ಗೋಕರ್ಣ: ಗಂಗಾವಳಿ- ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕೂಡು ರಸ್ತೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು, ಗುತ್ತಿಗೆ ಕಂಪನಿಯವರು ಗುರುವಾರ ಭೇಟಿ ನೀಡಿ ಸಾರ್ವಜನಿಕರೊಂದಿಗೆ ರಸ್ತೆಯ ಜಾಗ ಮತ್ತಿತರ ಮಾಹಿತಿ ನೀಡಿ ಚರ್ಚಿಸಿದರು. ಬುಧವಾರ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗಂಗಾವಳಿ ಭಾಗದಲ್ಲಿ ಕೂಡು ರಸ್ತೆಗೆ ನಿಖರ ಸ್ಥಳ ತಿಳಿಸುವಂತೆ ಆಗ್ರಹಿಸಿದ್ದರು. ಅದರಂತೆ ಅಧಿಕಾರಿಗಳು ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.
ತಿರುವು ಇರುವ ರಸ್ತೆಯನ್ನು ನೇರ ಮಾಡುವುದು, ಖಾಸಗಿ ಜಾಗ ಪಡೆಯುವ ಬದಲು ಶಾಂತಿಕಾ ಪರಮೇಶ್ವರಿ ಮಂದಿರದ ಹತ್ತಿರದ ಗ್ರಾಮ ಪಂಚಾಯಿತಿ ಜಾಗದಲ್ಲಿ ರಸ್ತೆ ಮುಂದುವರಿಸಲು ನಿರ್ಧರಿಸಲಾಯಿತು. ಈ ಮಾರ್ಗದಲ್ಲಿರುವ ಮಹಾಸತಿ ಮಂದಿರವನ್ನು ತೆರವು ಮಾಡಿ ಬೇರೆ ಜಾಗದಲ್ಲಿ ಪ್ರತಿಷ್ಠಾಪಿಸಲು ಒಪ್ಪಿದ್ದು, ಅದರಂತೆ ನೂತನ ರಸ್ತೆಯ ನೀಲನಕ್ಷೆಯ ವಿವರವನ್ನು ಜನರಿಗೆ ತಿಳಿಸಿ ಗಟಾರದ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಡುವುದು ಸೇರಿದಂತೆ ಜನರ ಹಲವು ಬೇಡಿಕೆಗೆ ಗುತ್ತಿಗೆ ಕಂಪನಿ ಒಪ್ಪಿದ್ದು, ನಿಗದಿತ ಅವಧಿಯಲ್ಲಿ ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ. ಆದರೆ ಜನರು ಸಹಕಾರ ನೀಡುವಂತೆ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು ಮನವಿ ಮಾಡಿದರು. ಇನ್ನು ಸೇತುವೆ ಕೆಲಸ ಪೂರ್ಣಗೊಳಿಸುವ ವೇಳೆ ನಿತ್ಯ ಸಂಚರಾಕ್ಕೆ ಬೋಟ್ ಪ್ರಾರಂಭಿಸುವುದು ಬೇಡ. ಬದಲಾಗಿ ಏಣಿ ನಿರ್ಮಿಸಿ ಕೊಡಬೇಕು ಎಂದು ಜನರು ಹೇಳಿದಾಗ ಅದಕ್ಕೆ ಒಪ್ಪಿದ ಕಂಪನಿಯವರು ಜನರು ಎಚ್ಚರಿಕೆಯಿಂದ ಓಡಾಡಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ನಾಯ್ಕ, ಸದಸ್ಯರು, ಕೆಆರ್‌ಡಿಸಿಎಲ್‌ನ ಸುಹಾಸ್ ನಾಯ್ಕವಾಡ್, ಎಂಜಿನಿಯರ್ ಬಸವರಾಜ್, ಸೆಕ್ಷನ್ ಆಫೀಸರ್ ಸುಧೀರ ಮೇತ್ರಿ, ಗ್ರಾಪಂ ಅಭಿವೃದ್ದಿ ಅಧಿಕಾರಿ, ಕಾರ್ಯದರ್ಶಿ ಇತರರು ಇದ್ದರು.ಕುಶಲ ಕನ್ಯಾ ಸ್ಪರ್ಧೆ ವಿಜೇತರಿಗೆ ಬಹುಮಾನ
ಶಿರಸಿ: ನಗರದ ಎಂಇಎಸ್ ವಾಣಿಜ್ಯ ಕಾಲೇಜಿನ ಮಹಿಳಾ ಸಂಘವು ಆಯೋಜಿಸಿದ್ದ ಕುಶಲ ಕನ್ಯಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.