ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ

KannadaprabhaNewsNetwork |  
Published : Aug 30, 2026, 02:00 AM IST
ಫೋಟೋವಿವರ- (29ಎಚ್‌ಪಿಟಿ2) ಹೊಸಪೇಟೆ ನಗರದ ಶ್ರೀಜಗಳಿಕಟ್ಟೆ ಶ್ರೀರಾಘವೇಂದ್ರಸ್ವಾಮಿ ಗುರುಸೌರ್ವಭೌಮರ 355 ನೇ ಪೂರ್ವಾರಾಧನೆ ಅಂಗವಾಗಿ ರಾಯರ ಬೃಂದಾವನ ಕ್ಕೆ ವಿಶೇಷ ಅಲಂಕಾರ ನೆರವೇರಿಸಲಾಯಿತು | Kannada Prabha

ಸಾರಾಂಶ

ಹೊಸಪೇಟೆ ನಗರ ಸೇರಿದಂತೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ಹೊಸಪೇಟೆ: ನಗರ ಸೇರಿದಂತೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ನಗರದ ರಾಣಿಪೇಟೆ ರಾಯರ ಮಠದಲ್ಲಿ ಪೂರ್ವಾರಾಧನೆ ಪ್ರಯುಕ್ತ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ಜರುಗಿತು. ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ಭಜನೆ, ಕೀರ್ತನೆ ನೆರವೇರಿಸಲಾಯಿತು.

ಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಾರುತಿ ಆಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಗರದ ವಿಜಯ ಚಿತ್ರಮಂದಿರ ಸಮೀಪದ ರಾಯರ ಮಠದಲ್ಲಿ ಬೆಳಗ್ಗೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ನಡೆಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿವರಣೆ ಮಾಡಲಾಯಿತು.

ಆರಾಧನೆ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷವಾಗಿ ರಜತ, ರೇಷ್ಮೆ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು. ಮಠಾಧಿಕಾರಿ ಭೀಮಸೇನಾಚಾರ್ಯ, ಪವನಾಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಲೂಕಿನ ಕಮಲಾಪುರ ಪಟ್ಟಣದ ಶ್ರೀರಾಯರ ಮಠದಲ್ಲಿ ವಿಶೇಷವಾಗಿ ಪೂರ್ವಾರಾಧನೆ ನಡೆಯಿತು. ಕನಕಾಭಿಷೇಕ, ರಾಯರ ಪಾದುಕ ಪೂಜೆ, ನೈವೇದ್ಯ ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ​ರ್ಡಿನೇಟರ್ ಅನಂತ ಪದ್ಮನಾಭ, ವಿಚಾರಣಕರ್ತ ನಾಗರಾಜ್ ರಾವ್ ಕರಣಂ, ಅರ್ಚಕ ನರಸಿಂಹ ಆಚಾರ್ಯ, ಶಿರೆಕೊಳ್ಳ ಗುರುರಾಜ್ ಆಚಾರ್ಯ, ಹರಿಗೌಡ, ರಘು, ಗೋಪಾಲ್, ಮುರಳಿ, ಪಾಂಡುರಂಗ, ವಾದಿರಾಜ, ಸುತರಾಜ್ ಇತರರಿದ್ದರು.

ಗಾಂಧಿ ಕಾಲೋನಿ ರಾಯರ ಮಠದಲ್ಲಿ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ನಡೆಸಲಾಯಿತು. ವ್ಯವಸ್ಥಾಪಕ ತಿರುಮಲೇಶ್ ಇತರರಿದ್ದರು.

ಸ್ಥಳೀಯ ಟಿ.ಬಿ. ಡ್ಯಾಂ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಪೂರ್ವಾರಾಧನೆ ನಡೆಯಿತು. ಪಂಚಾಮೃತಾಭಿಷೇಕ, ಅರ್ಚನೆ, ಹಸ್ತೋದಕ, ಮಹಾನೇವೈದ್ಯ, ಮಠದ ಆವರಣದಲ್ಲಿ ರಥೋತ್ಸವ ನಡೆಯಿತು. ಶ್ರೀ ಹರಿ ಸರ್ವೋತ್ತಮ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು
ಸಿದ್ದಾಪುರ ಟಿಎಂಎಸ್‌ಗೆ ₹೪.೫೫ ಕೋಟಿ ನಿವ್ವಳ ಲಾಭ: ಆರ್.ಎಂ. ಹೆಗಡೆ