ಕೆಎಸ್.ಆರ್.ಟಿಸಿ ನಿಲ್ದಾಣ ಸರಿಪಡಿಸುವ ಸೂಚನೆಯನ್ನೆ ನಿರ್ಲಕ್ಷಿಸಿದ ಅಧಿಕಾರಿಗಳು

KannadaprabhaNewsNetwork |  
Published : Nov 10, 2025, 01:15 AM IST
5 ಬೀರೂರು 1ಬೀರೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಭಾಗದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರು ನಿಲ್ಲಿಸಿರುವ ದ್ವಿಚಕ್ರ ವಾಹನಗಳು. | Kannada Prabha

ಸಾರಾಂಶ

ಬೀರೂರು, ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಸರಿಪಡಿಸಲು ಉಪಲೋಕಾಯುಕ್ತರೇ ಸೂಚಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಲೇ ನಿತ್ಯ ಬಸ್‌ನಲ್ಲಿ ಪ್ರಯಾಣ ಬೆಳೆಸುವಂತಾಗಿದೆ.

ಪತ್ರಿಕೆ ವರದಿ ಆಧರಿಸಿ ಇಲಾಖೆ ವಿರುದ್ಧ ಸುಮೋಟೊ ಪ್ರಕರಣ ದಾಖಲು । ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಬೀರೂರು ಎನ್.ಗಿರೀಶ್.ಕನ್ನಡಪ್ರಭ ವಾರ್ತೆ,ಬೀರೂರು.ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಸರಿಪಡಿಸಲು ಉಪಲೋಕಾಯುಕ್ತರೇ ಸೂಚಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಲೇ ನಿತ್ಯ ಬಸ್‌ನಲ್ಲಿ ಪ್ರಯಾಣ ಬೆಳೆಸುವಂತಾಗಿದೆ.

ಈ ಹಿಂದೆ ಕಳೆದ 2024ರ ಜನವರಿ 2ರಂದು "ಅವ್ಯವಸ್ಥೆಯಿಂದ ಗಬ್ಬು ನಾರುತ್ತಿದೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ " ಶೀರ್ಷಿಕೆ ಯಡಿ ಕನ್ನಡಪ್ರಭದ ವಿಶೇಷ ಲೇಖನ ಗಮನಿಸಿ ವ್ಯವಸ್ಥೆ ಸರಿಪಡಿಸುವಂತೆ ಉಪಲೋಕಾಯುಕ್ತರು ಕೆ.ಎಸ್.ಆರ್.ಟಿ.ಸಿ ಜಿಲ್ಲಾ ಡಿಸಿ, ಬೀರೂರು ಬಸ್ ನಿಲ್ದಾಣದ ಕಂಟ್ರೋಲರ್ ಹಾಗೂ ಮತ್ತಿತರ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸೂಚಿಸಿದ್ದರು. ಇದು ಕೇವಲ ಸೂಚನೆ ಯಾಗಿಯೇ ಉಳಿದಿರುವುದು ವಿಪರ್ಯಾಸ. ಗಬ್ಬು ನಾರುವ ಶೌಚಾಲಯ: ಈ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸರಿಯಿಲ್ಲದೆ ಗಬ್ಬು ನಾರುತ್ತಿದ್ದು ಇದಕ್ಕೆ ಹೊಂದಿಕೊಂಡ ಕೆ.ಎಲ್.ಕೆ ಮೈದಾನದಲ್ಲೂ ದುರ್ನಾತ ಹಬ್ಬಿ ಅಲ್ಲಿ ನಡೆದಾಡುವ ಹಿರಿಯರು ಸೇರಿ ಸಾರ್ವನಿಕರಿಗೆ ಹಿಂಸೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್.ಬಸ್ ನಿಲ್ದಾಣಕ್ಕೆ ಪುರಸಭೆಯಿಂದ ನಲ್ಲಿ ಸಂಪರ್ಕ ಪಡೆದರು ವಾರಕೊಮ್ಮೆ ನೀರು ಬಿಡಲಾಗುತ್ತದೆ. ಆದರೆ ಈ ನೀರು ಸಾಲುವುದಿಲ್ಲ. ಕಡೂರು ಕೆ.ಎಸ್.ಆರ್.ಟಿ.ಸಿ ಡಿಪೋ ಇಂದಲೇ ನೀರು ಬರಬೇಕು. ಅಲ್ಲದೆ ಪ್ರಯಾಣಿಕರು ಸರಿಯಾಗಿ ನೀರು ಹಾಕದೆ ವಾಸನೆ ಹೆಚ್ಚಾಗುತ್ತದೆ ಎನ್ನುತ್ತಾರೆ ಶೌಚಾಲಯ ಶುಚಿಗೊಳಿಸುವವರು.ನಿಲ್ದಾಣದ ಉಳಿದ ಜಾಗದಲ್ಲಿ ಬೆಳೆಸಿರುವ ಗಿಡಗಂಟೆಗಳ ಜಾಗದಲ್ಲಿ ಮಳಿಗೆ ನಿರ್ಮಿಸಿ ಉತ್ತಮ ಹೋಟೆಲ್ ಮತ್ತಿತರ ಅಂಗಡಿ ಸ್ಥಾಪಿಸಿದರೆ ಇಲ್ಲೇ ಸಮೀಪದ ರೈಲ್ವೆ ನಿಲ್ದಾಣದ ಸಾವಿರಾರು ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಹಾಗೂ ಆದಾಯ ಬಂದು ನಿಲ್ದಾಣವನ್ನು ಸಮರ್ಪಕ ನಿರ್ವಹಣೆ ಮಾಡಬಹುದು ಎನ್ನುತ್ತಾರೆ ಆರೀಫ್ ಕಾಂಗ್ರೆಸ್ ಯುವ ಮುಖಂಡ .

