ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಗರ ಪೊಲೀಸ್ ಠಾಣೆ ಹಾಗೂ ಎನ್.ಎಚ್ ಎಐ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನ ಜೀವ ಅಮೂಲ್ಯವಾದದ್ದು, ವಾಹನ ಚಾಲಕರು ತಮ್ಮ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳದೆ ಸರ್ಕಾರ ರೂಪಿಸಿರುವ ರಸ್ತೆ ಸುರಕ್ಷಾ ನಿಯಮ ಪಾಲಿಸಬೇಕು. ಅತಿವೇಗ ಸಾವು- ನೋವುಗಳಿಗೆ ಕಾರಣವಾಗುವುದಲ್ಲದೆ ಮನೆ ಮಂದಿಯೆಲ್ಲಾ ಹಿಂಸೆ ಅನುಭವಿಸುವಂತೆ ಮಾಡಿಬಿಡುತ್ತದೆ. ವಾಹನ ಚಲಾವಣೆ ವೇಳೆ ಮೊಬೈಲ್ ಬಳಸಬಾರದು. ಧೂಮಪಾನ, ಕುಡಿತದ ಚಟಗಳೂ ಸಹ ಚಟ್ಟಕ್ಕೆ ಏರಿಸಿ ಬಿಡುತ್ತವೆ. ಚಾಲನೆ ಕಡೆ ಸದಾ ಜ್ಞಾನವಿರಲಿ. ತಮ್ಮ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನಾ ಸ್ವ ತಪಾಸಣೆ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಒತ್ತಡಗಳಿಂದ ರಸ್ತೆಗೆ ವಾಹನಗಳನ್ನು ಇಳಿಸದೆ ಉತ್ತಮ ಮನಃಸ್ಥಿತಿಯಲ್ಲಿ ಚಾಲನೆಗೆ ಮುಂದಾಗಬೇಕು. ಕಾನೂನನ್ನು ಗೌರವಿಸಿ, ನಿಯಮಗಳನ್ನ ಪಾಲಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಠಾಣಾ ಸಬ್ ಇನ್ಸಪೆಕ್ಟರ್ ಕೃಷ್ಣಪ್ಪ, ಎನ್ಎಚ್ ಎಐ ಅಧಿಕಾರಿಗಳಾದ ವಿಶಾಲ್, ರಾಮಲಿಂಗಂ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.