- 22ರಂದು ಶ್ರೀ ಗುರು ಬಸವರಾಜೇಂದ್ರ ಸ್ವಾಮಿಗಳ ಜಾತ್ರೆ ಹಿನ್ನೆಲೆ ಆಯೋಜನೆ । 46ನೇ ವರ್ಷದ ಸಮಗ್ರ ಪಾದಯಾತ್ರೆ
ಶ್ರೀಕ್ಷೇತ್ರ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ಜಾತ್ರೆ ಫೆ.22ರಂದು ನಡೆಯಲಿದೆ. ಇದರ ಅಂಗವಾಗಿ ಕೊಟ್ಟೂರು ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ನಿಂದ ಫೆ.19ರಂದು 46ನೇ ವರ್ಷದ ಸಮಗ್ರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದ ಚೌಕಿಪೇಟೆ ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನ ಆವರಣದಿಂದ ಯಾತ್ರೆ ಆರಂಭವಾಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.19ರ ಸಂಜೆ 5 ಗಂಟೆಗೆ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಯ್ಯನಹಳ್ಳಿ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಹಿರೇಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಕೋಣಂದೂರು ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಅಧ್ಯಕ್ಷತೆಯಲ್ಲಿ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದರು.ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಇದೇ ವೇಳೆ ಕೊಟ್ಟೂರಿನ ಲೇಖಕ, ಕನ್ನಡ ಪಂಡಿತ ಶ್ರೀ ರುದ್ರಮುನಿ ಸ್ವಾಮಿಗಳ ಆಶಯದಂತೆ ಶ್ರೀ ಗುರು ಕೊಟ್ಟೂರೇಶ್ವರರ ಪ್ರವಚನ ಕಾರ್ಯಕ್ರಮ ನಡೆದಿದ್ದು, ಅದರ ಮರೋಳದ ಗಾನಸಭಾ ಭೂಷಣ ವೇದಮೂರ್ತಿ ಮುದಕಯ್ಯ ಸ್ವಾಮಿಗಳು ಪ್ರವಚನ ಮಂಗಲ ನೆರವೇರಿಸಿಕೊಡುವರು ಎಂದು ತಿಳಿಸಿದರು.
ಪಾದಯಾತ್ರೆ ಮಾರ್ಗ:
ಟ್ರಸ್ಟ್‌ನ ಕಾರ್ಯದರ್ಶಿ ಟಿ.ಜೆ.ಬಕ್ಕೇಶಪ್ಪ, ಸಹ ಕಾರ್ಯದರ್ಶಿ ಬಿ.ಚಿದಾನಂದ, ಖಜಾಂಚಿ ಮಲ್ಲಾಬಾದಿ ಗುರುಬಸವರಾಜ, ಸಿ.ಆರ್.ಜಯರಾಜ, ಸುಜಾತಮ್ಮ ಬೂಸ್ನೂರು, ಟಿಂಕರ್ ಮಂಜಣ್ಣ, ಕರಿಬಸಪ್ಪ, ಸಿವಿಲ್ ಇಂಜಿನಿಯರ್ ವೀರೇಶ, ವಿನುತಾ ರವಿ, ಕಂಬಿನೂರು ರುದ್ರಬಸವರಾಜ ಇತರರು ಇದ್ದರು.
ಕೋಟ್ ದಾವಣಗೆರೆ-ಕಂಚಿಕೇರಿ ಮಾರ್ಗದಲ್ಲಿ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಟ್ರಸ್ಟ್‌ನಿಂದ ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಸಮುದಾಯ ಭವನ ನಿರ್ಮಿಸಲಾಗಿದೆ. ಗರ್ಭಗುಡಿ, ದೇವಸ್ಥಾನ, ಸುಸಜ್ಜಿತ ಉದ್ಯಾನವನ, ಮಹಾದ್ವಾರ, ದಾಸೋಹ ಮನೆ, ಅರ್ಚಕರ ಮನೆ, ವಿಶ್ರಾಂತಿ ಗೃಹ, ಕಚೇರಿ ಹೀಗೆ ದಾನಿಗಳು, ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲಾಗುತ್ತಿದೆ. ಇನ್ನೂ ₹25 ಲಕ್ಷಗಳ ಅಗತ್ಯವಿದ್ದು, ಸಚಿವರು, ಸಂಸದರು, ಶಾಸಕರು ಜನಪ್ರತಿನಿಧಿಗಳು, ಭಕ್ತರು ಆರ್ಥಿಕವಾಗಿ ಸ್ಪಂದಿಸಬೇಕು
- - - -15ಕೆಡಿವಿಜಿ1: