ಅಧಿಕಾರಿಗಳು ಸೇರಿ ಆಸ್ಪತ್ರೆ ಮುಚ್ಚಿಬಿಡಿ

KannadaprabhaNewsNetwork |  
Published : Mar 05, 2025, 12:36 AM IST
04ಸನದ01 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಆಸ್ಪತ್ರೆಯ ನಿರ್ವಹಣೆಗೆ ಅದರದ್ದೆಯಾದ ಅನುದಾನ ಇರುತ್ತದೆ. ಬಂದ ಅನುದಾನ ಏನು ಮಾಡುತ್ತೀರಿ? ಒಂದು ಸಣ್ಣ ಶೌಚಾಲಯ ನಿರ್ಮಸಲಾಗದಷ್ಟು ಮತ್ತು ದುರಸ್ತಿ ಮಾಡುದಷ್ಟು ಅನುದಾನ ನಿಮ್ಮಲ್ಲಿ ಇಲ್ಲವೆಂದರೆ ಆಸ್ಪತ್ರೆಯನ್ನು ಅಧಿಕಾರಿಗಳೆಲ್ಲರು ಸೇರಿ ಮುಚ್ಚಿಬಿಡಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಸಿಂದಗಿ

ಆಸ್ಪತ್ರೆಯ ನಿರ್ವಹಣೆಗೆ ಅದರದ್ದೆಯಾದ ಅನುದಾನ ಇರುತ್ತದೆ. ಬಂದ ಅನುದಾನ ಏನು ಮಾಡುತ್ತೀರಿ? ಒಂದು ಸಣ್ಣ ಶೌಚಾಲಯ ನಿರ್ಮಸಲಾಗದಷ್ಟು ಮತ್ತು ದುರಸ್ತಿ ಮಾಡುದಷ್ಟು ಅನುದಾನ ನಿಮ್ಮಲ್ಲಿ ಇಲ್ಲವೆಂದರೆ ಆಸ್ಪತ್ರೆಯನ್ನು ಅಧಿಕಾರಿಗಳೆಲ್ಲರು ಸೇರಿ ಮುಚ್ಚಿಬಿಡಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಾದಿಯಾಗಿ ಸಿಬ್ಬಂದಿಯೂ ಯಾರಾದರೂ ಮೇಲಾಧಿಕಾರಿಗಳು ಭೇಟಿ ನೀಡಿದಾಗಷ್ಟೇ ಕರ್ತವ್ಯದ ಮೇಲೆ ಹಾಜರಿರುತ್ತಾರೆ. ಇತರೆ ಸಂದರ್ಭಗಳಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯ ಹಾಜರಾತಿ ಇರುತ್ತದೆ. ಅದು ಅಲ್ಲದೇ ಕರ್ತವ್ಯದ ಮೇಲೆ ಹಾಜರಿರದಿದ್ದರೂ ಹಾಜರಿ ಪುಸ್ತಕದಲ್ಲಿ ಮಾತ್ರ ಸಹಿ ಇರುತ್ತದೆ ಎಂದರು.

ಬಯೋಮೆಟ್ರಿಕ್ ಕೆಟ್ಟು ಹೋಗಿ ತಿಂಗಳುಗಳೇ ಕಳೆದು ಹೋದರೂ ಅದನ್ನು ರೀಪೇರಿ ಮಾಡಿಸುವ ಗೋಜಿಗೆ ಹೋಗದೆ ಇರುವುದಕ್ಕೂ ಜಾಣತನವೇ ಕಾರಣ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದವು. ಬಾಣಂತಿಯರು ಅಂತಹ ಅವಸ್ಥೆಯಲ್ಲಿ ಅಷ್ಟೊಂದು ದೂರ ಕ್ರಮಿಸಿ ಹೋಗುವುದು ಒಬ್ಬ ಬಾಣಂತಿಯಿಂದ ಸಾಧ್ಯವೇ? ಎಂಬುದನ್ನು ಉಹಿಸಿಕೊಳ್ಳಲೂ ಕಷ್ಟ ಸಾಧ್ಯವಾಗುವ ಪರಿಸ್ಥಿತಿ ಇದೆ. ಆಸ್ಪತ್ರೆಗೆ ಬಂದ ಹೊರ ರೋಗಿಗಳನ್ನು ದನಗಳಂತೆ ಒಂದೆಡೆ ಕೂಡಿ ಹಾಕಲಾಗುತ್ತದೆ. ಕುಳಿತುಕೊಂಡ ರೋಗಿಗಳನ್ನು ಕಸಗುಡಿಸುವ ಕರ್ಮಚಾರಿಗಳು ಕಸಬರಿಗೆಯಿಂದಲೆ ತಳ್ಳಿ ದಾರಿಮಾಡಿಕೊಂಡು ಹೋಗುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಇಲ್ಲಿ ಮಾನವೀಯತೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಅವಸ್ಥೆಯನ್ನು ಕಂಡು ನನಗೆ ಅಕ್ಷರಶಃ ದಂಗು ಬಡೆದಂತಾಗಿದೆ. ಆಸ್ಪತ್ರೆ ಅಕ್ಷರಶಹಃ ಅವ್ಯವಸ್ಥೆಯ ಆಗರವಾಗಿದೆ. ಮಹಿಳೆಯರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಬಾಣಂತಿಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಶೌಚಕ್ಕಾಗಿ ಮಹಿಳಾ ರೋಗಿಗಳು ಆಸ್ಪತ್ರೆಯಿಂದ ಹೊರಗೆ ಸುಮಾರ 300-400 ಮೀ.ದಷ್ಟು ದೂರ ಹೋಗಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಟಿಎಚ್‌ಒ ಡಾ.ಎ.ಎ.ಮಾಗಿ, ಡಾ.ಮಹಾಂತೇಶ ಹಿರೇಮಠ, ಡಾ.ರಮೇಶ ರಾಠೋಡ ಸೇರಿದಂತೆ ಇನ್ನೂಳಿದ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...