ನ. 11ಕ್ಕೆ ಶರಣರ ಕುರಿತು ವಿವಿಧ ಸ್ಪರ್ಧೆಗಳ ಆಯೋಜನೆ

KannadaprabhaNewsNetwork | Published : Nov 4, 2024 12:25 AM

ಸಾರಾಂಶ

of Organization of various competitions on Sharan at 11

-ಹುಲಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿರುವ ಸ್ಪರ್ಧೆ

-----

ಕನ್ನಡ ಪ್ರಭ ವಾರ್ತೆ, ಹುಲಸೂರ

ಶರಣರ ವಿಚಾರಗಳನ್ನು ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಮೂಡಿಬರಲೆಂಬ ಸದುದ್ದೇಶದಿಂದ 45ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಆಚರಣೆ ಪ್ರಯುಕ್ತ ಶಾಲಾ-ಕಾಲೇಜುಗಳು ಮಕ್ಕಳು ಶರಣರ ವಚನಗಳ ಗಾಯನ, ವಚನ ಭಾಷಣ, ವಚನ ಭಾವಾರ್ಥ, ಶರಣರ ಕುರಿತು ಲೇಖನ, ಶರಣರ ಕುರಿತಾದ ರಸಪ್ರಶ್ನೆ ಸ್ಪರ್ಧೆ, ರೂಪಕ, ನಾಟಕ ಸ್ಪರ್ಧೆ ನ.11 ರಂದು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ ಎಂದು ಶಿವರಾಜ ಖಪಲೆ ತಿಳಿಸಿದರು.

ಈ ಕುರಿತು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 1000 ರು. ದ್ವಿತೀಯ ಬಹುಮಾನ 500 ರು.ತೃತೀಯ ಬಹುಮಾನ 300 ರು. ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ತಾಲೂಕು ಮಟ್ಟದಲ್ಲಿ ವಚನ ಗಾಯನ, ವಚನ ಭಾಷಣ, ವಚನ ನಿಬಂಧ ಈ ಮೂರು ಸ್ಪರ್ಧೆಗಳಲ್ಲಿ ಪ್ರಥಮ, ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾತ್ರ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಅರ್ಹರಾಗಿರುತ್ತಾರೆ. ಶರಣರ ಕುರಿತು ರಸಪ್ರಶ್ನೆ ಮತ್ತು ರೂಪಕ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಕ್ಕೆ ವಿಜೇತರಾದ ವಿದ್ಯಾರ್ಥಿಗಳು ಮಾತ್ರ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹರಾಗಿರುತ್ತಾರೆ.

ಜಿಲ್ಲಾ ಮಟ್ಟದ ಸ್ಪರ್ಧೆಯು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಶನಿವಾರ ನ.16.ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 3000 ರು, ದ್ವಿತೀಯ 2000 ರು. ಹಾಗೂ ತೃತೀಯ ಬಹುಮಾನ 1000 ರು. ನೀಡಲಾಗುವುದು.

ತಾಲೂಕು ಮಟ್ಟದಲ್ಲಿನ ನಡೆದ ಸ್ಪರ್ಧೆ ಕುರಿತಾದ ಅಂತಿಮ ನಿರ್ಧಾರ ನಿರ್ಣಾಯಯಕರಾಗಿರುತ್ತದೆ.

ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಆಯೋಜಕ ಶಿವರಾಜ ಖಫಲೆ ತಿಳಿಸಿದ್ದಾರೆ.

ಹುಲಸೂರ ತಾಲೂಕಿನಲ್ಲಿ ನಡೆಯುವ ಸ್ಪರ್ಧೆ ಮಾಹಿತಿಗಾಗಿ ಶಿವರಾಜ ಖಪಲೆ 9067080773, ರಾಜಕುಮಾರ ತೊಂಡಾರೆ 8317410840, ಸಚಿನ ಕೌಟೆ 8884901252 ಇವರನ್ನು ಸಂಪರ್ಕಿಸಬಹುದು.

ಜಾಗತಿಕ ಲಿಂಗಾಯತ ಮಹಾ ಸಭೆಯ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಭೀಮಾಶಂಕರ ಕಾಡಾದಿ, ಬಸವರಾಜ ಬಾಲಕುಂದೆ, ಕನ್ನಡ ಜಾನಪದ ಪರಿಷತು ತಾಲೂಕು ಅಧ್ಯಕ್ಷ ಶಿವರಾಜ ಖಪಲೆ, ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆಕಾಶ ಖಂಡಾಳೆ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ, ಸಚೀನ ಕೌಟೆ, ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ದಯಾನಂದ ನಿಮ್ಮಾಣೆ, ಪ್ರೇಮ ಗೌಡಗಾಂವೆ ಹಾಗೂ ಇತರರು ಉಪಸ್ಥಿತರಿದ್ದರು.

--

ಚಿತ್ರ 3ಬಿಡಿಆರ್53

ಹುಲಸೂರ ತಾಲೂಕು ಮಟ್ಟದ ಶರಣರ ಕುರಿತಾದ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವ ಕುರಿತು ಕರಪತ್ರ ಬಿಡುಗಡೆ ಗೊಳಿಸಿದ ಪ್ರಮುಖರು.

--

Share this article