ಕನ್ನಡಪ್ರಭ ವಾರ್ತೆ ಕಾಗವಾಡ
ಬೆಳಗ್ಗೆಯಿಂದಲೇ ದೇವಾಲಯದತ್ತ ತೆರಳಿದ ಭಕ್ತರು, ವಿಶ್ವನಾಥನಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ,ರುದ್ರಹೋಮ, ಮಹಾ ಮೃತ್ಯುಂಜಯ ಹೋಮ, ನೈವೇದ್ಯೆಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಮಹಾಶಿವರಾತ್ರಿ ಹಬ್ಬದ ನಿಮಿತ್ತ ಐನಾಪುರದ ವಿಶ್ವನಾಥ ದೇವಾಲಯದಲ್ಲಿ ಶಿವ-ಪಾರ್ವತಿ, ವಿಶ್ವನಾಥ, ಈಶ್ವರ,ಮಲ್ಲಯ್ಯ, ವೀರಭದ್ರ ಹಾಗೂ ಇನ್ನಿತರ ದೇವಾಯಗಳನ್ನು ವಿವಿಧ ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯಗಳ ಆವರಣ ಹಾಗೂ ಸುತ್ತ-ಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಹಾಶಿವರಾತ್ರಿ ಪ್ರಯುಕ್ತ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ವಿಶ್ವನಾಥನಿಗೆ ವಿಶೇಷ ಪೂಜೆ ನಡೆದವು. ಹಬ್ಬದ ಪ್ರಯುಕ್ತ ಪೂಜೆ, ಅಭಿಷೇಕ, ರುದ್ರಹೋಮ ಹಾಗೂ ಮೃತ್ಯುಂಜಯ ಹೋಮ, ಕ್ಷೀರಾಭೀಷೇಕ, ತುಪ್ಪಾಭೀಷೇಕ, ಗಂಧಾಭೀಷೇಕ, ಪುಷ್ಪಾಭೀಷೇಕ ಹಾಗೂ ಹೋಮ, ಹವನಗಳನ್ನು ನೆರವೇರಿಸಲಾಯಿತು.ಬೆಳಗಿನ ಜಾವ ನಾಲ್ಕು ಗಂಟೆಯಿಂದ ದೇವಾಲಯದಲ್ಲಿ ಶಂಖ, ಘಂಟೆ, ಜಾಗಟೆಗಳ ನಿನಾದ ಶಿವನಾಮಸ್ಮರಣೆ ಝೇಂಕಾರ, ಬಡವ-ಬಲ್ಲಿದ ಎಂಬ ಬೇಧವಿಲ್ಲದ ಭಕ್ತರ ಶ್ರದ್ಧಾಭಕ್ತಿ ಮಂಗಳವಾರ ಶಿವರಾತ್ರಿ ಆಚರಣೆಗೆ ಸಾಕ್ಷಿಯಾಯಿತು. ಇದೇ ವೇಳೆ ಆಗಮಿಸಿದ ನೂರಾರು ಭಕ್ತರಿಗೆ ಮಹಾಪ್ರಸಾದ ಹಾಗೂ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು. ಅದನ್ನು ಸ್ವೀಕರಿಸಿ ಧನ್ಯತಾಭಾವ ವ್ಯಕ್ತ ಪಡಿಸಿದರು. ಈ ವೇಳೆ ನವ ದಂಪತಿಗಳು ಸಮೇತ ಆಗಮಿಸಿ ಸಂಭ್ರಮ ಪಡುತ್ತಿದ್ದ ಕುಟುಂಬಗಳು ರಜೆಯ ಮಜಾದ ಜೊತೆಗೆ ಅಪ್ಪ-ಅಮ್ಮಂದಿರೊಂದಿಗೆ ಬಂದು ವಿಶ್ವನಾಥನ ದರುಶನ ಪಡೆದು ಧನ್ಯತಾಭಾವ ವ್ಯಕ್ತ ಪಡಿಸಿದ್ದು ಕಂಡು ಬಂತು. ಮಕ್ಕಳ ಸಡಗರ ಹಬ್ಬವನ್ನುಂಟು ಮಾಡಿತ್ತು. ದಿನವೀಡಿ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ರಾತ್ರಿಯಿಡಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡು ಅಹೋರಾತ್ರಿ ಶಿವನಾಮ ಸ್ಮರಣೆ ಮಾಡಿದರು.ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಗೇರ, ಸಂಜಯ ಬಿರಡಿ, ಮುಖಂಡರಾದ ಸುರೇಶ ಗಾಣಿಗೇರ, ಪ್ರಕಾಶ ಕೋರ್ಬು, ವಿಶ್ವನಾಥ ನಾವದಾರ, ಸುನೀಲ ಅವಟಿ, ಡಾ.ಅರವಿಂದರಾವ್ ಕಾರ್ಚಿ, ಉದಯ ಕಾರ್ಚಿ, ಶಿವಪ್ರಸಾದ ಕಾರ್ಚಿ, ಅನೀಲ ಸತ್ತಿ, ಕೇಶವ ರಡ್ಡಿ,ಶಂಕರ ಕೋರ್ಬು, ಅಮೀತ ಡೂಗನರ, ಅಕ್ಷಯ ಜಂತೆನ್ನವರ, ಮಹೇಶ ಮಡಿವಾಳರ, ಬಸವರಾಜ ಅವಟಿ, ಮಲ್ಲು ಕೋಲಾರ, ಶಿವು ಅಪರಾಜ ಸೇರಿದಂತೆ ಸಾವಿರಾತು ಮಾತರಯರು ಸರದಿ ಸಾಲಿನಲ್ಲಿ ನಿಂತು ವಿಶ್ವನಾಥನ ದರ್ಶನ ಪಡೆದರು.