ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಿರ್ಗಮಿತ ಅಧ್ಯಕ್ಷ ಶಿವಮಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಮೋಳೆ ನಟೇಶ್, ಗೌರವಾಧ್ಯಕ್ಷರಾಗಿ ಮಸಣಶೆಟ್ಟಿ, ಬೆಂಡ್ರವಾಡಿ ರಾಜಣ್ಣ, ಸರಗೂರು ಅಶೋಕ್ , ಚಿಕ್ಕಿಂದುವಾಡಿ ಪರಮೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸುರಾಪುರ ಕುಮಾರ, ಜಿನಕನಹಳ್ಳಿ ಸೇರಿ ಹಲವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಖಜಾಂಚಿಯಾಗಿ ತಾಂಡವಮೂರ್ತಿ, ಸಹ ಕಾರ್ಯದರ್ಶಿಗಳಾಗಿ ಸುನೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಹಸಿರು ಸೇನೆ ಅಧ್ಯಕ್ಷರಾಗಿ ಚಿಕ್ಕಲ್ಲೂರು ಕುಮಾರ್ ಆಯ್ಕೆ:ಇದೇ ವೇಳೆ ಹಸಿರು ಸೇನೆಯ ನೂತನ ಅಧ್ಯಕ್ಷರಾಗಿ ಚಿಕ್ಕಲ್ಲೂರು ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೊಳ್ಳೇಗಾಲ ಮೋಳೆ ವೆಂಕಟೇಶ್, ಉಪಾಧ್ಯಕ್ಷರುಗಳಾಗಿ ನಾಗರಾಜು, ಸಿದ್ದರಾಜು, ಸಂಘಟನಾ ಕಾರ್ಯದರ್ಶಿಯಾಗಿ ಸರಗೂರು ಶಿವರಾಜು ಅವರನ್ನು ಆಯ್ಕೆಮಾಡಲಾಯಿತು.