ಕನ್ನಡಪ್ರಭ ವಾರ್ತೆ ಮೈಸೂರು
ಟೂಲ್- ಅಸಿಸ್ಟೆಡ್ ಇಂಪ್ಯಾಕ್ಟ್ ಫುಲ್ ಅಕಾಡೆಮಿಕ್ ರೈಟಿಂಗ್: ಕ್ರಾಫ್ಟಿಂಗ್ ಮಲ್ಟಿಡಿಸಿಪ್ಲಿನರಿ, ಪಬ್ಲಿಶ್-ರೆಡಿ ಪೇಪರ್ಸ್ ಫಾರ್ ಇಂಡೆಕ್ಸ್ಡ್ ಜರ್ನಲ್ಸ್ ಶೀರ್ಷಿಕೆಯಡಿ ಈ ಕಾರ್ಯಾಗಾರ ಯಶಸ್ವಿಯಾಗಿ ಉದ್ಘಾಟನೆಗೊಂಡಿತು.
ನಗರದ ಎಸ್.ಡಿ.ಎಂ ಐಎಂಡಿ ಕಾರ್ಯಾಚರಣೆ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ.ಆರ್. ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ, ಸಂಶೋಧನಾ ಭೂದೃಶ್ಯದ ನಕ್ಷೆ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ರೆವರೆಂಡ್ ಡಾ. ಲೂರ್ದು ಪ್ರಸಾದ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮೇರಿ ಲೂಯಿಸಾ ವಿಶೇಷ ಆಶೀರ್ವಚನ ನೀಡಿದರು.ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ. ಡಿ. ಸಲ್ಡಾನ್ಹಾ, ಉಪ ಪ್ರಾಂಶುಪಾಲ ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಐಕ್ಯೂಎಸಿ ಸಂಯೋಜಕರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎ. ಥಾಮಸ್ ಗುಣಶೀಲನ್, ಪಿಜಿ ನಿರ್ದೇಶಕ ಡಾ.ಸಿ.ಎ. ನೂರ್ ಮುಬಶೀರ್ ಮತ್ತು ಕಾರ್ಯಾಗಾರದ ಸಂಯೋಜಕಿ ಡಾ.ವಿ. ದೀಪಾ ಇದ್ದರು.
ಐಕ್ಯೂಎಸಿ ಸಹ-ಸಂಯೋಜಕಿ ಡಾ.ವಿ. ದೀಪಾ ಸ್ವಾಗತಿಸಿದರು. ಬಿಬಿಎ ವಿಭಾಗದ ಪ್ರಿಯಾಂಕಾ ಒಲಿವೆರಾ ಮತ್ತು ಬಿಕಾಂ ವಿಭಾಗದ ಬಿ. ಕವಿತಾ ನಿರೂಪಿಸಿದರು. ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಜಾನ್ ಜೋಸೆಫ್ ಮತ್ತು ಬಿ.ಕಾಂ ವಿಭಾಗದ ಡಾ. ಸುನಿಲ್ ಡಿ''''''''ಸೋಜಾ ಅವರು ನೇರ ಪ್ರಸಾರವನ್ನು ನಿರ್ವಹಿಸಿದರು.