ಸ್ವಾಸ್ತ್ಯ ಸಮಾಜ,ನಿರ್ಮಾಣಕ್ಕೆ ಪೌಷ್ಠಿಕ ಆಹಾರ ಅಗತ್ಯ

KannadaprabhaNewsNetwork |  
Published : Jul 18, 2024, 01:33 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ದೀಪಾ ಮಾತನಾಡಿದರು.  | Kannada Prabha

ಸಾರಾಂಶ

ಇಂದಿನ ಜೀವನ ಪದ್ಧತಿಯಲ್ಲಿ ಸರಿಯಾಗಿ ಆಹಾರ ಪದ್ಧತಿಯನ್ನು ಅನುಷ್ಠಾನ ಮಾಡದೆ ಇದ್ದರೆ ಮುಂದಕ್ಕೆ ಕುಟುಂಬದ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ

ಗದಗ: ಕುಟುಂಬದ ಆರೋಗ್ಯ ವೃದ್ಧಿ ಹಾಗೂ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮನುಷ್ಯನ ಅರೋಗ್ಯ ಅತೀ ಮುಖ್ಯ, ಆರೋಗ್ಯ ಉತ್ತಮವಿರಬೇಕಾದರೆ ಪೌಷ್ಠಿಕ ಆಹಾರ ಸೇವನೆ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಬೆಳವಣಿಗೆಯಲ್ಲಿ ಪೌಷ್ಠಿಕ ಆಹಾರ ಅತೀ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ಹೇಳಿದರು.

ನಗರದ ಬಸವೇಶ್ವರ ನಗರದ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಪೌಷ್ಠಿಕ ಆಹಾರ ಬಳಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಜೀವನ ಪದ್ಧತಿಯಲ್ಲಿ ಸರಿಯಾಗಿ ಆಹಾರ ಪದ್ಧತಿಯನ್ನು ಅನುಷ್ಠಾನ ಮಾಡದೆ ಇದ್ದರೆ ಮುಂದಕ್ಕೆ ಕುಟುಂಬದ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ದೀಪಾ ಮಾತನಾಡಿ, ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಯಲ್ಲಿ ಸರಿಯಾದ ಆಹಾರ ಪದ್ಧತಿ ಮಾಡಿ, ಪೌಷ್ಠಿಕ ಆಹಾರದ ಬಗ್ಗೆ ತಿಳಿಯಬೇಕಾದ ಅನಿವಾರ್ಯತೆ ಇದೆ. ಕುಟುಂಬ ಆರೋಗ್ಯವಾಗಿ ಇರಬೇಕಾದರೆ ಮನೆಯಲ್ಲಿ ಪೌಷ್ಠಿಕ ಆಹಾರ ತಯಾರಿ ಮಾಡಿ ಬಳಕೆ ಮಾಡಬೇಕು, ವಿವಿಧ ಆಹಾರದಲ್ಲಿ ಇರುವ ಪೌಷ್ಠಿಕತೆ ಬಗ್ಗೆ ತಿಳಿಸಿಕೊಟ್ಟು ಮಾಹಿತಿ ನೀಡಿದರು.

ನಿವೃತ್ತ ಶಿಕ್ಷಕಿ ಶಾರದಾ ಸ್ವಚ್ಛ ಹಾಗೂ ಬಿಸಿಬಿಸಿ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಂಡು ಕುಟುಂಬವನ್ನು ರಕ್ಷಿಸುವಂತೆ ಮಾಹಿತಿ ನೀಡಿದರು. ಶ್ರೀದೇವಿ ಗೊಂಡಬಾಳ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಜ್ಞಾನ ವಿಕಾಸ ಸಮನ್ವಯಧಿಕಾರಿ ಗಂಗಮ್ಮ ಮಾತಾಡಿದರು. ವಿಜಯಲಕ್ಷ್ಮೀ ಸ್ವಾಗತಿಸಿದರು. ಗೀತಾ ವಂದಿಸಿದರು. ಸುಜಾತ ಹಾಗೂ ಒಕ್ಕೂಟದ ಅಧ್ಯಕ್ಷರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