ಆಂಬ್ಯುಲೆನ್ಸ್ ಗೆ ಸಿಲುಕಿ ವೃದ್ಧನ ಸಾವು

KannadaprabhaNewsNetwork | Published : Nov 8, 2023 1:01 AM

ಸಾರಾಂಶ

ಆಂಬ್ಯುಲೆನ್ಸ್ ಗೆ ಸಿಕ್ಕಿ ವೃದ್ಧ ಮೃತಪಟ್ಟಿರುವ ಘಟನೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಆಂಬ್ಯುಲೆನ್ಸ್ ಗೆ ಸಿಲುಕಿ ವೃದ್ಧ ಮೃತಪಟ್ಟಿರುವ ಘಟನೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ.

ಮಾಯಸಂದ್ರ ಹೋಬಳಿಯ ವಿಠಲಾಪುರದ ವಾಸಿ ಮಾಸ್ತಯ್ಯ (೬೫) ಅವರು ಮಾಯಸಂದ್ರದ ಸರ್ಕಾರಿ ಆಸ್ಪತ್ರೆಯ ಬಳಿ ರಸ್ತೆ ದಾಟುವ ಸಂಧರ್ಭದಲ್ಲಿ ಆಂಬ್ಯುಲೆನ್ಸ್ ಗೆ ಸಿಕ್ಕಿ ಮೃತಪಟ್ಟಿದ್ದಾರೆ. ಈ ಆಂಬ್ಯುಲೆನ್ಸ್ ನಲ್ಲಿ ತುರ್ತು ಚಿಕಿತ್ಸೆಗೆಂದು ಆದಿಚುಂಚನಗಿರಿ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯಲಾಗುತ್ತಿತ್ತು. ಈ ಸಂಧರ್ಭದಲ್ಲಿ ಆಂಬ್ಯುಲೆನ್ಸ್ ಗೆ ಸಿಕ್ಕಿ ಗಾಯಗೊಂಡಿದ್ದ ಮಾಸ್ತಯ್ಯ ಅವರನ್ನು ಇದೇ ಆಂಬ್ಯುಲೆನ್ಸ್ ನಲ್ಲಿ ಆದಿಚುಂಚನಗಿರಿ ಆಸ್ಪತೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಾಸ್ತಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ. ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article