ಸವಣೂರ: ಭೌತಿಕ ಗುರಿ ಮೇಲೆ ಅನುದಾನ ಪಡೆದು ಸಾಧನೆ ಕಡಿಮೆ ತೋರಿಸುವ ಹಿನ್ನೆಲೆಯಲ್ಲಿ ವರ್ಷಕ್ಕೆ 1.20 ಕೋಟಿ ಹಣವನ್ನು ಅಧಿಕಾರಿಗಳು ಕತ್ತರಿ ಹಾಕುತ್ತಿರಿ ಅಲ್ವೇನ್ರಿ ಎಂದು ಸಿಡಿಪಿಓ ಉಮಾ ಕೆ.ಎಸ್. ಅವರನ್ನು ಇಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
2017ರಿಂದ ಇದುವರೆಗೂ 20ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಇವೆ ಎಂದರೆ ಇದು ಹೇಗೆ ಸಾಧ್ಯ ಉತ್ತರಿಸಿ ಎಂದರು.
ಇಲಾಖೆಯಿಂದ ಸಂಬಂಧಪಟ್ಟ ಗ್ರಾಪಂಗಳಿಗೆ ಅನುದಾನ ಬಿಡುಗಡೆಗೊಂಡಿದ್ದರು ಸಹ ಕಾರಣಾಂತರಗಳಿಂದ ತಡವಾಗಿದೆ ಎಂದರು. ಇದು ಎಲ್ಲ ಕಾರಣ ಹೇಳಬೇಡಿ ಕೂಡಲೇ ಕಾಮಗಾರಿ ಸಂಪೂರ್ಣ ಮುಗಿಸಲು ಸಹಕಾರ ನೀಡಿ ವರದಿಯನ್ನು ನೀಡಲು ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಅವರಿಗೆ ತಾಕೀತು ಮಾಡಿದರು.ಮೆರಿಟ್‌ನಲ್ಲಿ ಪಾಸ್ ಆಗಿ ನೌಕರಿಗಾಗಿ ಮತ್ತೆ ಪರೀಕ್ಷೆ ಬರೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವವರು ಕಲಿಸಿದ ಶಾಲೆ ಫಲಿತಾಂಶಕ್ಕಿಂತ, ಸರ್ಕಾರಿ ನೌಕರಿ ಸಿಗದೇ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವವರು ಕಲಿಸಿದ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಬರುತ್ತಿದೆ ಎಂದರೆ, ಇವರಿಗೆ ಕಲಿಸಲು ಆಸಕ್ತಿ ಇಲ್ಲ ಎಂದು ಅರ್ಥ, ನಿಮ್ಮ ಶಿಕ್ಷಕರಿಗೆ ಭಯ ಇಲ್ಲ ಅಲ್ವೇ ಎಂದು ಶಾಸಕ ಪಠಾಣ ಅವರು ಬಿಇಒ ಎಂ.ಎಫ್. ಬಾರ್ಕಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸವಣೂರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಟ್ಕಾ, ಗಾಂಜಾ ಮಾರಾಟ ಹಾವಳಿ ತಡೆಯಲು ಏನ್ ಕ್ರಮ ಕೈಗೊಂಡಿದ್ದೀರಾ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಪಿಎಸ್‌ಐ ಮೇಘರಾಜ ದೊಡ್ಡಮನಿ ಅವರನ್ನು ತರಾಟೆಗೆ ತೆಗೆದುಕೊಂಡು, ಯಾವ ಕ್ರಮಕ್ಕೆ ಮುಂದಾಗಿದ್ದೀರಿ ಎಂದು ಪಿಎಸ್‌ಐ ಮೇಘರಾಜ ದೊಡ್ಡಮನಿ ಅವರನ್ನು ಪ್ರಶ್ನಿಸುತ್ತಿದ್ದಂತೆ ಮೇಗರಾಜ ದೊಡ್ಡಮನಿ ಸಭೆಗೆ ಉತ್ತರಿಸಿ ಮಟ್ಕಾ ಹಾಗೂ ಇತರೆ ಚಟುವಟಿಕೆಗಳನ್ನು ತಡೆಯಲು 38 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದರು.
ನೀರಾವರಿ ಯೋಜನೆಗಾಗಿ ಪ್ರತ್ಯೇಕ 100 ಕೋಟಿ ಅನುದಾನವನ್ನು ನೀಡಿದ್ದಾರೆ. ಪಟ್ಟಣದ ಮೋತಿ ತಲಾಬ (ದೊಡ್ಡಕೆರೆ)ಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಅಳವಡಿಸಿ ನದಿ ನೀರು ಹರಸುವದು ಸೇರಿದಂತೆ ಕ್ಷೇತ್ರದ 50 ಕೆರೆಗಳನ್ನು ಸೌಂದರ್ಯಕರಣಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ, ಈ ಕುರಿತು ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ನಾಗಪ್ಪ ತಿಪ್ಪಕ್ಕನವರ, ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಉಪ ವಿಬಾಗಾಧಿಕಾರಿ ಮಮತಾ ಹೊಸಗೌಡ್ರ, ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಹಾಗೂ ಇತರರು ಇದ್ದರು.