ಒಕ್ಕಲಿಗರು ಉದ್ಯಮಿಗಳಾಗಿ ಉದ್ಯೋಗದಾತರಾಗಬೇಕು

KannadaprabhaNewsNetwork |  
Published : Nov 11, 2024, 01:11 AM IST
೧೦ಕೆಎಲ್‌ಆರ್-೪ಕೋಲಾರದ ಹೊರವಲಯದ ಒಲಿವಿಯಾ ರೆಸಾರ್ಟ್‌ನಲ್ಲಿ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಸೊಸೈಟಿಯ ಜಿಲ್ಲಾ ಘಟಕ ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯ ಕಟ್ಟಿ ಆಳಿದ್ದಾರೆ, ಒಕ್ಕಲಿಗರು ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು, ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಗಳಾಗಿ ಮುಂದಿನ ಪೀಳಿಗೆಗೆ ಸಹಕಾರಿಯಾಗುವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಒಕ್ಕಲಿಗರು ಅರಿವಿನ ಮತ್ತು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದಾಗಿ ಉದ್ಯಮ ಕ್ಷೇತ್ರದಿಂದ ಹಿಂದಿದ್ದಾರೆ. ಕೇವಲ ಕೃಷಿಗೆ ಸೀಮಿತವಾಗದೆ, ಉದ್ಯಮ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡು ಬೇರೆಯವರಿಗೂ ಉದ್ಯೋಗ ನೀಡಬೇಕೆಂದು ಎಂದು ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.ನಗರದ ಹೊರವಲಯದ ಒಲಿವಿಯಾ ರೆಸಾರ್ಟ್‌ನಲ್ಲಿ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಸೊಸೈಟಿಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯ ಜನ ಶ್ರಮಜೀವಿಗಳು ಕೇವಲ ರೈತ ಉದ್ಯಮಿಗಳಾದರೆ ಸಾಲದು, ಬದಲಾವಣೆಗೆ ತಕ್ಕಂತೆ ನಾವು ಬದಲಾಗಬೇಕು ಎಂದರು.

ಪೈಪೋಟಿ ಎದುರಿಸಬೇಕು

ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಮಾಡಿ ಬೇರೆ ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಮುಂದಿನ ಪೀಳಿಗೆಗೆ ಸಹಕಾರಿಯಾಗುವಂತೆ ಮಾಡಬೇಕು. ಉದ್ಯಮ ಕ್ಷೇತ್ರದಲ್ಲಿ ಎದುರಾಗುವ ಸ್ಪರ್ಧೆ, ಪೈಪೋಟಿಯನ್ನು ಎದುರಿಸಲು ಸನ್ನದ್ದರಾಗಬೇಕು ಎಂದು ಅವರು ಹೇಳಿದರು.

ರಾಜ್ಯ ಜಲಸಾರಿಗೆ ಮಂಡಳಿಯ ಸಿಇಒ ಜಯರಾಮ್ ರಾಯಪುರ ಮಾತನಾಡಿ, ಗಂಗರ ಆಡಳಿತ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯ ಕಟ್ಟಿ ಆಳಿದ್ದಾರೆ, ನಾವುಗಳು ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು, ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದು ಸಲಹೆ ಮಾಡಿದರು.ರಾಜಕೀಯಲ್ಲಿ ಒಕ್ಕಲಿಗರು ಬಲಿಷ್ಠ

ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ರಾಜಕೀಯದಲ್ಲಿ ಬಲಿಷ್ಠವಾಗಿದ್ದಾರೆ, ಆದರೆ ಉದ್ಯಮ ಕ್ಷೇತ್ರದಲ್ಲಿ ಹಿಂದೆ ಇದ್ದಾರೆ ಸಮುದಾಯವು ಕಡಿಮೆ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಹೊಲಿಕೆ ಮಾಡಿದರೆ ಇಲ್ಲಿ ಕೇವಲ ಶೇ.೧ ಅಷ್ಟೇ ಉದ್ಯಮದಲ್ಲಿ ಇದ್ದಾರೆ, ಇದರಲ್ಲಿ ರಾಜಕಾರಣಿಗಳ ಹೊಣೆಗಾರಿಕೆ ಹೆಚ್ಚಾಗಬೇಕು, ಸಮುದಾಯದಲ್ಲಿ ಪರಸ್ಪರ ಒಗ್ಗಟ್ಟಿನಿಂದ ಅರಿವು ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕೈಜೋಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯ ಜನ ಕೃಷಿಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಆದರೆ ಉದ್ಯಮದಲ್ಲಿ ಅರಿವಿನ ಕೊರತೆಯಿಂದ ಕೈಗಾರಿಕೆಗಳು ಮಾಡಿ ಕೈ ಸುಟ್ಟುಕೊಂಡಿದ್ದಾರೆ, ಯುವಕರಿಗೆ ಮಾರ್ಗದರ್ಶನ ನೀಡಿದರೆ ಭವಿಷ್ಯದ ಉದ್ಯಮಗಳಾಗಲಿದ್ದು ಬೇರೆಯವರಿಗೂ ಉದ್ಯೋಗ ನೀಡುವಂತಾಗುತ್ತಾರೆ ಎಂದರು.ಉಪಜಾತಿಗಳು ಒಂದಾಗಬೇಕು

ಫಸ್ಟ್ ಸರ್ಕಲ್ ಸೊಸೈಟಿ ಜಿಲ್ಲಾ ಗೌರವ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ಮನುಷ್ಯನ ಜೀವನಕ್ಕೆ ಉದ್ಯೋಗ ಮುಖ್ಯವಾಗಿದೆ, ಒಕ್ಕಲಿಗರ ಉಪ ಜಾತಿಗಳಿಂದ ಸಮುದಾಯಕ್ಕೆ ಮಾರಕವಾಗಿದೆ, ನಮ್ಮಲ್ಲಿಯೇ ಒಗ್ಗಟ್ಟಿ ಇಲ್ಲ ಉಪಜಾತಿಗಳ ಮನಸ್ಥಿತಿಯಿಂದ ಹೊರಬಂದು ನಾವು ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಉದ್ಯಮ ಮಾಡಿ ಬೇರೆಯವರನ್ನು ಬೆಳೆಸುವ ಗುಣ ಬರಬೇಕು ಎಂದರು.ಎಂಎಲ್ಸಿ ಇಂಚರ ಗೋವಿಂದರಾಜು, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಾಗರಾಜ್, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಉದ್ಯಮಿ ಡೆಕ್ಕನ್ ರಾಮಕೃಷ್ಣಪ್ಪ, ವೈದ್ಯ ಡಾ.ಕೃಷ್ಣಪ್ಪ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ವಕ್ಕಲೇರಿ ರಾಮು, ಬಾಬು ಮೌನಿ, ಎಪಿಎಂಸಿ ಪುಟ್ಟರಾಜು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