ನೆಲಮಂಗಲ: ನಗರದ ಬಸ್ ನಿಲ್ದಾಣ ಬಳಿ ವಾಹನ ದಟ್ಟಣೆ ಹಾಗೂ ಬಸ್‌ನಿಲ್ದಾಣ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಟಿ ನೀಡಿ ಪರಿಶೀಲಿಸಿದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಾಸಕರು ಬಹದಿನಗಳಿಂದ ಬಸ್ ನಿಲ್ದಾಣ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಮನವಿ ಮಾಡಿದ್ದರು. ಈಗಾಗಲೇ ಬಸ್ ನಿಲ್ದಾಣದ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೆ.1ರಿಂದ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುಸಜ್ಜಿತ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗುವುದು ಎಂದರು.
ಬೆಂಗಳೂರಿನ ಕಚೇರಿಯಲ್ಲಿ ಶಾಸಕ ಎನ್.ಶ್ರೀನಿವಾಸ್ ಒಳಗೊಂಡು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸೆ.1ರಂದು ಸಭೆ ಕರೆದು ನಗರಸಭೆ ಹಾಗೂ ಕೆಎಸ್‌ಆರ್‌ಟಿ ನಡುವೆ ಒಡಂಬಡಿಕೆ ಕುರುತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಾಗಿ ಸಚಿವರು ತಿಳಿಸಿದರು.ಮಾತಿನ ಚಕಮಕಿ: ಬಸ್ ನಿಲ್ದಾಣ ಕಾಮಗಾರಿ ಕುರಿತು ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಇಂಜಿನಿಯರ್ ವಿಫಲರಾಗಿದ್ದಾರೆಂದು ಕೆಲ ಮುಖಂಡರು ಅರೋಪಿಸಿದರು. ಈ ಕುರಿತು ಸಚಿವರ ಬೆಂಬಲಗರು ಅಧಿಕಾರಿಗಳ ಪರ ವಹಿಸಿಕೊಂಡು ಮಾತನಾಡಿದ್ದರಿಂದ, ಸಚಿವರ ಬೆಂಬಲಿಗರು ಹಾಗೂ ಶಾಸಕರ ಬೆಂಬಲಗರೊಂದಿಗೆ ಮಾತಿನ ಚಕಮಕಿ ನಡೆಯಿತು.