭,೪೬೨ಕ್ಕೆ ಇಳಿಮುಖವಾಗಿದೆ. ಒಟ್ಟು ೧,೧೪,೩೯೪ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ೨೦೨೪ರ ಲೋಕಸಭಾ ಚುನಾವಣೆ ಸಮಯದಲ್ಲಿ ಜಿಲ್ಲೆಯಲ್ಲಿ ೭,೬೦,೨೪೮ ಪುರುಷರು, ೭,೮೧,೪೫೨ ಮಹಿಳೆಯರು ಹಾಗೂ೧೫೬ ತೃತೀಯ ಲಿಂಗಿಗಳು ಸೇರಿ ೧೫,೪೧,೮೫೬ ಮತದಾರರಿದ್ದರು. ಇದೀಗ ಬಿಡುಗಡೆಯಾಗಿರುವ ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯಲ್ಲಿ ೬,೯೯,೬೫೭ ಪುರುಷರು, ೭,೨೭,೭೧೮ ಮಹಿಳೆಯರಿದ್ದು, ೮೭ ತೃತೀಯ ಲಿಂಗದ ಮತದಾರರಿದ್ದಾರೆ. ಅಲ್ಲಿಗೆ ೬೦,೫೯೧ ಪುರುಷರು, ೫೩,೭೩೪ ಮಹಿಳೆಯರು ಹಾಗೂ ೬೯ ತೃತೀಯ ಲಿಂಗಿಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಪುರುಷ-ಮಹಿಳಾ ಮತದಾರರು ಎಷ್ಟು ಇಳಿಕೆಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ೧೩೦೧೮ ಪುರುಷರು, ೧೧,೫೦೦ ಮಹಿಳೆಯರು, ಮದ್ದೂರು ಕ್ಷೇತ್ರದಲ್ಲಿ ೮೦೫೯ ಪುರುಷರು ೮೧೧೯ ಮಹಿಳೆಯರು, ಮೇಲುಕೋಟೆ ಕ್ಷೇತ್ರದಲ್ಲಿ ೩೦೦೦ ಪುರುಷರು, ೧೮೧೯ ಮಹಿಳೆಯರು, ಮಂಡ್ಯ ಕ್ಷೇತ್ರದಲ್ಲಿ ೧೪೯೧೪ ಪುರುಷರು, ೧೪೨೬೬ ಮಹಿಳೆಯರು, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ೭೩೦೪ ಪುರುಷರು, ೬೬೦೫ ಮಹಿಳೆಯರು, ನಾಗಮಂಗಲ ಕ್ಷೇತ್ರದಲ್ಲಿ ೫೮೧೪ ಪುರುಷರು, ೫೧೯೬ ಮಹಿಳೆಯರು ಹಾಗೂ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ ೮೪೮೨ ಪುರುಷರು, ೬೨೨೯ ಮಹಿಳೆಯರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.ಶೇ.೭೦.೦೯ರಷ್ಟು ಮತದಾರರುಜಿಲ್ಲೆಯಲ್ಲಿರುವ ಒಟ್ಟು ೨೦,೩೬,೫೫೭ ಜನಸಂಖ್ಯೆಯಲ್ಲಿ ೧೪,೨೭,೪೬೨ ಮತದಾರರಿದ್ದು, ಶೇ.೭೦.೦೯ರಷ್ಟು ಮತದಾರರಿದ್ದಾರೆ. ಮಳವಳ್ಳಿ ಕ್ಷೇತ್ರದಲ್ಲಿ ೩,೧೯,೪೬೮ ಜನಸಂಖ್ಯೆಗೆ ೨,೨೬,೩೫೨ ಮತದಾರರಿದ್ದು ಶೇ.೭೦.೮೫, ಮದ್ದೂರು ಕ್ಷೇತ್ರದಲ್ಲಿ ೨,೮೦,೧೫೯ ಜನಸಂಖ್ಯೆಯಲ್ಲಿ ೧,೯೬,೯೯೩ ಮತದಾರರಿದ್ದು ಶೇ.೭೦.