ಕನ್ನಡಪ್ರಭ ವಾರ್ತೆ ಕಾರ್ಕಳ
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಂದಳಿಕೆ ಆಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಮಾ.೨೫ರಂದು ನಡೆಯಲಿದೆ.ಮಾ.೨೨ರಂದು ರಾತ್ರಿ ೧೦ ಗಂಟೆಗೆ ಧ್ವಜಾರೋಹಣ, ಮಹಾರಂಗಪೂಜೆ, ಉತ್ಸವ ಬಲಿ ಜರುಗಲಿದೆ. ಮಾ.೨೩ರಂದು ಬೆಳಗ್ಗೆ ೮.೩೦ಕ್ಕೆ ಆರೋಗಣ ಬಲಿ, ಮಧ್ಯಾಹ್ನ ೧ಗಂಟೆಯಿಂದ ಶ್ರೀ ದೇವರ ಸನ್ನಿಧಿಯಿಂದ ಹಸಿರುವಾಣಿ ಹೊರ ಫಲಕಾಣಿಕೆಗಳ ಮಹಾಮೆರವಣಿಗೆಯ ಮೇಳಾರಂಭ, ರಾತ್ರಿ ೯ಕ್ಕೆ ಒರಿ ಬಲಿ ಉತ್ಸವ, ಮಾ.೨೪ರಂದು ಬೆಳಗ್ಗೆ ೯ಕ್ಕೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ, ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೯.೩೦ಕ್ಕೆ ಅಂಬೊಡಿ ಜಾತ್ರೆ, ಅಂಬೊಡಿ ಉತ್ಸವ ಬಲಿ ನಡೆಯಲಿದೆ.ಮಾ.೨೫ರಂದು ನಂದಳಿಕೆ ಆಯನೋತ್ಸವ ಸಿರಿಜಾತ್ರಾ ಮಹೋತ್ಸವ ಜರುಗಲಿದ್ದು, ಬೆಳಗ್ಗೆ ೮ರಿಂದ ಶ್ರೀ ಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ ದಾರಗರ ಚೆನ್ನೆಮಣೆಗಳ ಅಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ೧ ರಿಂದ ರಾತ್ರಿ ೮ರ ವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ ೯ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಡೆಯವರ ಆಗಮನದ ಪರಂಪರಾಗತ ಅದ್ದೂರಿಯ ಮೆರವಣಿಗೆ ರಾತ್ರಿ ೧೦.೩೦ರಿಂದ ಅಯನೋತ್ಸವ ಬಲಿ, ವೈಭವೋಪೇತ ಕೆರೆದೀಪೋತ್ಸವ, ಶ್ರೀ ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ ೧೧ ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಾಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿ ಜಾತ್ರೆ, ಪ್ರಾಚೀನ ವಿಧಿವೈಭವಗಳ ಬೆಳ್ಳಂ ಜಾವ ೪ರಿಂದ ಬ್ರಹ್ಮಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ ಜರುಗಲಿದೆ.
ಮಾ.೨೬ರಂದು ಊರ ಆಯನೋತ್ಸವ, ಮಧ್ಯಾಹ್ನ ೧೧ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಮಾ.೨೭ರಂದು ರಾತ್ರಿ ೮.ಕ್ಕೆ ಬಾಕಿಮಾರು ದೀಪೋತ್ಸವ, ಮಾ.೨೮ರಂದು ಬೆಳಿಗ್ಗೆ ೯ ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, ಮಧ್ಯಾಹ್ನ ೧೧ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ಮೂಡುಸವಾರಿ ಉತ್ಸವ, ಮಾ.೨೯ರಂದು ಶ್ರೀಮನ್ಮಹಾರಥೋತ್ಸವ ಬೆಳಗ್ಗೆ ೭ ರಿಂದ ಶ್ರೀ ದೇವರಿಗೆ ಶತರುದ್ರಾಭಿಷೇಕ, ಬೆಳಗ್ಗೆ೧೧.೪೫ಕ್ಕೆ ರಥಾರೋಹಣ, ಮಧ್ಯಾಹ್ನ ೧ರಿಂದ ಮಹಾಅನ್ನಸಂತರ್ಪಣೆ, ಸಂಜೆ ೬ರಿಂದ ಭೂತರಾಜರಿಗೆ ದಂಡೆ ಬಲಿ ಸೇವೆ, ರಾತ್ರಿ ೮ಕ್ಕೆ ಮಹಾರಥೋತ್ಸವ ಶ್ರೀ ದೇವರ ಬಲಿ ಉತ್ಸವ ಕವಾಟಬಂಧನ. ಮಾ.೩೦ರಂದು ಬೆಳಗ್ಗೆ ೭ಕ್ಕೆ ಕವಾಟೋದ್ಘಾಟನೆ, ಬೆಳಗ್ಗೆ ೧೦.೩೦ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ ೩.೩೦ಕ್ಕೆ ಪಡುಸವಾರಿ, ಅವಭೃತ, ಧ್ವಜಾವರೋಹಣ. ಮಾ.೩೧ ರಂದು ಮಹಾಸಂಪ್ರೋಕ್ಷಣ, ಮಂಗಳ ಮಂತ್ರಾಕ್ಷತೆ ಜರುಗಲಿದೆ ಎಂದು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.