ನರ್ಸಿಂಗ್ ವಿದ್ಯಾರ್ಥಿಗಳಿಗೆ ದೀಪ ಪ್ರಜ್ವಲನ ಕಾರ್ಯಕ್ರಮ
ರೋಗಿಗಳ ಆರೈಕೆ, ಕರುಣೆ ಹಾಗೂ ಮಾನವೀಯತೆಗೆ ನರ್ಸಿಗ್ ವೃತ್ತಿ ಆಧಾರಸ್ಥಂಭವಾಗಿದೆ ಎಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ಹರೀಶ್ ಅಭಿಪ್ರಾಯಪಟ್ಟರು.ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದೀಪ ಪ್ರಜ್ವಲನ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ನರ್ಸಿಂಗ್ ಅಧೀಕ್ಷಕಿ ವರಮಹಾಲಕ್ಷ್ಮೀ ಮಾತನಾಡಿ, ನರ್ಸಿಂಗ್ ಕೇವಲ ಒಂದು ವೃತ್ತಿಯಲ್ಲ. ಮಾನವರಿಗೆ ಸಲ್ಲಿಸುವ ಪವಿತ್ರ ಸೇವೆಯಾಗಿದೆ. ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲೋರೆನ್ಸ್ ನೈಟಿಂಗಲ್ ಅವರ ಸ್ಮರಣಾರ್ಥ ಕಾಲೇಜಿನಲ್ಲಿ ದೀಪ ಪ್ರಜ್ವಲನ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು.ನರ್ಸಿಂಗ್ ಸಂಯೋಜಕ ಡಾ.ಗಣೇಶ್ ಪಿ.ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪಾಲಿಸಬೇಕು. ಸೇವಾ ಮನೋಭಾವದಿಂದ ರೋಗಿಗಳ ಆರೈಕೆ ಮಾಡಬೇಕು ಎಂದು ಸಲಹೆ ನೀಡಿದರು.ಪ್ರಭಾರ ಪ್ರಾಂಶುಪಾಲ ಕೆ.ಜೆ.ಜಾಸ್ಮಿನ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಿ.ಟಿ.ಸಚಿನ್, ಡಾ.ಶಶಾಂಕ್, ಡಾ.ರಶ್ಮಿ, ಡಾ.ಮಾಲಿನಿ, ಡಾ.ಪ್ರತಾಪ್, ಡಾ.ಸವಿತಾ, ಡಾ.ಶಶಿಕಾಂತ್ ಇದ್ದರು.ಫೋಟೋ
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದೀಪ ಪ್ರಜ್ವಲನ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಡಾ.ಎಂ.ಆರ್.ಹರೀಶ್ ಉದ್ಘಾಟಿಸಿದರು. ವರಮಹಾಲಕ್ಷ್ಮೀ, ಡಾ.ಗಣೇಶ್ ಪಿ.ಸುಬ್ಬಯ್ಯ ಮೊದಲಾದವರಿದ್ದರು.