೩೧, ಮೇಲುಕೋಟೆ ಕ್ಷೇತ್ರದಲ್ಲಿ ೨,೭೭,೫೨೩ ಜನಸಂಖ್ಯೆಗೆ ೧,೯೬,೨೫೩ ಮತದಾರರಿದ್ದು ಶೇ.೭೦.೭೨, ಮಂಡ್ಯ ಕ್ಷೇತ್ರದಲ್ಲಿ ೩,೦೯,೧೯೨ ಜನಸಂಖ್ಯೆಗೆ ೧,೯೬,೨೧೮ ಮತದಾರರಿದ್ದು, ಶೇ.೬೩.೪೬, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ೨,೯೧,೫೦೩ ಜನಸಂಖಯೆಗೆ ೨,೦೧,೨೮೫ ಮತದಾರರಿದ್ದು ಶೇ.೬೯.೦೫, ನಾಗಮಂಗಲ ಕ್ಷೇತ್ರದಲ್ಲಿ ೨,೬೪,೯೪೨ ಜನಸಂಖ್ಯೆಗೆ ೨,೦೩,೬೭೨ ಮತದಾರರಿದ್ದು ಶೇ.೭೬.೮೭ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ೨,೯೩,೭೭೦ ಜನಸಂಖ್ಯೆಗೆ ೨,೦೬,೬೮೯ ಮತದಾರರಿದ್ದು ಶೇ.೭೦.೩೬ರಷ್ಟು ಮತದಾರರನ್ನು ಹೊಂದಿದೆ.ಐವರು ಅನಿವಾಸಿ ಭಾರತೀಯರುಜಿಲ್ಲೆಯಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ ಐದು ಮಂದಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಕೆ.ಆರ್.ಪೇಟೆಯಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ, ಮಂಡ್ಯದಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆ ಹಾಗೂ ಶ್ರೀರಂಗಪಟ್ಟಣದಲ್ಲಿ ಒಬ್ಬ ಮಹಿಳೆ ಅನಿವಾಸಿ ಭಾರತೀಯರಾಗಿದ್ದಾರೆ.

೮೫ ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ವಿವರವಿಧಾನಸಭಾ ಕ್ಷೇತ್ರ ಗಂಡು ಹೆಣ್ಣು ಒಟ್ಟುಮಳವಳ್ಳಿ ೧೦೩೩ ೧೭೨೮ ೨೭೬೧ಮದ್ದೂರು ೭೪೯ ೧೪೬೬ ೨೨೧೫ಮೇಲುಕೋಟೆ ೮೬೯ ೧೪೪೫ ೨೩೧೪ಮಂಡ್ಯ ೬೩೯ ೧೦೪೩ ೧೬೮೨ಶ್ರೀರಂಗಪಟ್ಟಣ ೭೪೬ ೧೩೧೮ ೨೦೬೪ನಾಗಮಂಗಲ ೯೧೭ ೧೫೮೨ ೨೪೯೯ಕೃಷ್ಣರಾಜಪೇಟೆ ೯೯೯ ೧೭೨೯ ೨೭೨೮ಒಟ್ಟು ೫೯೫೨ ೧೦೩೧೧ ೧೬೨೬೩ಯುವ ಮತದಾರರ ವಿವರಕ್ಷೇತ್ರ ಗಂಡು ಹೆಣ್ಣು ಒಟ್ಟುಮಳವಳ್ಳಿ ೧೮೨೯ ೧೭೦೯ ೩೫೩೮ಮದ್ದೂರು ೧೮೩೮ ೧೭೯೦ ೩೬೨೮ಮೇಲುಕೋಟೆ ೧೯೨೪ ೧೭೭೭ ೩೭೦೧ಮಂಡ್ಯ ೧೪೨೬ ೧೪೧೩ ೨೮೩೯ಶ್ರೀರಂಗಪಟ್ಟಣ ೧೭೭೪ ೧೬೬೯ ೩೪೪೩ನಾಗಮಂಗಲ ೧೭೨೪ ೧೬೪೯ ೩೩೭೩ಕೃಷ್ಣರಾಜಪೇಟೆ ೧೮೬೮ ೧೮೯೯ ೩೭೬೭ಒಟ್ಟು ೧೨೩೮೩ ೧೧೯೦೬ ೨೪೨೮೯

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್