ಕನ್ನಡಪ್ರಭ ವಾರ್ತೆ ಭಾಲ್ಕಿ
ಬಸವಾದಿ ಶರಣರ ವಚನಗಳ ತಳಹದಿಯ ಮೇಲೆ ಕಾನೂನು, ಕಾಯಿದೆ ರೂಪಗೊಂಡಿವೆ. ಹಾಗಾಗಿ ವಚನಗಳು ಪಾಲಿಸಿದರೆ ಕಾನೂನು ಪಾಲಿಸಿದಂತಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಆನಂದ ಕೊಣ್ಣೂರು ಹೇಳಿದರು.ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೇಕರ ಮಂಜಪ್ಪನವರ ವೇದಿಕೆಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 134ನೆಯ ಜಯಂತ್ಯುತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಮಕ್ಕಳ ವಚನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವ ಜವಾಬ್ದಾರಿ ಮಠ ಮಾನ್ಯಗಳ ಮೇಲಿದೆ. ಅಂತಹ ಕರ್ತವ್ಯವನ್ನು ಈ ಭಾಗದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರು ಚಾಚು ತಪ್ಪದೆ ಪಾಲಿಸಿ, ಸಮೃದ್ಧ ಸಮಾಜ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.
ವಿವಿಧ ಸ್ಪರ್ಧೆಗಳು ಏರ್ಪಡಿಸಿ ಮಕ್ಕಳಲ್ಲಿ ಈಗಿನಿಂದಲೇ ವಚನ, ಶರಣರ ಬಗ್ಗೆ ಪ್ರಜ್ಞೆ ಮೂಡಿಸುತ್ತಿರುವುದು ಮಾದರಿ ಎನಸಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ್ ಮಾತನಾಡಿ, ಈ ಭಾಗದಲ್ಲಿ ಪೂಜ್ಯರು ಅನ್ನದಾನದ ಜತೆಗೆ ವಿದ್ಯಾದಾನ ನೀಡುತ್ತಿರುವುದು ಶ್ರೇಷ್ಠವೆನಸಿದೆ ಮಕ್ಕಳು ದೈಹಿಕ ಮಾನಸಿಕವಾಗಿ ಪ್ರಬುದ್ಧತೆ ಹೊಂದಿ ಸರ್ವಾಂಗೀಣ ವಿಕಾಸ ಹೊಂದಬೇಕು ಎಂದು ತಿಳಿಸಿದರು.
ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ಶರಣರ ಪರಿಕಲ್ಪನೆ, ವೇದಿಕೆ ಧೈರ್ಯ, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಶಿಕ್ಷಕರಾದವರು ಮಕ್ಕಳಿಗೆ ಬೋಧನೆ ಜತೆಗೆ ಜೀವನದ ಮೌಲ್ಯಗಳನ್ನು ಹೇಳಿ ಸುಂಸ್ಕೃತರನ್ನಾಗಿ ಬೆಳೆಸಬೇಕು ಎಂದು ತಿಳಿಸಿದರು.ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.
ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಯುವ ಮುಖಂಡ ಶಿವು ಲೋಖಂಡೆ, ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ವಕೀಲರ ಸಂಘದ ಅಧ್ಯಕ್ಷ ರಾಹುಲ ಸಾವಳೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಹಿರಿಯ ಸಾಹಿತಿ ಸೋಮನಾಥ ನುಚ್ಚಾ, ಪ್ರಮುಖರಾದ ಸಂತೋಷ ಬಿಜಿ ಪಾಟೀಲ್, ಸಂಗಮೇಶ ಗುಮ್ಮೆ, ದಿಲೀಪ ಮಡಿವಾಳ, ಸಂತೋಷ ಹಡಪದ, ಸಂತೋಷ ನಾಟೇಕರ್, ಬಾಬುರಾವ ಸೋನಕಾಂಬಳೆ, ಬಸವರಾಜ ಹಡಪದ, ಸುವರ್ಣಾ ಚಿಮಕೋಡೆ, ಮಲ್ಲಮ್ಮ ಪಾಟೀಲ್, ಮಲ್ಲಮ್ಮ ನಾಗನಕೇರೆ, ವೀರಣ್ಣ ಕುಂಬಾರ, ಸಂಗ್ರಾಮ ಇಂಗಳೆ, ರಾಜಕುಮಾರ ಹೂಗಾರ ಸೇರಿದಂತೆ ಹಲವರು ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಿಸಿ, ವಂದಿಸಿದರು.