ಬೀರೂರು ಬಸ್ ನಿಲ್ದಾಣದ ಅಭಿವೃದ್ಧಿಗೆ ಶಾಸಕ ಕೆ.ಎಸ್.ಆನಂದ್ 1ಕೋಟಿಗೂ ಅಧಿಕ ಅನುದಾನ ನೀಡಿದ್ದು ಮುಂದಿನ ದಿನ ಗಳಲ್ಲಿ ಶೌಚಾಲಯಕ್ಕೆ ಸ್ವಂತ ಬೋರ್ ವೆಲ್, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ದ ಜಾಗ ಉಪಯೋಗಿಸಿ ಉತ್ತಮ ನಿಲ್ದಾಣ ಮಾಡಿದರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ವಾಗಲಿದೆ.

ಬೀರೂರು ಪಟ್ಟಣದಿಂದ ತರೀಕೆರೆ, ಚಿಕ್ಕಮಗಳೂರು, ಅರಸೀಕೆರೆ, ಶಿವಮೊಗ್ಗಕ್ಕೆ ಮತ್ತಿತರೆಡೆಗೆ ತೆರಳುವ ಕಾರ್ಮಿ ಕರು, ಸರ್ಕಾರಿ ನೌಕರರು ಬೆಳಗ್ಗೆ 9ರ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ಬಸ್ ನಿಲ್ದಾಣದ ಒಳಗಡೆ ನಿಲ್ಲಸಿ ತೆರಳು ವುದನ್ನು ತಪ್ಪಿಸಲು ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ ಎನ್ನುವ ನಾಮಫಲಕ ನಿಲ್ದಾಣದ ಹೊರಗಡೆ ಹಾಕಿ ಎಚ್ಚರಿಸಿದ್ದಾರೆ.

ಆದರೆ, ಈ ಸ್ಥಳದಲ್ಲಿ ಅಗತ್ಯವಿರುವ ದ್ವಿಚಕ್ರವಾಹನಗಳ ಪಾರ್ಕಿಂಗ್ ಕಲ್ಪಿಸಿ ತಿಂಗಳಿಗೆ ಇಂತಿಷ್ಟು ಹಣ ಕೆ.ಎಸ್.ಆರ್.ಟಿಸಿ ಗೆ ಲಭಿಸುತ್ತದೆ. ಇಂತಹ ಉಪಯುಕ್ತ ಕೆಲಸಗಳ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯ ಕೋಟೇಶ್.

--ಬಾಕ್ಸ್‌--

ಬಸ್ ನಿಲ್ದಾಣದ ಒಳ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂದು ಸವಾರರಿಗೆ ತಿಳಿ ಹೇಳಿದರೆ ಜಗಳಕ್ಕೆ ಬರುತ್ತಾರೆ. ನಿಮ್ಮಪ್ಪನ ನಿಲ್ದಾಣ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನಾವೇನು ಮಾಡಲು ಸಾಧ್ಯ ಮೇಲಾಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ.

- ಪರಮೇಶ್ವರಪ್ಪ

ನಿಯಂತ್ರಣಾಧಿಕಾರಿಬೀರೂರು

-5 ಬೀರೂರು 2ಬೀರೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಭಾಗದಲ್ಲಿನ ಸಾರ್ವಜನಿಕ ಶೌಚಾಲಯ ಗಬ್ಬು ನಾರುತ್ತಿರುವುದು.5 ಬೀರೂರು 3ಬೀರೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಭಾಗದಲ್ಲಿ ಖಾಸಗಿ ವಾಹನಗಳು ಒಳಪ್ರವೇಶಿಸಿರುವುದು.

5 ಬೀರೂರು 4ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಭಾಗದಲ್ಲಿ ಅನೇಕ ಜಾಗವಿದ್ದವು ಉಪಯೋಗಕ್ಕೆ ಬಾರದೇ ಪಾಳು ಬಿದ್ದರಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
ಹೋರಾಟಗಾರರ ಮೇಲಿನ ಎಲ್ಲ ಕೇಸ್ ಹಿಂಪಡೆಯಿರಿ