ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಹಿಂದುಳಿದ ವರ್ಗಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿ ಯಾವುದೇ ಒಂದು ವರ್ಗ ಅಥವಾ ಕೋಮಿನ ಪಕ್ಷವಲ್ಲ. ವಿವಿಧ ಜಾತಿ-ಜನಾಂಗಗಳ ಒಟ್ಟು ಬಲವೇ ಬಿಜೆಪಿಯಲ್ಲಿ ಅಡಗಿದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ನಾಯಕರಿಲ್ಲದೇ ಸೊರಗಿದೆ. ಜಿಲ್ಲೆಯಲ್ಲಿ ಸುಮಾರು ಎಂಟೂವರೆ ಲಕ್ಷಕ್ಕೂ ಅಧಿಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳಿವೆ. ಅವುಗಳಲ್ಲಿ ಬಿಜೆಪಿಗೆ ೬ ರಿಂದ ೭ ಲಕ್ಷ ಮತಗಳು ಚಲಾವಣೆಯಾಗುವಂತೆ ಸಂಘಟಿತರಾಗಿ ಬಿ.ವೈ.ರಾಘವೇಂದ್ರರಿಗೆ ಸುಲಭ ಜಯ ತಂದು ಕೊಡೋಣ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣೆಗೆ ಕೈಗೊಂಡ ನಿಲುವು ಹಾಗೂ ದೇಶದ ಜನತೆ ಆರ್ಥಿಕವಾಗಿ ಸಬಲರಾಗಲು ಕೈಗೊಂಡ ಯೋಜನೆಗಳ ಜನತೆಗೆ ಮುಟ್ಟಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕಿದೆ. ದೇಶದ ಹಿತದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯಕತೆ ಯುವಕರಿಗೆ ಮನದಟ್ಟು ಮಾಡಿ ಮತಯಾಚಿಸಲಿದ್ದೇವೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗಾಗಿ ಸನ್ನದ್ಧರಾಗೋಣ ಎಂದರು.ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಜಿ. ಪ್ರಶಾಂತ್, ದೇಶದಲ್ಲಿ ಶೇ. ೫೨ರಷ್ಟು ಮಂದಿ ಹಿಂದುಳಿದ ವರ್ಗದವರಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ರಾಜಕಾರಣ ನಿಂತಿರುವುದು ಒಬಿಸಿಯಿಂದ ಆದ್ದರಿಂದ ಮುಂದಿನ ೩೭ ದಿನಗಳಲ್ಲಿ ತಮ್ಮ ತಮ್ಮ ನಾಯಕತ್ವದೊಂದಿಗೆ ಚುನಾವಣೆಯ ಒಂದು ಸ್ಪರ್ಧೆ ಎಂದು ಅರಿತು ಅಭ್ಯರ್ಥಿ ಗೆಲುವಿಗೆ ಮುನ್ನಡೆಯೋಣ ಎಂದರು. ೨೦೧೮ರಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪರಿಗೆ ಬಂದ ಮತಗಳಿಗಿಂತಲೂ ಹೆಚ್ಚು ಬಿ.ವೈ.ರಾಘವೇಂದ್ರರಿಗೆ ಚಲಾವಣೆಯಾಗುವಂತೆ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.
ಜಿಲ್ಲಾ ಸಹ ಪ್ರಭಾರ ಶ್ರೀನಿವಾಸ್, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ರಾಜಶೇಖರ ಗಾಳಿಪುರ, ಎ.ಎಲ್. ಅರವಿಂದ್, ನಿರಂಜನ ಕುಪ್ಪಗಡ್ಡೆ, ಮಹಾಬಲೇಶ್ ತಡಗಳಲೆ, ಡಿ. ಶಿವಯೋಗಿ, ಆನಂದ್ ಜನ್ನೆಹಕ್ಲು, ಮಹಾಬಲೇಶ್ವರ ತಡಗಳಲೆ ಸೇರಿ ಇತರರಿದ್ದರು.