ಕನ್ನಡಪ್ರಭ ವಾರ್ತೆ ಗೋಕಾಕಶುಶ್ರೂಷಕರಿಗೆ ತಾಯಿಯಂತಹ ಸ್ಥಾನವಿದ್ದು, ಅದನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವಂತೆ ನಗರದ ಕೆಎಲ್‌ಇ ಆಸ್ಪತ್ರೆಯ ಡಾ.ಧರೆಪ್ಪ ಚೌಗಲಾ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರು ಬೆನ್ನೆಲುಬಾಗಿದ್ದು, ಜನತೆಯ ಆರೋಗ್ಯದಿಂದ ದೇಶ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ಈ ಕ್ಷೇತ್ರದಲ್ಲಿ ಮಾದರಿಯಾಗಿ ಸೇವೆ ಸಲ್ಲಿಸಿದ ನೈಟಿಗನ್ ಅವರ ನೆನಪಿಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತಾವುಗಳು ಅವರ ಆದರ್ಶಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಅವರಂತೆ ಮಾದರಿಯಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಕೆಎಲ್‌ಇ ಸಿ.ಎಸ್.ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಬಿ.ಮೇವುಂಡಿಮಠ, ನರ್ಸಿಂಗ್ ಸೈನ್ಸ್‌ನ ಪ್ರಾಚಾರ್ಯ ಈರಣ್ಣ ಕಾಜಗಾರ ಇದ್ದರು. ಈ ಸಂದರ್ಭದಲ್ಲಿ ಶುಶ್ರೂಷಕರ ದಿನಾಚರಣೆ ನಿಮಿತ್ತ ಶುಶ್ರೂಷಕಿ ಸುಮಂಗಲಾ ತಿಗಡೊಳ್ಳಿ ಅವರನ್ನು ಸತ್ಕರಿಸಲಾಯಿತು.